Hera Pheri 3: ‘ಹೇರಾ ಫೆರಿ 3’ ಸದ್ಯಕ್ಕೆ ಸೆಟ್ಟೇರಲ್ಲ; ಅಕ್ಷಯ್ ಕುಮಾರ್
Hera Pheri 3: ನಟ ಅಕ್ಷಯ್ ಕುಮಾರ್ ಈಗ ಹೇರಾ ಫೇರಿ 3 ವಿವಾದಗಳಿಂದ ಹೊರಬಂದು ಮತ್ತೆ ಟ್ರ್ಯಾಕ್‌ಗೆ ಬಂದಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ದುರದೃಷ್ಟವಶಾತ್, ಈ ಚಿತ್ರ ಶೀಘ್ರದಲ್ಲೇ ಪ್ರಾರಂಭವಾಗುವುದಿಲ್ಲ ಎಂದು ಅಕ್ಷಯ್ ಹೇಳಿದರು. ‘ಹೇರಾ ಫೆರಿ’ ಚಿತ್ರದ ಹಿಂದಿನ ಎರಡೂ ಭಾಗಗಳು ಭಾರಿ ಯಶಸ್ಸನ್ನು ಕಂಡವು. ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದವು. ಅಭಿಮಾನಿಗಳು “ಹೇರಾ ಫೆರಿ 3” ಗಾಗಿ ಕಾತರದಿಂದ ಕಾಯುತ್ತಿದ್ದಾರೆ
ನಟ ಅಕ್ಷಯ್ ಕುಮಾರ್ -
ಅಕ್ಷಯ್ ಕುಮಾರ್ (Akshay Kumar) , ಪರೇಶ್ ರಾವಲ್ (Paresh Rawal) ಮತ್ತು ಸುನೀಲ್ ಶೆಟ್ಟಿ (Suniel Shetty) ಅವರನ್ನು ಮತ್ತೆ ಒಂದುಗೂಡಿಸುವ ಹೇರಾ ಫೇರಿ 3 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪರೇಶ್ ಯೋಜನೆಯಿಂದ ಹಠಾತ್ತನೆ ನಿರ್ಗಮಿಸಿದ್ದರಿಂದ ಈ ಚಿತ್ರವು ಸಾಕಷ್ಟು ವಿವಾದಗಳನ್ನು ಎದುರಿಸಿದೆ. ಇದು ಅಭಿಮಾನಿಗಳು ಮತ್ತು ಫ್ರಾಂಚೈಸಿಯ ಹಕ್ಕುಗಳನ್ನು ಪಡೆದುಕೊಂಡಿದ್ದ ಅಕ್ಷಯ್ ಕುಮಾರ್ ಇಬ್ಬರನ್ನೂ ಆಘಾತಗೊಳಿಸಿತು. ಚಿತ್ರದ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಈಗ, ‘ಹೇರಾ ಫೆರಿ 3’ (Hera Pheri 3) ಸದ್ಯಕ್ಕೆ ಸೆಟ್ಟೇರಲ್ಲ ಎಂದು ಅಕ್ಷಯ್ ಕುಮಾರ್ ಸ್ವತಃ ದೃಢಪಡಿಸಿದ್ದಾರೆ.
ಶೀಘ್ರದಲ್ಲೇ ಪ್ರಾರಂಭವಾಗುವುದಿಲ್ಲ
ಭೂತ್ ಬಾಂಗ್ಲಾ ಬಿಡುಗಡೆಗೂ ಮುನ್ನ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂವಾದದಲ್ಲಿ, ನಟ ಅಕ್ಷಯ್ ಕುಮಾರ್ ಈಗ ಹೇರಾ ಫೇರಿ 3 ವಿವಾದಗಳಿಂದ ಹೊರಬಂದು ಮತ್ತೆ ಟ್ರ್ಯಾಕ್‌ಗೆ ಬಂದಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ದುರದೃಷ್ಟವಶಾತ್, ಈ ಚಿತ್ರ ಶೀಘ್ರದಲ್ಲೇ ಪ್ರಾರಂಭವಾಗುವುದಿಲ್ಲ ಎಂದು ಅಕ್ಷಯ್ ಹೇಳಿದರು.
ಇದನ್ನೂ ಓದಿ: Hansika Motwani: ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ
ಹೇರಾ ಫೇರಿ 3 ಬಗ್ಗೆ ಅಕ್ಷಯ್ ಹೇಳಿದ್ದೇನು?
ಹೇರಾ ಫೇರಿ 3 ಸಿನಿಮಾ ಈಗ ಆರಂಭ ಆಗುತ್ತಿಲ್ಲ. ಇದರಿಂದ ಸಾಕಷ್ಟು ಜನರಿಗೆ ಬೇಸರವಾಗಿದೆ. ಆದರೆ ಪರವಾಗಿಲ್ಲ, ನಾವು ‘ವೆಲ್‌ಕಮ್ 3’ ಮಾಡುತ್ತೇವೆ’ ಎಂದು ಅಕ್ಷಯ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದರು. ಚಿತ್ರದ ಬಗ್ಗೆ ವಿಷಯಗಳು ಬಗೆಹರಿದಿವೆಯೇ ಎಂದು ಕೇಳಿದಾಗ, ‘ಈಗ ಏನೋ ನಡೆಯುತ್ತಿದೆ. ಅದನ್ನು ಓಪನ್ ಆಗಿ ಹೇಳಲು ಸಾಧ್ಯವಿಲ್ಲ. ಆದರೆ, ಸಿನಿಮಾ ಸದ್ಯಕ್ಕಂತೂ ಆಗಲ್ಲ’ ಎಂದು ಹೇಳಿದರು ಅಕ್ಷಯ್.
ಸರಿಯಾದ ಸಮಯ ಬಂದಾಗ, ಚಲನಚಿತ್ರವನ್ನು ನಿರ್ಮಿಸಲಾಗುವುದು ಎಂದರು. ಪ್ರಿಯದರ್ಶನ್ ನಿರ್ದೇಶನದ ಹೇರಾ ಫೇರಿ ಚಿತ್ರವು 2000 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಯಿತು, ಇದು ಬಾಬುರಾವ್ ಗಣಪತ್ರಾವ್ ಆಪ್ಟೆ (ಪರೇಶ್), ರಾಜು (ಅಕ್ಷಯ್) ಮತ್ತು ಶ್ಯಾಮ್ (ಸುನೀಲ್) ಎಂಬ ತ್ರಿಮೂರ್ತಿಗ ಪಾತ್ರ ಪ್ರೇಕ್ಷಕರಿಗೆ ಇಷ್ಟಾಯ್ತು.
ಈ ಚಿತ್ರವು ಶೀಘ್ರವಾಗಿ ಭಾರಿ ಯಶಸ್ಸನ್ನು ಕಂಡಿತು ಮತ್ತು ಅದರ ಬರವಣಿಗೆ ಮತ್ತು ಹಾಸ್ಯ ಸಮಯಕ್ಕಾಗಿ ಅಭಿಮಾನಿಗಳನ್ನು ಗಳಿಸಿತು. ನೀರಜ್ ವೋರಾ ನಿರ್ದೇಶನದ 2006 ರ ಫಿರ್ ಹೇರಾ ಫೇರಿಯಲ್ಲಿ ಪಾತ್ರಗಳು ಮರಳಿದವು.
ಇದನ್ನೂ ಓದಿ: Amruthadhaare Serial: ಗೌತಮ್ ಮನೆ ತುಂಬಾ ಮಂದಹಾಸ ; ಮಂಕಾಗಿದೆ ಜೇಡಿಯ ಅಟ್ಟಹಾಸ!
ಪರೇಶ್ ಅವರ ಜೊತೆ ಮನಸ್ತಾಪ ಪೂರ್ಣಗೊಂಡಿತೇ ಎಂದು ಕೇಳಿದಾಗ ನಾನು, ಸುನೀಲ್ ಶೆಟ್ಟಿ ಹಾಗೂ ಪರೇಶ್ ವೆಲ್ಕಮ್ ಟು ದಿ ಜಂಗಲ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇವೆ ಎಂದಿದ್ದಾರೆ. ಅಭಿಮಾನಿಗಳು “ಹೇರಾ ಫೆರಿ 3” ಗಾಗಿ ಕಾತರದಿಂದ ಕಾಯುತ್ತಿದ್ದಾರೆ