ʻಕೂಲಿʼ ಡೈರೆಕ್ಟರ್ ಲೋಕೇಶ್ ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್; ಅಭಿಮಾನಿಗಳಿಗೆ ಸದ್ದಿಲ್ಲದೇ ಸಂಕ್ರಾಂತಿ ಬೆಲ್ಲ ತಿನ್ನಿಸಿದ ʻಐಕಾನ್ ಸ್ಟಾರ್ʼ!
AA23 Announcement: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ #AA23 ಅಧಿಕೃತವಾಗಿ ಘೋಷಣೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯೋಗವಾಗಿ ಬಿಡುಗಡೆಯಾದ ಅನಿಮೇಷನ್ ಮೋಷನ್ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
-
ಪುಷ್ಪ ಹೀರೋ ಅಲ್ಲು ಅರ್ಜುನ್ ಮತ್ತು ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ತಯಾರಾಗಲಿದೆ ಎಂದು ಕಳೆದ ಕೆಲ ದಿನಗಳಿಂದ ಸುದ್ದಿಗಳು ಹರಿದಾಡುತ್ತಿತ್ತು. ಪ್ರಸ್ತುತ ಅಟ್ಲಿ ಕುಮಾರ್ ಜೊತೆ ಸಿನಿಮಾ ಮಾಡುತ್ತಿರುವ ಅಲ್ಲು ಅರ್ಜುನ್, ಮತ್ತೊಮ್ಮೆ ತಮಿಳು ನಿರ್ದೇಶಕನಿಗೆ ಚಾನ್ಸ್ ನೀಡುತ್ತಿದ್ದಾರೆ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದವು. ಆ ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ಇದೀಗ ಈ ವಿಷಯವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮತ್ತೆ ತಮಿಳು ನಿರ್ದೇಶಕರಿಗೆ ಅಲ್ಲು ಅರ್ಜುನ್ ಚಾನ್ಸ್ ಕೊಟ್ಟಿದ್ದಾರೆ.
ದೊಡ್ಡ ಬಜೆಟ್‌ನ ಸಿನಿಮಾ ಘೋಷಣೆ
ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಘೋಷಿಸಿದೆ. ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದು, ಭಾರತೀಯ ಚಿತ್ರರಂಗದಲ್ಲಿ ಶಾಶ್ವತವಾಗಿ ನೆನಪುಳಿಯುವಂತಹ ಜೋಡಿ ಇದಾಗಲಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ #AALoki #AA23 #LK7 ಎಂಬ ವರ್ಕಿಂಗ್ ಟೈಟಲ್‌ಗಳೊಂದಿಗೆ ಈ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ.
ಇಂಟರೆಸ್ಟಿಂಗ್ ಆಗಿರುವ ಮೋಷನ್ ಪೋಸ್ಟರ್
ಅನಿರುದ್ಧ್ ಅವರ ಹಿನ್ನೆಲೆ ಸಂಗೀತದೊಂದಿಗೆ ರೂಪಿಸಲಾದ #AA23 ಅನೌನ್ಸ್‌ಮೆಂಟ್ ವಿಡಿಯೋ ಇಂಟರೆಸ್ಟಿಂಗ್ ಆಗಿದ್ದು, ಇದರಲ್ಲಿ ವಿವಿಧ ಪ್ರಾಣಿ, ಪಕ್ಷಿಗಳನ್ನು ತೋರಿಸುತ್ತಾ, ಅನಿಮೇಷನ್ ಮೂಲಕ ಅಲ್ಲು ಅರ್ಜುನ್ ಅವರ ಕಣ್ಣುಗಳನ್ನು ತೋರಿಸಲಾಗಿದೆ. ಈ ವರ್ಷವೇ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.
ಅಲ್ಲು ಅರ್ಜುನ್ ಏನಂದ್ರು?
ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್, "ನನ್ನ 23ನೇ ಸಿನಿಮಾಗಾಗಿ ನಾನು ಉತ್ಸಾಹದಿಂದ ಮುನ್ನಡೆಯುತ್ತಿದ್ದೇನೆ. ಲೋಕಿ-ಜಿ ಲಾಕ್ ಮಾಡಿದ್ದಾರೆ. ಅದು ಮಾತ್ರ ಗ್ಯಾರಂಟಿ! ಮ್ಯಾವರಿಕ್ ಡೈರೆಕ್ಟರ್ ಲೋಕೇಶ್ ಅವರೊಂದಿಗಿನ ಈ ಹೊಸ ಪಯಣದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದೇನೆ. ಕೊನೆಗೂ ನನ್ನ ಸಹೋದರ ಅನಿರುದ್ಧ್ ಜೊತೆ ಕೆಲಸ ಮಾಡುತ್ತಿದ್ದೇನೆ. ಈ ಸಿನಿಮಾಗಾಗಿ ಆಸಕ್ತಿಯಿಂದ ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಣೆ
A Collaboration that will be Eternal in Indian Cinema 🤘🏻🔥💥
— Mythri Movie Makers (@MythriOfficial) January 14, 2026
Icon Star @alluarjun X @Dir_Lokesh X @MythriOfficial X @anirudhofficial
STRIVE FOR GREATNESS🔥
▶️ https://t.co/AGCi8q89x2
Shoot begins in 2026 💥#AALoki #AA23 #LK7 pic.twitter.com/op2vnureqp
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೇಶ್ ಕನಕರಾಜ್, "#AALoki.. ಬೆಸ್ಟ್ ಸಿನಿಮಾದೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇನೆ. ನಿಮ್ಮೊಂದಿಗೆ ಈ ಪಯಣ ಆರಂಭಿಸಲು ಕುತೂಹಲದಿಂದ ಕಾಯುತ್ತಿದ್ದೇನೆ ಅಲ್ಲು ಅರ್ಜುನ್ ಸರ್. ಇದನ್ನೊಂದು ಮ್ಯಾಸಿವ್ ಬ್ಲಾಸ್ಟ್ ಮಾಡೋಣ. ಮತ್ತೊಮ್ಮೆ ನನ್ನ ಸಹೋದರ ಅನಿರುದ್ಧ್ ಜೊತೆ ಕೆಲಸ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಅಟ್ಲಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ಬ್ಯುಸಿ
ಸದ್ಯ ಅಲ್ಲು ಅರ್ಜುನ್ ಅವರು ಅಟ್ಲಿ ನಿರ್ದೇಶನದ #AA22xA6 ಸಿನಿಮಾ ಮಾಡುತ್ತಿದ್ದಾರೆ. ಸೈನ್ಸ್ ಫಿಕ್ಷನ್ ಜಾನರ್‌ನ ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ಸಂಸ್ಥೆ ಭಾರೀ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರ ನಂತರ ಅಲ್ಲು ಅರ್ಜುನ್ ಯಾವ ನಿರ್ದೇಶಕನ ಜೊತೆ ಕೆಲಸ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಲೋಕೇಶ್ ಜೊತೆ ಅವರ ಮುಂದಿನ ಸಿನಿಮಾ ಎಂಬುದು ಖಚಿತವಾಗಿದೆ.