ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chanakya Niti: ವಧು ಮತ್ತು ವರನ ವಯಸ್ಸು ಎಷ್ಟು ಅಂತರ ಇರಬೇಕು ಗೊತ್ತಾ?; ಈ ಬಗ್ಗೆ ಚಾಣಕ್ಯ ಹೇಳೋದೇನು?

ದಂಪತಿಗಳ ವಯಸ್ಸಿನ ಅಂತರದ ಬಗ್ಗೆ ಇತಿಹಾಸದಲ್ಲೇ ಮಹಾನ್ ವಿದ್ವಾಂಸನಾಗಿ ಖ್ಯಾತರಾಗಿರುವ ಚಾಣಕ್ಯರು ಈ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ವಿವರಿಸಿದ್ದು, ಪತಿ–ಪತ್ನಿಯ ನಡುವೆ ಇರಬೇಕಾದ ವಯಸ್ಸಿನ ಅಂತರದ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳನ್ನು ನೀಡಿದ್ದಾರೆ. ದಾಂಪತ್ಯ ಜೀವನ ಸುಖವಾಗಿರಬೇಕಾದರೆ ವಯಸ್ಸಿನ ವ್ಯತ್ಯಾಸವೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಚಾಣಕ್ಯರು ಅಭಿಪ್ರಾಯಪಡುತ್ತಾರೆ. ವಯಸ್ಸಿನ ಅಂತರ ವೈವಾಹಿಕ ಬದುಕಿನ ಮೇಲೆ ದೊಡ್ಡ ಪ್ರಭಾವ ಬೀರುವುದರಿಂದ ಗಂಡು ಹೆಣ್ಣನ್ನು ಆಯ್ಕೆ ಮಾಡುವಾಗ ವಯಸ್ಸಿನ ಅಂತರ ಎಷ್ಟಿದೆ ಎಂಬುದನ್ನು ಮೊದಲೇ ಗಮನಿಸಬೇಕು.

ದಾಂಪತ್ಯದ ಸುಖಕ್ಕೆ ವಯಸ್ಸಿನ ಅಂತರ ಮುಖ್ಯ.

ಚಾಣಕ್ಯ -

Profile
Sushmitha Jain Jan 13, 2026 7:00 AM

ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಮದುವೆಯನ್ನು (Marriage) ಜನ್ಮಜನ್ಮಾಂತರದ ಪವಿತ್ರ ಬಂಧವೆಂದು ಪರಿಗಣಿಸಲಾಗುತ್ತದೆ. ಇದು ಏಳು ಜನ್ಮಗಳ ತನಕ ಮುಂದುವರಿಯುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ವಿವಾಹದ ಸಂದರ್ಭದಲ್ಲಿ ಸದ್ಗುಣಗಳನ್ನು ಹೊಂದಿದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಸಂಗಾತಿ ಆಯ್ಕೆಯಲ್ಲಿ ಸ್ವಲ್ಪ ತಪ್ಪಾದರೂ ಅದು ಮುಂದಿನ ಸಂಪೂರ್ಣ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಿಂದಿನ ಕಾಲದಲ್ಲಿ ಮದುವೆ ನಿಶ್ಚಯಿಸುವಾಗ ಹುಡುಗ–ಹುಡುಗಿಯ ನಡುವಿನ ವಯಸ್ಸಿನ ಅಂತರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಸಾಮಾನ್ಯವಾಗಿ 5 ರಿಂದ 7 ವರ್ಷಗಳ ಅಂತರವನ್ನು ಸೂಕ್ತವೆಂದು ಕಂಡು, ಗಂಡನು ವಯಸ್ಸಿನಲ್ಲಿ ದೊಡ್ಡವನು, ಹೆಣ್ಣು ಸ್ವಲ್ಪ ಚಿಕ್ಕವಳಾಗಿರಬೇಕು ಎಂಬ ನಂಬಿಕೆ ಪ್ರಚಲಿತದಲ್ಲಿತ್ತು. ಆದರೆ ಕಾಲಕ್ರಮೇಣ ಈ ಪರಂಪರೆ ಕ್ಷೀಣಿಸಿ, ಇಂದಿನ ಸಮಾಜದಲ್ಲಿ ಈ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ.

ದಂಪತಿಗಳ ವಯಸ್ಸಿನ ಅಂತರದ (Age gap) ಬಗ್ಗೆ ಇತಿಹಾಸದಲ್ಲೇ ಮಹಾನ್ ವಿದ್ವಾಂಸನಾಗಿ ಖ್ಯಾತರಾಗಿರುವ ಚಾಣಕ್ಯರು (Chanakya) ಈ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ವಿವರಿಸಿದ್ದು, ಪತಿ–ಪತ್ನಿಯ ನಡುವೆ ಇರಬೇಕಾದ ವಯಸ್ಸಿನ ಅಂತರದ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳನ್ನು ನೀಡಿದ್ದಾರೆ. ಅರ್ಥಶಾಸ್ತ್ರಜ್ಞರೂ ತತ್ವಜ್ಞಾನಿಗಳೂ ಆಗಿರುವ ಇವರ ದೃಢ ಚಿಂತನೆ ಮತ್ತು ಜೀವನ ದರ್ಶನ ಇಂದಿಗೂ ಅಪ್ರತಿಮವಾಗಿದೆ. ಸಮಾಜದಲ್ಲಿ ಸುಖವಾಗಿ ಮತ್ತು ಯಶಸ್ವಿಯಾಗಿ ಬದುಕಲು ಅವರು ಅನೇಕ ಅಮೂಲ್ಯ ಉಪದೇಶಗಳನ್ನು ನೀಡಿದ್ದು, ಈ ಉಪದೇಶಗಳ ಸಮೂಹವನ್ನೇ “ಚಾಣಕ್ಯ ನೀತಿ” ಎಂದು ಕರೆಯಲಾಗುತ್ತದೆ. ಚಾಣಕ್ಯರು ನೀಡಿದ ನೀತಿಗಳು ಇಂದಿಗೂ ನಮ್ಮ ಬದುಕಿಗೆ ದಾರಿ ತೋರಿಸುತ್ತಿದ್ದು, ಅವರ ಪ್ರತಿಯೊಂದು ಜ್ಞಾನವೂ ಮಾನವ ಜೀವನಕ್ಕೆ ಮಾರ್ಗದರ್ಶಕವಾಗಿರುತ್ತದೆ.

ಹಾಗಾದರೆ ಚಾಣಕ್ಯರ ಮಾತಿನಂತೆ ಗಂಡ ಹೆಂಡತಿಯ ನಡುವೆ ಎಷ್ಟು ವಯಸ್ಸಿನ ಅಂತರ ಇದ್ದರೆ ಉತ್ತಮ, ಹೆಚ್ಚು ಏಜ್ ಗ್ಯಾಪ್ ಇದ್ದರೆ ಯಾವ ಯಾವ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಪ್ರೀತಿ, ಮದುವೆಯಲ್ಲಿ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ದಾಂಪತ್ಯ ಜೀವನ ಸುಖವಾಗಿರಬೇಕಾದರೆ ವಯಸ್ಸಿನ ವ್ಯತ್ಯಾಸವೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಚಾಣಕ್ಯರು ಅಭಿಪ್ರಾಯಪಡುತ್ತಾರೆ. ವಯಸ್ಸಿನ ಅಂತರ ವೈವಾಹಿಕ ಬದುಕಿನ ಮೇಲೆ ದೊಡ್ಡ ಪ್ರಭಾವ ಬೀರುವುದರಿಂದ ಗಂಡು ಹೆಣ್ಣನ್ನು ಆಯ್ಕೆ ಮಾಡುವಾಗ ವಯಸ್ಸಿನ ಅಂತರ ಎಷ್ಟಿದೆ ಎಂಬುದನ್ನು ಮೊದಲೇ ಗಮನಿಸಬೇಕು. ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುವ ಸ್ಥಿತಿ ಬರಬಹುದು ಎನ್ನುತ್ತಾರೆ.

Chanakya Niti: ತಪ್ಪಿಯೂ ನಿಮ್ಮ ಜೀವನದ ಈ ಗುಟ್ಟುಗಳನ್ನು ಅನ್ಯರ ಬಳಿ ಹೇಳಿಕೊಳ್ಳಬೇಡಿ; ಆಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಚಾಣಕ್ಯ

ಗಂಡ ಹೆಂಡತಿಯ ವಯಸ್ಸಿನ ಅಂತರದ ಬಗ್ಗೆ ಚಾಣಕ್ಯ ಏನು ಹೇಳುತ್ತಾರೆ?

ಚಾಣಕ್ಯರ ಪ್ರಕಾರ ಗಂಡ ಮತ್ತು ಹೆಂಡತಿಯ ನಡುವೆ ಎಂದಿಗೂ ದೊಡ್ಡ ವಯಸ್ಸಿನ ಅಂತರ ಇರಬಾರದು. ಇದು ಅವರ ನಡುವೆ ತಾತ್ವಿಕ ಭಿನ್ನತೆಗಳಿಗೆ ಕಾರಣವಾಗಬಹುದು, ಇದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಿ ದಂಪತಿಗಳು ದೂರವುಂಟಾಗುವ ಸಾಧ್ಯತೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸ ಕಡಿಮೆ ಇದ್ದಷ್ಟು ಅವರು ಪರಸ್ಪರ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ, ದಾಂಪತ್ಯ ಜೀವನವೂ ಸಂತೋಷಕರವಾಗಿರುತ್ತದೆ.

ಗಂಡ ಹೆಂಡತಿ ನಡುವೆ 3-5 ವರ್ಷಗಳ ಅಂತರ ಇದ್ದರೆ ಸಾಕು:

ಗಂಡ ಹೆಂಡತಿಯ ನಡುವಿನ ಸಂಬಂಧವು ಅತ್ಯಂತ ಪವಿತ್ರವಾದದ್ದು. ಈ ಬಂಧನವನ್ನು ಉಳಿಸಿಕೊಳ್ಳಲು, ಇಬ್ಬರ ನಡುವೆ ಹೊಂದಾಣಿಕೆ ಅಗತ್ಯ. ಆದರೆ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಯೋಚಿಸುವ ವಿಧಾನ, ಮಾತನಾಡುವ ರೀತಿ, ಮನೋಭಾವ ಎಲ್ಲದರಲ್ಲೂ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ನಂತರ ಇದರಿಂದ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ದಾಂಪತ್ಯ ಜೀವನ ಸುಖವಾಗಿರಬೇಕು, ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಇರಬೇಕು ಎಂದಾದರೆ 3 ರಿಂದ 5 ವರ್ಷ ವಯಸ್ಸಿನ ಅಂತರ ಇದ್ದರೆ ಸಮಂಜಸ, ಸಮಾನ ವಯಸ್ಸಿನವರು ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುವುದರಿಂದ, ಇದರಿಂದ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

Chanakya Niti: ಚಾಣಕ್ಯ ನೀತಿಯಲ್ಲಿದೆ ನಮ್ಮ ಜೀವನದ ಯಶಸ್ಸಿನ ಗುಟ್ಟು!

ಗಂಡ ಹೆಂಡತಿಯ ವಯಸ್ಸಿನ ಅಂತರ ಎಷ್ಟಿದ್ದರೆ ಒಳ್ಳೆಯದು?

ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಜಾಸ್ತಿಯಾಗಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಉದಾಹರಣೆಗೆ 20-25 ವರ್ಷದ ಹುಡುಗಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಬಾರದು. ಇಂತಹ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ ಎಂದು ಹೇಳಲಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಗಂಡ ಮತ್ತು ಹೆಂಡತಿಯ ಸಂಬಂಧ ಬಹಳ ಮುಖ್ಯ. ಇಬ್ಬರ ನಡುವೆ ದೊಡ್ಡ ವಯಸ್ಸಿನ ವ್ಯತ್ಯಾಸ ಇದ್ದರೆ, ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ.

ವಯಸ್ಸಿನ ಅಂತರ ಹೆಚ್ಚಿದ್ದರೆ ಏನಾಗುತ್ತದೆ?

ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು: ಚಾಣಕ್ಯ ನೀತಿಯ ಪ್ರಕಾರ, ಪುರುಷ ಮತ್ತು ಮಹಿಳೆಯರ ನಡುವೆ ದೊಡ್ಡ ವಯಸ್ಸಿನ ವ್ಯತ್ಯಾಸ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. 20 ವರ್ಷದ ಹುಡುಗಿ 40 ವರ್ಷದ ಪುರುಷನನ್ನು ಮದುವೆಯಾದರೆ, ಅವರಿಬ್ಬರ ಮನೋಭಾವದಲ್ಲೂ ದೊಡ್ಡ ವ್ಯತ್ಯಾಸ ಇರುತ್ತದೆ. ಅವಳ ಆದ್ಯತೆಗಳು ಸಣ್ಣ ವಿಷಯಗಳ ಕಡೆಗೆ ಕೇಂದ್ರೀಕೃತವಾಗಿರುತ್ತವೆ, ಆದರೆ ಪತಿ ಅವನ್ನು ಲಘುವಾಗಿ ಕಾಣಬಹುದು. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗುತ್ತವೆ.

ಹೊಂದಾಣಿಕೆಯ ಕೊರತೆ: ಆಚಾರ್ಯ ಚಾಣಕ್ಯರ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ ತುಂಬಾ ಹೆಚ್ಚಿದ್ದರೆ, ಅವರ ನಡುವೆ ಹೊಂದಾಣಿಕೆ ಕಡಿಮೆಯಾಗುತ್ತದೆ. ಉದಾಹರಣೆಗೆ, 40 ವರ್ಷಕ್ಕಿಂತ ಮೇಲ್ಪಟ್ಟ ಗಂಡನು ತನ್ನ ಜೀವನವನ್ನು ಬಹಳ ಪ್ರಾಯೋಗಿಕವಾಗಿ ನೋಡುತ್ತಾನೆ. ಹೆಂಡತಿ 20 ರಿಂದ 25 ವರ್ಷದವಳಾಗಿದ್ದರೆ, ಅವಳು ಪ್ರಾಯೋಗಿಕವಾಗಿ ಯೋಚಿಸುವುದಕ್ಕಿಂತ ಭಾವನಾತ್ಮಕವಾಗಿ ಹೆಚ್ಚು ಯೋಚಿಸುತ್ತಾಳೆ, ಇದು ಅವರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ.