IPL 2025: 'ಕ್ಯಾಶ್ ರಿಚ್' ಐಪಿಎಲ್‌ನಲ್ಲಿ ಅಂಪೈರ್‌ಗಳಿಗೆ ಸಿಗುವ ವೇತನವೆಷ್ಟು?
ಪ್ರಸಕ್ತ ಐಪಿಎಲ್ 2025ರಲ್ಲಿ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡವೊಂದರ ಎಲ್ಲಾ ಆಡುವ ಆಟಗಾರರು ಪಂದ್ಯವೊಂದಕ್ಕೆ 7.5 ಲಕ್ಷ ರೂ. ಪಂದ್ಯಶುಲ್ಕ ಪಡೆಯುತ್ತಾರೆ. ಈ ವೇತನವು ಆಟಗಾರರಿಗೆ ಅವರ ತಂಡಗಳು ನೀಡುವ ಖರೀದಿ ಮೊತ್ತಕ್ಕೆ ಹೆಚ್ಚುವರಿಯಾಗಿದೆ.


ನವದೆಹಲಿ: ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್(IPL 2025)ನಲ್ಲಿ ಆಟಗಾರರು ಕೋಟಿ ಪಡೆಯುತ್ತಿರುವಾಗ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುವ ಅಂಪೈರ್(umpires salaries)ಗಳಿಗೆ ಎಷ್ಟು ವೇತನ ಸಿಗಲಿದೆ ಎಂಬ ಕುತೂಹವೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಯಾವುದೇ ಕ್ರಿಡೆಯಾದರೂ ಅಲ್ಲಿ ನಿಜವಾಗಿಯೂ ಒತ್ತಡ ಮತ್ತು ಸವಾಲು ಇರುವುದು ಪಂದ್ಯದ ತೀರ್ಪುಗಾರರಿಗೆ. ಇದೀಗ ಹೊಡಿ-ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್‌ನಲ್ಲಿ ಅಂಪೈರ್‌ಗಳು ಪಡೆಯುವ ವೇತನದ ಬಗ್ಗೆ ಮಾಹಿತಿ ಇಲ್ಲಿದೆ.
ಹಾಲಿ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುವ ಫೀಲ್ಡ್(ಮೈದಾನ) ಅಂಪೈರ್‌ಗಳು ಪಂದ್ಯವೊಂದಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಫೋರ್ತ್ ಅಂಪೈರ್ ಪಂದ್ಯವೊಂದಕ್ಕೆ 2 ಲಕ್ಷ ರೂ. ಗಳಿಸುತ್ತಾರೆ.
ಐಪಿಎಲ್ 2025ರಲ್ಲಿ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡವೊಂದರ ಎಲ್ಲಾ ಆಡುವ ಆಟಗಾರರು ಪಂದ್ಯವೊಂದಕ್ಕೆ 7.5 ಲಕ್ಷ ರೂ. ಪಂದ್ಯಶುಲ್ಕ ಪಡೆಯುತ್ತಾರೆ. ಈ ವೇತನವು ಆಟಗಾರರಿಗೆ ಅವರ ತಂಡಗಳು ನೀಡುವ ಖರೀದಿ ಮೊತ್ತಕ್ಕೆ ಹೆಚ್ಚುವರಿಯಾಗಿದೆ.
ಇದನ್ನೂ ಓದಿ IPL 2025: ಪಂಜಾಬ್ ವಿರುದ್ಧದ ಪಂದ್ಯ ರದ್ದಾದ ನಂತರ ಕೆಕೆಆರ್ ಪ್ಲೇ-ಆಫ್ ಅವಕಾಶ ಹೇಗಿದೆ?
ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ, ಅಂಪೈರ್‌ಗಳು ನಾಲ್ಕು ದಿನಗಳ ಪಂದ್ಯಕ್ಕೆ 1.6 ಲಕ್ಷ ರೂ.ಗಳವರೆಗೆ ಗಳಿಸುತ್ತಾರೆ. ಅದು ಅವರ ದರ್ಜೆಗೆ ಅನುಗುಣವಾಗಿ ದಿನಕ್ಕೆ 30,000 ರಿಂದ 40,000 ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ.