ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs IRE ಮೊದಲನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

IND vs IRE: ಐರ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯ ಜೂನ್‌ 26 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಆಯ್ಕೆ ಮಾಡಿದ್ದಾರೆ. ಆದರೆ, ಅವರು ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಅವರನ್ನು ಕೈಬಿಟ್ಟಿದ್ದಾರೆ.

ಮೊದಲನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಚೋಪ್ರಾ!

ಮೊದಲನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XI ಹೆಸರಿಸಿದ ಆಕಾಶ್‌ ಚೋಪ್ರಾ. -

Profile
Ramesh Kote Jun 26, 2026 5:08 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರಲ್ಲಿ (IPL 2026) ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದ 15ರ ವಯಸ್ಸಿನ ವೈಭವ್‌ ಸೂರ್ಯವಂಶಿ (Vaibhav Sooryavanshi) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಜೂನ್‌ 26 ರಂದು ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್‌ ವಿರುದ್ಧ ನಡೆಯಲಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಕಣಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ಇದರ ನಡುವೆ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash Chopra), ಭಾರತ ತಂಡದ ಪ್ಲೇಯಿಂಗ್‌ Xi ಆರಿಸಿದ್ದಾರೆ. ಆದರರ, ಅವರು ವೈಭವ್‌ ಸೂರ್ಯವಂಶಿ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಅವರು 2026ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು 16 ಪಂದ್ಯಗಳಿಂದ 776 ರನ್‌ಗಳನ್ನು ಸಿಡಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದರು. ಇದೀಗ ಅದೇ ಲಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಆದರೆ, ಭಾರತ ತಂಡದಲ್ಲಿ ಈಗಾಗಲೇ ನೆಲೆ ಕಂಡುಕೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಇದ್ದಾರೆ. ಹಾಗಾಗಿ ವೈಭವ್‌ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ.

ಅದರಂತೆ ಆಕಾಶ್‌ ಚೋಪ್ರಾ, ತಮ್ಮ ನೆಚ್ಚಿನ ಪ್ಲೇಯಿಂಗ್‌ XIನಲ್ಲಿ ವೈಭವ್‌ ಸೂರ್ಯವಂಶಿಗೆ ಸ್ಥಾನವನ್ನು ನೀಡಿಲ್ಲ ಹಾಗೂ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಅವರನ್ನು ಆರಿಸಿದ್ದಾರೆ. ಮೂರನೇ ಕ್ರಮಾಂಕಕ್ಕೆ ಇಶಾನ್‌ ಕಿಶನ್‌ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಆರಿಸಿದ್ದಾರೆ.

ʻಸಿಂಹಗಳಂತೆ ಆಡೋಣʼ: ಮೊದಲನೇ ಟಿ20ಐಗೂ ಮುನ್ನ ಆಟಗಾರರಿಗೆ ಶ್ರೇಯಸ್‌ ಅಯ್ಯರ್‌ ಸಲಹೆ!

ನಂತರದ ಕ್ರಮಾಂಕಕ್ಕೆ ತಿಲಕ್‌ ವರ್ಮಾ ಅವರನ್ನು ಆರಿಸಿದ ಚೋಪ್ರಾ, ಶಿವಂ ದುಬೇ, ಅಕ್ಷರ್‌ ಪಟೇಲ್‌ ಹಾಗೂ ಹರ್ಷಿತ್‌ ರಾಣಾ ಸೇರಿದಂತೆ ಆಲ್‌ರೌಂಡರ್‌ಗಳಾಗಿ ಆಯ್ಕೆ ಮಾಡಿದ್ದಾರೆ. ಅರ್ಷದೀಪ್‌ ಸಿಂಗ್‌ ಹಾಗೂ ಪ್ರಸಿಧ್‌ ಕೃಷ್ಣ ಅವರನ್ನು ವೇಗದ ಬೌಲರ್‌ಗಳಾಗಿ ಸ್ಥಾನ ಪಡೆದರೆ, ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ರವಿ ಬಿಷ್ಣೋಯ್‌ ಸ್ಥಾನ ಪಡೆದಿದ್ದಾರೆ.

ಐರ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯಕ್ಕೆ ಆಕಾಶ್‌ ಚೋಪ್ರಾರ ಭಾರತದ ಪ್ಲೇಯಿಂಗ್‌ XI

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿಧ್‌ ಕೃಷ್ಣ, ರವಿ ಬಿಷ್ಣೋಯ್

ವೈಭವ್‌ಗೆ ಏಕೆ ಚಾನ್ಸ್‌ ಇಲ್ಲ?

ಮೊದಲ ಟಿ20 ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪದಾರ್ಪಣಿಗೆ ಇನ್ನೂ ಸ್ವಲ್ಪ ಕಾಯಬೇಕಾಗಬಹುದು ಎಂದು ಹೇಳಿದ್ದಾರೆ.

ವೈಭವ್‌ಗೆ ಖಂಡಿತವಾಗಿಯೂ ಭಾರತ ಪರ ಆಡುವ ಅವಕಾಶ ಸಿಗುತ್ತದೆ. ಆದರೆ ಕೇವಲ ಅವರಿಗೆ ಅವಕಾಶ ನೀಡುವ ಉದ್ದೇಶದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ತಂಡದಿಂದ ಕೈಬಿಡುವುದು ಸರಿಯಲ್ಲ ಎಂದು ಕೋಟಕ್ ಸ್ಪಷ್ಟಪಡಿಸಿದರು.

ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಅಭ್ಯಾಸದ ವಿಡಿಯೊ ಹಂಚಿಕೊಂಡ ಬಿಸಿಸಿಐ

"ವೈಭವ್‌ಗೆ ಅವರ ಅರ್ಹತೆಗೆ ತಕ್ಕ ಅವಕಾಶ ಖಂಡಿತ ಸಿಗುತ್ತದೆ ಎಂಬ ವಿಶ್ವಾಸವಿದೆ. ಆದರೆ ಅವರಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಈಗಾಗಲೇ ನಿರಂತರವಾಗಿ ರನ್ ಗಳಿಸುತ್ತಿರುವ ಆಟಗಾರರನ್ನು ಕೈಬಿಡುವುದು ನ್ಯಾಯಸಮ್ಮತವಾಗುವುದಿಲ್ಲ. ಈ ಪಂದ್ಯದಲ್ಲಿ ನಾವು ಯಾವ ರೀತಿಯ ತಂಡವನ್ನು ಕಣಕ್ಕಿಳಿಸಬೇಕು ಎಂಬುದು ತಂಡದ ಆಡಳಿತ ಮಂಡಳಿಯ ಯೋಜನೆ ಮೇಲೆ ಅವಲಂಬಿತವಾಗಿದೆ. ಅದು ಬೇರೆ ವಿಷಯ. ಆದರೆ ಒಬ್ಬ ಆಟಗಾರನಿಗೆ ಅವಕಾಶ ನೀಡುವ ಪ್ರಯತ್ನದಲ್ಲಿ ಮತ್ತೊಬ್ಬ ಆಟಗಾರನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಈ ಎರಡರ ನಡುವಿನ ಸಮತೋಲನ ಕಾಪಾಡುವುದು ಅಗತ್ಯ," ಎಂದು ಕೋಟಕ್ ತಿಳಿಸಿದ್ದಾರೆ.