ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻವಿಜಯ್‌ - ತ್ರಿಷಾ ಮದುವೆ ಆಗಲಿ, ನಾನು ಮೆಹಂದಿ ಫಂಕ್ಷನ್‌ಗೆ ಹೋಗ್ತಿನಿʼ; ಬಾಲಿವುಡ್‌ ನಟಿಯ ಸ್ಫೋಟಕ ಹೇಳಿಕೆ

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸಿದ ಸಂಭ್ರಮದ ನಡುವೆಯೇ, ಅವರ ಮತ್ತು ನಟಿ ತ್ರಿಷಾ ಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರಿಬ್ಬರೂ ಮದುವೆಯಾಗಬೇಕು ಎಂದು ಆಶಿಸಿರುವ ರಾಖಿ, ಮೆಹಂದಿ ಶಾಸ್ತ್ರಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಷಾ ಆಗ್ತಾರೆ; ಬಾಲಿವುಡ್‌ ನಟಿಯ ಹೇಳಿಕೆ

-

Avinash GR
Avinash GR May 10, 2026 12:33 PM

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ನಟ ʻದಳಪತಿʼ ವಿಜಯ್ ಅವರು ಹೊಸ ಅಧ್ಯಾಯ ಬರೆದಿದ್ದಾರೆ. ತಮ್ಮ ಮೊದಲ ರಾಜಕೀಯ ಯತ್ನದಲ್ಲೇ ಮುಖ್ಯಮಂತ್ರಿ ಗಾದಿಗೆ ಏರಿದ್ದಾರೆ. ಆದರೆ, ಒಂದು ಕಡೆ ವಿಜಯ್ ಪ್ರಮಾಣ ವಚನ ಸ್ವೀಕರಿಸಿ, ಸಿಎಂ ಆಗಿದ್ದರೆ. ಇನ್ನೊಂದೆಡೆ ಇದೇ ಸಮಾರಂಭಕ್ಕೆ ಆಗಮಿಸಿದ್ದ ನಟಿ ತ್ರಿಷಾ ಕೃಷ್ಣನ್‌ ಎಲ್ಲರ ಕಣ್ಣು ಕುಕ್ಕಿದ್ದಾರೆ. ಈಗಾಗಲೇ ವಿಜಯ್‌ ಮತ್ತು ತ್ರಿಷಾ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ.

ವಿಜಯ್ - ತ್ರಿಷಾ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು?

ನಟ ವಿಜಯ್ ಮತ್ತು ನಟಿ ತ್ರಿಷಾ ನಡುವೆ ಸಂಬಂಧವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹಲವು ಸಮಯದಿಂದ ಕೇಳಿಬರುತ್ತಿವೆ. ಇದೀಗ ಬಾಲಿವುಡ್‌ನ ವಿವಾದಾತ್ಮಕ ನಟಿ ರಾಖಿ ಸಾವಂತ್ ನೀಡಿರುವ ಹೇಳಿಕೆ ಈ ವದಂತಿಗಳಿಗೆ ಬೆಂಕಿಗೆ ತುಪ್ಪ ಸುರಿದಂತಿದೆ. "ನನಗೆ ವಿಜಯ್ ಅಂದರೆ ತುಂಬಾ ಇಷ್ಟ. ಅವರ ಜೊತೆ ಒಂದು ಹಾಡಿನಲ್ಲಿ ನಟಿಸುವುದು ನನ್ನ ಕನಸಾಗಿತ್ತು, ಆದರೆ ಆ ಅವಕಾಶ ಸಿಗಲಿಲ್ಲ. ಈಗ ಅವರ ರಾಜಕೀಯ ಪಕ್ಷ ಸೇರುವ ಆಸೆ ನನಗಿದೆ" ಎಂದು ರಾಖಿ ಸಾವಂತ್ ಹೇಳಿದ್ದಾರೆ.

Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

ಜೊತೆಗೆ ವಿಜಯ್‌ ಮತ್ತು ತ್ರಿಷಾ ಜೋಡಿ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, "ವಿಜಯ್ - ತ್ರಿಷಾ ಮದುವೆ ಆಗಬೇಕು. ಅವರ ಮೆಹಂದಿ ಶಾಸ್ತ್ರಕ್ಕೆ ನಾನು ಖಂಡಿತ ಹೋಗುತ್ತೇನೆ. ನನಗೆ ತ್ರಿಷಾ ಪರಿಚಯ ಇದೆ. ಅವರಿಬ್ಬರದು ಅದ್ಭುತವಾದ ಜೋಡಿ" ಎನ್ನುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

"ನಾನು ಮತ್ತು ತ್ರಿಷಾ ಇಬ್ಬರೂ ಒಟ್ಟಿಗೆ ಬಾಲಿವುಡ್‌ನಲ್ಲಿ ನಮ್ಮ ವೃತ್ತಿಜೀವನವನ್ನು ಆರಂಭಿಸಿದೆವು. ಆದರೆ ನಂತರ ತ್ರಿಷಾ ದಕ್ಷಿಣದತ್ತ ತೆರಳಿ ಅಲ್ಲಿ ನಟಿಸುತ್ತಾ ಬ್ಯುಸಿಯಾದರು. ವಿಜಯ್ ತುಂಬಾ ಒಳ್ಳೆಯ ವ್ಯಕ್ತಿ, ನನಗೆ ಅವರ ಬಗ್ಗೆ ಅಪಾರ ಗೌರವ ಇದೆ. ಅವರ ಯಶಸ್ಸು ನನಗೆ ಅಪಾರ ಸಂತೋಷ ತಂದಿದೆ" ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಬಾಲಿವುಡ್‌ ನಟಿ ರಾಖಿ ಸಾವಂತ್

22 ವರ್ಷಗಳಿಂದ ಪರಿಚಯ

ತಮಿಳು ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಜೋಡಿಗಳಲ್ಲಿ ವಿಜಯ್ ಮತ್ತು ತ್ರಿಷಾ ಕೂಡ ಒಂದು. 'ಗಿಲ್ಲಿ', 'ತಿರುಪ್ಪಾಚಿ', 'ಕುರುವಿ' ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಈ ಜೋಡಿ, ಫ್ಯಾನ್ಸ್‌ಗೆ ಸಖತ್‌ ಇಷ್ಟವಾಗಿತ್ತು. ಆದರೆ, ಈ ಜೋಡಿಯ ಬಗ್ಗೆ ಹರಡಿದ ವದಂತಿಗಳು ವಿಜಯ್ ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದ್ದವು ಎನ್ನಲಾಗಿದೆ. ಆ ಕಾರಣಕ್ಕೆ ಇಬ್ಬರೂ ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ಅಭಿನಯಿಸಿರಲಿಲ್ಲ. ಆದರೆ, ಈಚೆಗೆ ಬಂದ ಲಿಯೋ ಮೂಲಕ ಒಟ್ಟಿಗೆ ನಟಿಸಿದ್ದರು. ಆದರೆ, ವಿಜಯ್‌ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಹಾಕಿದ ಮೇಲೆ ವಿಜಯ್‌ - ತ್ರಿಷಾ ನಡುವಿನ ವದಂತಿ ಕಾವು ಪಡೆದಕೊಂಡಿದೆ.