Actor Darshan: ನಿಮ್ಮ ಡಿ ಬಾಸ್ ಮಾನಸಿಕವಾಗಿ ಸ್ಟ್ರಾಂಗ್ ಇದ್ದಾರೆ; ದೊಡ್ಡ ಅಪ್ಡೇಟ್ ಕೊಟ್ಟ ವಿಜಯಲಕ್ಷ್ಮೀ
Dhanveerrah Hayagreeva: ಮಂಡ್ಯದಲ್ಲಿ ನಡೆದ ಧನ್ವೀರ್ ನಟಿಸಿದ 'ಹಯಗ್ರೀವ' ಸಿನಿಮಾ ಇವೆಂಟ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಮಗ ವಿನೀಶ್ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಅಪ್‌ಡೇಟ್ ಕೊಟ್ಟಿದ್ದಾರೆ. ಇದನ್ನು ಕೇಳಿ ದರ್ಶನ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಟ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ವದಂತಿಗಳಿಗೆ (Gossip) ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ನಟ ದರ್ಶನ್ -
ಮಂಡ್ಯದಲ್ಲಿ ನಡೆದ ಧನ್ವೀರ್ ನಟಿಸಿದ 'ಹಯಗ್ರೀವ' (Dhanveerrah Hayagreeva) ಸಿನಿಮಾ ಇವೆಂಟ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ (vijayalakshmi darshan) ಹಾಗೂ ಮಗ ವಿನೀಶ್ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ವಿಜಯಲಕ್ಷ್ಮಿ ದರ್ಶನ್ (Darshan) ಅವರು ಅಪ್‌ಡೇಟ್ ಕೊಟ್ಟಿದ್ದಾರೆ. ಇದನ್ನು ಕೇಳಿ ದರ್ಶನ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಟ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ವದಂತಿಗಳಿಗೆ (Gossip) ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಧನ್ವೀರ್ ನಟನೆಯ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಅವರು ಮಾತನಾಡಿ, ದರ್ಶನ್ ಫ್ಯಾನ್ಸ್ಗೆ ಖುಷಿ ಸುದ್ದಿ ಕೊಟ್ಟಿದ್ದಾರೆ.
ಇದನ್ನೂ ಓದಿ: KHxRK reunion: ರಜನಿಕಾಂತ್ - ಕಮಲ್ ಚಿತ್ರದ ಪ್ರೋಮೊ ಔಟ್! ಇವರದ್ದೇ ಡೈರೆಕ್ಷನ್
ಕುಟುಂಬದವರು ಇದ್ದಂತೆ
ಹಯಗ್ರೀವ ಸಿನಿಮಾದಲ್ಲಿ ನಟಿಸಿರುವ ಧನ್ವೀರ್, ಸಂಜನಾಗೆ ಒಳ್ಳೆದಾಗಲಿ ಟ್ರೈಲರ್ ನೋಡಿದೆ. ಆಕ್ಷನ್ ಫ್ಯಾಕ್ಡ್ ಮೂವಿ ಅನಿಸುತ್ತೆ.ಸಂಜನಾ ಅವರಿಗೆ ಒಳ್ಳೆಯದಾಗಲಿ.ಧನ್ವೀರ್ ಅವರು ಹೊರಗಿನವರು ಅಂತ ನಮಗೆ ಅನಿಸೋದೇ ಇಲ್ಲ. ನನಗಾಗಲಿ, ದರ್ಶನ್ ಅವರಿಗಾಗಲಿ ಅವರು ಕುಟುಂಬದವರು ಇದ್ದಂತೆ. ಅವರು ನಮ್ಮ ಕುಟುಂಬದಲ್ಲಿ ಒಬ್ಬ ಸದಸ್ಯ ಅಂತ ಪರಿಗಣಿಸಿದ್ದೇವೆ. ನಮಗೆ ಎಷ್ಟು ಪ್ರೀತಿ ಹಾಗೂ ಬೆಂಬಲ ನೀಡುತ್ತಿರೋ ಅವರಿಗೆ ಪ್ರೀತಿ ಹಾಗೂ ಬೆಂಬಲ ತೋರಿಸಿ ಎಂದರು.
ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್ ಆಗಿ ಇದ್ದಾರೆ
ಇದೇ ವೇಳೆ ದರ್ಶನ್ ಕುರಿತು ಮಾತನಾಡಿ, ನಿಮ್ಮ ಡಿ ಬಾಸ್ ಪರ್ವಾಗಿಲ್ಲ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ನೋವಿನಲ್ಲೂ ಅವರು ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್ ಆಗಿ ಇದ್ದಾರೆ. ಅದಕ್ಕೆ ಕಾರಣ ನೀವುಗಳು. ನೀವೆಲ್ಲ ಅವರೊಂದಿಗೆ ಇದೀರಾ ಎಂದು ಅವರು ತುಂಬಾನೇ ಧೈರ್ಯದಿಂದ ಇದ್ದಾರೆ. ಇದೇ ರೀತಿ ನಮ್ಮ ಮೇಲೆ ಸದಾ ಪ್ರೀತಿ ಇರಲಿ ಎಂದರು.
ಇತ್ತೀಚಿನ ಸಂದರ್ಶನಗಳಲ್ಲಿ ಧನ್ವೀರ್ ಹೇಳಿದ್ದೇನು?
ಧನ್ವೀರ್ ಮಾತನಾಡಿ, ದರ್ಶನ್ ಪರ ಯಾರೂ ಬರಲಿಲ್ಲ. ವಿನೀಶ್ ನೋಡುವುದಕ್ಕೆ ಹಾಗೆ ಅನಿಸುತ್ತೆ. ಆ ಹುಡುಗನಿಗೆ ತುಂಬಾನೇ ಮೆಚ್ಯೂರಿಟಿ ಇದೆ. ಮಾತನಾಡುವಾಗ ತೂಕವಾಗಿ ಮಾತಾಡ್ತಾನೆ. ಎಲ್ಲಿ ಏನೂ ಮಾತನಾಡಬೇಕು ಅಲ್ಲಿ ಮಾತಾಡ್ತಾನೆ. ಶತ್ರುಗಳಿಗೂ ಆ ಸಂದರ್ಭ ಬರಬಾರದು. ಮೊನ್ನೆ ಜೈಲಿನಲ್ಲಿ ಇಬ್ಬರೂ ನೋಡಿ ಬೇಜಾರಾಯ್ತು. ಎಲ್ಲರಿಗೂ ಫ್ಯಾಮಿಲಿ ಇರತ್ತೆ ಎಂದರು. , ಯಾರೆಲ್ಲ ಪರ್ಸನಲ್ ಟಾರ್ಗೆಟ್ ಮಾಡಿ, ಏನೇನು ಮಾಡುತ್ತಾರೋ ಮಾಡಲಿ. ಕಾಲ ಹೀಗೆ ಇರುವುದಿಲ್ಲ. ಅವರಿಗೂ ಮಕ್ಕಳು ಇರುತ್ತಾರೆ. ಅವರಿಗೂ ಫ್ಯಾಮಿಲಿ ಇರುತ್ತೆ ಎಂದಿದ್ದರು. ಕೆಲವರು ದರ್ಶನ್ ಮಾನಸಿಕವಾಗಿ ಕುಗಿದ್ದರು ಎಂಬ ಸುಳ್ಳು ಸುದ್ದಿ ವೈರಲ್ ಮಾಡಿದ್ದರು.
ಇದನ್ನೂ ಓದಿ: Actor Darshan: ಯಾವ ಶತ್ರುವಿಗೂ ಬೇಡ; ದರ್ಶನ್ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!
‘ಹಯಗ್ರೀವ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ ಇನ್ನು, ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.