ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chiranjeevi: ಎರಡೇ ದಿನಕ್ಕೆ ಶತಕೋಟಿ ಕ್ಲಬ್‌ಗೆ ಸೇರಿಕೊಂಡ ʻಮನ ಶಂಕರ ವರ ಪ್ರಸಾದ್‌ ಗಾರುʼ; ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟಾಯ್ತು ಕಲೆಕ್ಷನ್?

Mana Shankara Vara Prasada Garu Collection: 'ಮೆಗಾ ಸ್ಟಾರ್' ಚಿರಂಜೀವಿ ಮತ್ತು ನಯನತಾರಾ ಅಭಿನಯದ 'ಮನ ಶಂಕರ ವರ ಪ್ರಸಾದ್‌ ಗಾರು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಈ ಚಿತ್ರವು ವಿಶ್ವಾದ್ಯಂತ ₹120 ಕೋಟಿ ಗಳಿಸಿ ಶತಕೋಟಿ ಕ್ಲಬ್ ಸೇರಿದೆ.

'ಮನ ಶಂಕರ ವರ ಪ್ರಸಾದ್‌ ಗಾರು' ಅಬ್ಬರ; ಎರಡೇ ದಿನಕ್ಕೆ 120 ಕೋಟಿ ಕಲೆಕ್ಷನ್!

-

Avinash GR
Avinash GR Jan 14, 2026 12:25 PM

ʻಮೆಗಾ ಸ್ಟಾರ್‌ʼ ಚಿರಂಜೀವಿ, ನಯನತಾರಾ ನಟನೆಯ ʻಮನ ಶಂಕರ್ ವರ ಪ್ರಸಾದ್‌ ಗಾರುʼ ಸಿನಿಮಾವು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಸಿಂಪಲ್‌ ಕಥೆಗೆ ಮಸ್ತ್‌ ಮಸಾಲಾ ಬೆರೆಸಿ, ಫ್ಯಾಮಿಲಿ ಆಡಿಯೆನ್ಸ್‌ನ ಥಿಯೇಟರ್‌ಗೆ ಕರೆಸಿಕೊಳ್ಳುವಲ್ಲಿ ನಿರ್ದೇಶಕ ಅನಿಲ್‌ ರವಿಪುಡಿ ಮತ್ತೊಮ್ಮೆ ಗೆದ್ದಿದ್ದಾರೆ. 150 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಆಗಲೇ ಗೆಲುವಿನ ಸನಿಹಕ್ಕೆ ಹೆಜ್ಜೆ ಇಟ್ಟಿದೆ.

ಎಷ್ಟಾಯ್ತು ಎರಡು ದಿನಗಳ ಗಳಿಕೆ?

ʻಮನ ಶಂಕರ್ ವರ ಪ್ರಸಾದ್‌ ಗಾರುʼ ಸಿನಿಮಾವು ಎರಡೇ ದಿನಕ್ಕೆ ಬರೋಬ್ಬರಿ 120 ಕೋಟಿ ರೂ. ಕಮಾಯಿ ಮಾಡಿದೆ. ಚಿತ್ರತಂಡದವೇ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದು, ಎರಡೇ ದಿನಕ್ಕೆ ಈ ಚಿತ್ರವು ಶತಕೋಟಿ ಕ್ಲಬ್‌ ಸೇರಿಕೊಂಡಿದೆ. ಮೊದಲ ದಿನ ವಿಶ್ವಾದ್ಯಂತ ಸುಮಾರು 84 ಕೋಟಿ ರೂ. ಬಾಚಿಕೊಂಡಿದ್ದ ಈ ಚಿತ್ರವು ಎರಡನೇ ದಿನ 36 ಕೋಟಿ ರೂ. ಗಳಿಸಿದೆ. ಇಂದಿನಿಂದ ಸಂಕ್ರಾಂತಿ ರಜೆ ಸಿಗಲಿದ್ದು, ಲಾಂಗ್‌ ವೀಕೆಂಡ್‌ ಸಿಗಲಿದೆ. ಹಾಗಾಗಿ, ಕಲೆಕ್ಷನ್‌ನಲ್ಲಿ ವಿಪರೀತ ಏರಿಕೆ ಆಗುವ ನಿರೀಕ್ಷೆ ಇದೆ. ಈ ವಾರ ಮುಗಿಯುವುದರೊಳಗೆ 250+ ಕೋಟಿ ರೂ. ಗಳಿಕೆ ಮಾಡಿದರೂ ಅಚ್ಚರಿ ಎನ್ನಲಾಗುತ್ತಿದೆ.

Mana Shankara Vara Prasad Garu: ʻಕಿಚ್ಚʼ ಸುದೀಪ್ ರೀತಿಯಲ್ಲೇ ತಂತ್ರ ಮಾಡಿ ಗೆದ್ದುಬಿಟ್ಟ ʻಮೆಗಾ ಸ್ಟಾರ್‌ʼ ಚಿರಂಜೀವಿ! ಅದು ಹೇಗೆ?

ಮೂಲಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರದ ಟಿಕೆಟ್‌ಗಳು ಭರ್ಜರಿ ಸೇಲ್‌ ಆಗಿದ್ದು, ಸುಮಾರು 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ ಎಂದು ಹೇಳಲಾಗಿದೆ. ಚಿತ್ರಮಂದಿರಗಳ ಆಕ್ಯುಪೆನ್ಸಿ ಮಂಗಳವಾರದಂದು (ಜ.13) ಒಟ್ಟಾರೆಯಾಗಿ ಶೇ. 54.85 ರಷ್ಟು ದಾಖಲಿಸಿದೆ. ವಾರದ ದಿನಗಳಲ್ಲಿ ಹೋಲಿಸಿದರೆ ಇದು ಉತ್ತಮ ಎನ್ನಬಹುದು.

ಇನ್ನು, ಬೆಳಗಿನ ಪ್ರದರ್ಶನಗಳು ಶೇ. 32.61 ರಷ್ಟು ಭರ್ತಿಯಾದರೆ, ಮಧ್ಯಾಹ್ನದ ಪ್ರದರ್ಶನಗಳಲ್ಲಿ ಉತ್ತಮ ಚೇತರಿಕೆ ಕಂಡುಬಂದು ಶೇ. 53.60 ಕ್ಕೆ ತಲುಪಿತ್ತು. ಸಂಜೆಯ ಪ್ರದರ್ಶನಗಳು ಶೇ. 65.14 ರಷ್ಟಿದ್ದರೆ, ರಾತ್ರಿ ಪ್ರದರ್ಶನಗಳು ಅತ್ಯುತ್ತಮವಾಗಿದ್ದು ಶೇ. 68.03 ರಷ್ಟು ಆಕ್ಯುಪೆನ್ಸಿ ಕಂಡಿವೆ.

ಚಿರಂಜೀವಿ ಸಿನಿಮಾಕ್ಕೂ ದ್ವೇಷಿಗಳಿದ್ದಾರಾ? ʻಡೆವಿಲ್‌ʼ, ʻಮಾರ್ಕ್‌ʼ, ʻ45ʼ ಹಾದಿಯನ್ನೇ ತುಳಿದ ʻಮನ ಶಂಕರ ವರಪ್ರಸಾದ್‌ ಗಾರುʼ!

ಈ ಬಾರಿಯ ಸಂಕ್ರಾಂತಿ ಹಬ್ಬದ ಅತಿದೊಡ್ಡ ಸಿನಿಮಾವಾಗಿ ಹೊರಹೊಮ್ಮಿರುವ ಈ ಚಿತ್ರದ ಅಬ್ಬರ ಹೀಗೆ ಮುಂದುವರಿಯುವ ನಿರೀಕ್ಷೆಯಿದೆ. ಚಿತ್ರದಲ್ಲಿ ನಯನತಾರಾ, ಕ್ಯಾಥರೀನ್ ತ್ರೆಸಾ, ಸಚಿನ್ ಖೇಡೇಕರ್, ಜರೀನಾ ವಹಾಬ್ ಮತ್ತು ಹರ್ಷವರ್ಧನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರತಂಡದ ಅಧಿಕೃತ ಘೋಷಣೆ

ವಿಕ್ಟರಿ ವೆಂಕಟೇಶ್‌ ಅವರು ವೆಂಕಿ ಗೌಡ ಪಾತ್ರದಲ್ಲಿ ರಂಜಿಸಿದ್ದಾರೆ. 'ಮನ ಶಂಕರ ವರಪ್ರಸಾದ್ ಗಾರು' ಚಿತ್ರವನ್ನು ಶೈನ್ ಸ್ಕ್ರೀನ್ಸ್ ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್ಮೆಂಟ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿದ್ದು, ಭೀಮ್ಸ್ ಸಿಸಿರೋಲಿಯೊ ಸಂಗೀತ ಸಂಯೋಜನೆ ಮಾಡಿದ್ದಾರೆ.