ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಗೌತಮ್‌ಗೆ ಇದೇನಾಯ್ತು? ಕೆಡಿಗೆ ಶಕುಂತಲಾ ತಿರುಮಂತ್ರ?

Amruthadhaare Serial: ಇನ್ನೊಂದು ಕಡೆ ಶಕುಂತಲಾ ನಡೆಯೂ ವೀಕ್ಷಕರಿಗೆ ಅನುಮಾನ ಸೃಷ್ಟಿಸಿದೆ. ಪೂರ್ಣ ಆಸ್ತಿಗಾಗಿ ಮಗನಿಂದ ಕೆಲವು ಸಹಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಮೊದಲಿಗೆ ಕೆಡಿ ಜಯದೇವ್‌ ಸಹಿ ಹಾಕೊಲ್ಲ ಎಂದಿದ್ದಾನೆ. ಆದರೆ ಏಕಾಏಕಿ ಅಮ್ಮನ ಮಾತನ್ನು ನಂಬಿ ತನ್ನ ಬಳಿ ಇರುವ ಆಸ್ತಿಯನ್ನು ಬರೆದುಕೊಟ್ಟಿದ್ದಾಳೆ. ಈ ನಡೆಯನ್ನು ಕಂಡು ವೀಕ್ಷಕರು ಶಕುಂತಲಾ ಬದಲಾಗಿರಬೇಕು. ಮಗನ ಮುಂದೆ ನಾಟಕ ಮಾಡುತ್ತಿದ್ದಾಳೇನೋ ಅಂತ ಕಮೆಂಟ್‌ ಕೂಡ ಮಾಡುತ್ತಿದ್ದಾರೆ.

Amruthadhaare: ಗೌತಮ್‌ಗೆ ಇದೇನಾಯ್ತು? ಕೆಡಿಗೆ ಶಕುಂತಲಾ ತಿರುಮಂತ್ರ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 9, 2026 9:44 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಗೌತಮ್‌ಗೆ ಅನಾರೋಗ್ಯದ ಸಮಸ್ಯೆ ಎದುರಾದರೆ ಇನ್ನೊಂದು ಕಡೆ ಶಕುಂತಲಾಗೆ (Shakuntala) ಆಸ್ತಿಯ ಬಗ್ಗೆ ಯೇ ಯೋಚನೆ. ವೈದ್ಯರು ಗೌತಮ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಗೌತಮ್‌ ಜತೆಗೆ ಮಾತನಾಡಬೇಕು ಎಂದಿದ್ದಾರೆ. ಇದು ಭೂಮಿಕಾಗೆ (Bhoomika) ಸಂಶಯ ಬರುವಂತೆ ಮಾಡಿದೆ, ಗೌತಮ್‌ ರಿಪೋರ್ಟ್‌ನಲ್ಲಿ ಏನಾದರೂ ಸಮಸ್ಯೆ ಇದೆಯಾ ಅನ್ನೋ ಅನುಮಾನ ಆಕೆಗೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಈ ಬಗ್ಗೆ ತಾನೇ ಹೋಗಿ ಸ್ವತಃ ವಿಚಾರಿಸಬೇಕು ಅಂತ ನಿರ್ಧಾರ ಮಾಡಿದ್ದಾಳೆ.

ಮಗನಿಗೇ ಶಕುಂತಲಾ ತಿರುಮಂತ್ರ?

ಇನ್ನೊಂದು ಕಡೆ ಶಕುಂತಲಾ ನಡೆಯೂ ವೀಕ್ಷಕರಿಗೆ ಅನುಮಾನ ಸೃಷ್ಟಿಸಿದೆ. ಪೂರ್ಣ ಆಸ್ತಿಗಾಗಿ ಮಗನಿಂದ ಕೆಲವು ಸಹಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಮೊದಲಿಗೆ ಕೆಡಿ ಜಯದೇವ್‌ ಸಹಿ ಹಾಕೊಲ್ಲ ಎಂದಿದ್ದಾನೆ. ಆದರೆ ಏಕಾಏಕಿ ಅಮ್ಮನ ಮಾತನ್ನು ನಂಬಿ ತನ್ನ ಬಳಿ ಇರುವ ಆಸ್ತಿಯನ್ನು ಬರೆದುಕೊಟ್ಟಿದ್ದಾಳೆ. ಈ ನಡೆಯನ್ನು ಕಂಡು ವೀಕ್ಷಕರು ಶಕುಂತಲಾ ಬದಲಾಗಿರಬೇಕು. ಮಗನ ಮುಂದೆ ನಾಟಕ ಮಾಡುತ್ತಿದ್ದಾಳೇನೋ ಅಂತ ಕಮೆಂಟ್‌ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ: Chinmayi Sripaada: ಕೇತನ್ ಅಗರ್ವಾಲ್‌ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ಟೀಕೆ! ಮಕ್ಕಳ ಸಾವು ಬಯಸಿದ ಟ್ರೋಲರ್ಸ್: ಗಾಯಕಿ ಚಿನ್ಮಯಿ ಶ್ರೀಪಾದ ಕಿಡಿ

ಅಂದ ಹಾಗೇ ಅಮೃತಧಾರೆ ಧಾರಾವಾಹಿ ಇತ್ತೀಚೆಗಷ್ಟೆ 1000 ಸಂಚಿಕೆ ಪೂರ್ಣಗೊಳಿಸಿದ್ದು. ಸದ್ಯಕ್ಕಂತೂ ಗೌತಮ್-ಭೂಮಿಕಾ ಮತ್ತು ಮಿಂಚು, ಆಕಾಶ್ ಹಾಗೂ ತುಂಬು ಕುಟುಂಬ ಸಂತೋಷದಿಂದ ಬಾಳುತ್ತಿರುವ ಎಪಿಸೋಡ್ ಗಳು ಪ್ರಸಾರವಾಗುತ್ತಿದೆ. ಆದರೆ ಅದರ ಜೊತೆಗೊಂದು ಟ್ವಿಸ್ಟ್ ಕೂಡ ಸಿಕ್ಕಿದೆ.



ಎಲ್ಲಾ ಸರಿಯಾಗುತ್ತಿದೆ, ಜೈದೇವ್ ಜೈಲಿಗೆ ಹೋಗಿದ್ದಾನೆ ಎಂದುಕೊಳ್ಳುತ್ತಿರುವಾಗಲೇ ಇದೀಗ, ಶಾಕುಂತಲಾ ಜೈಲಿನಿಂದ ಮಗನನ್ನು ಬಿಡಿಸಿದ್ದಾಳೆ. ಅಷ್ಟೇ ಅಲ್ಲ, ನೀನು ಇಷ್ಟು ದಿನ ನೋಡಿದ್ದೆಲ್ಲಾ ನಾಟಕ, ನನ್ನ ಅಸಲಿ ಮುಖ ಏನು ಅನ್ನೋದನ್ನು ಇನ್ನು ಮುಂದೆ ತೋರಿಸುತ್ತೇನೆ ಎನ್ನುತ್ತಾ, ಮಗನನ್ನು ಅಪ್ಪಿ ಮುದ್ದಾಡಿದ್ದಾಳೆ ಶಾಕುಂತಲಾ. ಆದರೆ ಇದು ಶಕುಂತಲಾಳದ್ದು ಮಾಸ್ಟರ್‌ ಪ್ಲ್ಯಾನ್‌ ಇರಬಹುದು ಎಂಬುದು ವೀಕ್ಷಕರ ಊಹೆ.

ಶೀಘ್ರದಲ್ಲಿ ‘ಜಗದ್ಧಾತ್ರಿ’ ಧಾರಾವಾಹಿ ಪ್ರಸಾರವಾಗಲಿದ್ದು, ಆ ಧಾರಾವಾಹಿಗಾಗಿ ಅಮೃತಧಾರೆ ಧಾರಾವಾಹಿಯನ್ನು ಮುಗಿಸಲಾಗುತ್ತಿದೆ ಎನ್ನಲಾಗಿದೆ. ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Amruthadhaare: 'ಅಮೃತಧಾರೆ'ಯ ಪ್ರೇಮ ಪರ್ವಕ್ಕೆ ಗೌತಮ್ - ಭೂಮಿಕಾನೇ ಮೇರು ಶಿಖರಗಳು!

ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ