ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಆರ್‌ಸಿಬಿ ಆಟಗಾರರು

ದೆಹಲಿ ಅಂಗಣದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದೆ. ಆರ್‌ಸಿಬಿಗೆ ಹೋಲಿಸಿದರೆ ಡೆಲ್ಲಿ ತಂಡದದ ಸ್ಪಿನ್‌ ವಿಭಾಗ ಬಲಿಷ್ಠವಾಗಿದೆ. ಅನುಭವಿ ಕುಲದೀಪ್ ಯಾದವ್, ವಿಪ್ರಜ್ ನಿಗಮ್ ಜತೆಗೆ ಅಕ್ಷರ್ ಪಟೇಲ್ ಪರಿಣಾಮಕಾರಿ ಎನಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ.

ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಆರ್‌ಸಿಬಿ ಆಟಗಾರರು

Profile Abhilash BC Apr 27, 2025 7:06 AM

ನವದೆಹಲಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಇಂದು(ಭಾನುವಾರ) ರಾತ್ರಿ ಮರುಮುಖಾಮುಖಿ ಆಗಲಿವೆ. ಪಂದ್ಯದ ವಿಜೇತರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕುತೂಹಲವಾಗಿದೆ. ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ ಮತ್ತು ವೇಗಿ ಜೋಶ್‌ ಹ್ಯಾಲ್‌ವುಡ್‌ಗೆ ಈ ಪಂದ್ಯದಲ್ಲಿ ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ಪಡೆಯುವ ಅವಕಾಶವಿದೆ.

9 ಪಂದ್ಯಗಳನ್ನಾಡಿ 392* ರನ್‌ ಬಾರಿಸಿರುವ ವಿರಾಟ್‌ ಕೊಹ್ಲಿ ಅತ್ಯಧಿಕ ರನ್‌ ಗಳಿಕೆಯ ಪಟ್ಟಿಯಲ್ಲಿ ಸದ್ಯ 2 ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ವಿರುದ್ಧದ ಇಂದಿನ ಪಂದ್ಯದಲ್ಲಿ 26 ರನ್‌ ಬಾರಿಸಿದರೆ ಅಗ್ರಸ್ಥಾನಿ ಸಾಯಿ ಸುದರ್ಶನ್‌(417) ಹಿಂದಿಕ್ಕಿ ಆರೆಂಜ್‌ ಕ್ಯಾಪ್‌ ವಶಪಡಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೊಹ್ಲಿ ಆರೆಂಜ್‌ ಕ್ಯಾಪ್‌ ಹೋಲ್ಡರ್‌ ಆಗಿದ್ದರು. ಇದೀಗ ಈ ಆವೃತ್ತಿಯಲ್ಲಿಯೂ ಅವರಿಗೆ ಈ ಕ್ಯಾಪ್‌ ಗೆಲ್ಲುವ ಅವಕಾಶವಿದೆ. ಹಾಲಿ ವರ್ಷ ಕೊಹ್ಲಿ 5 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಮನೆ ಅಂಗಣದಲ್ಲಿಯೂ ಅಬ್ಬರದ ಬ್ಯಾಟಿಂಗ್‌ ನಡೆಸುವ ಸಾಧ್ಯತೆ ಇದೆ.

ಇನ್ನೊಂಡೆದೆ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಒಂದು ವಿಕೆಟ್‌ ಕಿತ್ತರೆ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪರ್ಪಲ್‌ ಕ್ಯಾಪ್‌ ತನ್ನದಾಗಿಸಿಕೊಳ್ಳಲಿದ್ದಾರೆ. ಸದ್ಯ ಪ್ರಸಿದ್ಧ್‌ ಕೃಷ್ಣ ಮತ್ತು ಜೋಶ್‌ ಹ್ಯಾಜಲ್‌ವುಡ್‌ ತಲಾ 16 ವಿಕೆಟ್‌ ಕಿತ್ತಿದ್ದರೂ ಉತ್ತಮ ಎಕಾನಮಿ ಹೊಂದಿರುವ ಕಾರಣ ಪರ್ಪಲ್‌ ಕ್ಯಾಪ್‌ ಪ್ರಸಿದ್ಧ್‌ ಕೃಷ್ಣ ಬಳಿ ಇದೆ.

ಇದೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ (190) ಇನ್ನು 3 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪೀಯುಷ್ ಚಾವ್ಲಾ (192) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ. ಯಜುವೇಂದ್ರ ಚಾಹಲ್ (214) ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2025 Points Table: ಮಳೆಯಿಂದ ಪಂದ್ಯ ರದ್ದುಗೊಂಡರೂ ಅಂಕಪಟ್ಟಿಯಲ್ಲಿ ಮೇಲೇರಿದ ಪಂಜಾಬ್‌

ದೆಹಲಿ ಅಂಗಣದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದೆ. ಆರ್‌ಸಿಬಿಗೆ ಹೋಲಿಸಿದರೆ ಡೆಲ್ಲಿ ತಂಡದದ ಸ್ಪಿನ್‌ ವಿಭಾಗ ಬಲಿಷ್ಠವಾಗಿದೆ. ಅನುಭವಿ ಕುಲದೀಪ್ ಯಾದವ್, ವಿಪ್ರಜ್ ನಿಗಮ್ ಜತೆಗೆ ಅಕ್ಷರ್ ಪಟೇಲ್ ಪರಿಣಾಮಕಾರಿ ಎನಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ.