ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Beauty Tips: ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆಯ ಟೆನ್ಷನ್ ಬಿಡಿ! ಸಾಸಿವೆ ಎಣ್ಣೆಗೆ ಫುಲ್ ಕೆಲ್ಸ ಕೊಡಿ!

ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ವಯಸ್ಸಾದವರಂತೆ ಕಾಣುತ್ತದೆ. ಬೇಸಗೆಯಲ್ಲಿ ನಾವು ಹೆಚ್ಚೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ತೇವಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ.

ನಿಮ್ಮ ತುಟಿ, ಚರ್ಮ ಮತ್ತು ಕೂದಲಿನ ಆರೈಕೆಗೆ ಇಲ್ಲಿದೆ ಸಿಂಪಲ್ ಪರಿಹಾರ

ಸಾಸಿವೆ ಎಣ್ಣೆ -

Profile
Sushmitha Jain Dec 13, 2025 8:00 AM

ಬೆಂಗಳೂರು: ಈ ಬಾರಿ ಮಳೆ ಜೋರಿದ್ದಂತೆ ಚಳಿರಾಯನ ಆರ್ಭಟವೂ ಜೋರಾಗಿಯೇ ಇದೆ. ಈಗಾಗಲೇ ಚಳಿಯ ಪ್ರಕೋಪಕ್ಕೆ ಜನರು ಗಡ ಗಡ ನಡುಗುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಚರ್ಮದ ಆರೋಗ್ಯವನ್ನು (Skin Care) ಕಾಪಾಡಿಕೊಳ್ಳುವುದು ಅತೀ ಮುಖ್ಯ. ಚಳಿಗಾಲದಲ್ಲಿ(Winter Season) ಚರ್ಮ (Skin Care) ಹಾಗೂ ಕೂದಲಿನ ಆರೈಕೆ (Hair Care) ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ಚರ್ಮವು ನೆರಿಗೆ ಬಿದ್ದು ವಯಸ್ಸಾದವರಂತೆ ಕಾಣುತ್ತದೆ ಹಾಗೂ ಕೂದಲಿನ ಸಮಸ್ಯೆಯೂ ಕಾಡತೊಡಗುತ್ತದೆ. ಬೇಸಗೆಯಲ್ಲಿ ನಾವು ಹೆಚ್ಚೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ತೇವಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು (Beauty Tips) ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನು ಹೇಗೆ ಬಳಸಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.

ನಮ್ಮ ಹಿರಿಯರು ಆ ಕಾಲದಲ್ಲಿ ಸಾಸಿವೆ ಎಣ್ಣೆಯನ್ನು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸುತ್ತಿದ್ದರು. ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವ ಪರಿಪಾಠ ಆ ಕಾಲದಲ್ಲಿತ್ತು. ಚರ್ಮದಲ್ಲಿರುವ ಕಲೆಗಳನ್ನು ನಿವಾರಿಸಲು ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸದೊಂದಿಗೆ ಸೇರಿಸಿಕೊಂಡು ದೇಹಕ್ಕೆ ಹಚ್ಚಿದರೆ ಅದೇ ನ್ಯಾಚುರಲ್ ಸ್ಕಿನ್ ಥೆರಪಿಯಾಗುತ್ತದೆ.

ಚಳಿಗಾಲದಲ್ಲಿ ತುಟಿ ಬಿರುಕು ಬಿಡುತ್ತಾ? ಈ ಮನೆಮದ್ದು ಬಳಸಿ ನೋಡಿ

ಚಳಿಗಾಲದಲ್ಲಿ ಚರ್ಮವು ಒಣಗುವುದು ಹಾಗೂ ಗೆರೆಗಳು ಬಿದ್ದಂತೆ ಆಗುವುದು ಸಾಮಾನ್ಯವಾಗಿದೆ. ಇದಕ್ಕಾಗಿ, ಕೆಲವು ಹನಿ ಸಾಸಿವೆ ಎಣ್ಣೆ ತೆಗೆದುಕೊಂಡು ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ ಮತ್ತು ಅದನ್ನು ಕೆಲ ನಿಮಿಷಗಳವರೆಗೆ ಹಾಗೇ ಬಿಡಿ. ಬಳಿಕ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಚರ್ಮವು ಈಗ ತುಂಬಾ ಮೃಧುವಾಗುತ್ತದೆ ಮತ್ತು ಮೇಕಪ್ ಮಾಡಲು ಅನುಕೂಲವಾಗುತ್ತದೆ.

ಕೂದಲು ರೇಷ್ಮೆಯಂತೆ ಹೊಳೆಯುತ್ತಿರಬೇಕು ಎಂಬುದು ಎಲ್ಲರ ಮನದಾಸೆ. ಸಾಸಿವೆ ಎಣ್ಣೆಯನ್ನು ತಲೆಗೆ ಹಚ್ಚುತ್ತ ಇದ್ದರೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ತಲೆಹೊಟ್ಟು, ಕಿರಿಕಿರಿ ಮತ್ತು ಕೂದಲು ಉದುರುವಿಕೆಯನ್ನು ತಪ್ಪಿಸಬಹುದು. ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆ ಹಚ್ಚಿಕೊಂಡ ಬಳಿಕ ಕೂದಲನ್ನು ಶಾಂಪೂವಿನಿಂದ ಚೆನ್ನಾಗಿ ತೊಳೆಯಿರಿ.

ಸಾಸಿವೆ ಎಣ್ಣೆಯು ಎಂತಹ ನಿರ್ಜೀವ ಕೂದಲಿಗೂ ಹೊಳಪನ್ನು ನೀಡುತ್ತದೆ. ಇದಕ್ಕಾಗಿ ಒಂದು ಟೇಬಲ್ ಚಮಚ ತೆಂಗಿನಎಣ್ಣೆಗೆ ಮೂರು ಟೇಬಲ್ ಚಮಚ ಬಿಸಿ ಸಾಸಿವೆ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಲೇಪಿಸಿ. ತದನಂತರ ಇದನ್ನು 10 ನಿಮಿಷ ನೆನೆಯಲು ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

ಚಳಿಗಾಲದಲ್ಲಿ ದೇಹದ ಪ್ರತಿಯೊಂದು ಭಾಗವನ್ನು ಕಾಪಾಡಿಕೊಳ್ಳುವುದು ಶ್ರಮದಾಯಕವೇ ಸರಿ. ತುಟಿಗಳು ಒಡೆಯುವುದು ಚಳಿಗಾಲದಲ್ಲಿ ಸಾಮಾನ್ಯ. ಇದಕ್ಕಾಗಿ ಕೆಲವು ಹನಿ ಸಾಸಿವೆ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಇದು ಯಾವುದೇ ಆಯಿಟ್ಮೆಂಟ್‌ಗಿಂತ ಉತ್ತಮ.