ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hansika Motwani: ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ

Hansika Motwani: ಅದ್ದೂರಿಯಾಗಿ ಮದುವೆಯಾದ ಹನ್ಸಿಕಾ ತಮ್ಮ ಕೈ ಹಿಡಿದ ಸೊಹೇಲ್ ಖತುರಿಯಾ ಅವರ ಕೈಯನ್ನು ಈ ವರ್ಷದ ಆರಂಭದಲ್ಲಿಯೇ ಬಿಟ್ಟಿದ್ದಾರೆ. ಮುಂಬೈನ ಬಾಂದ್ರಾದ ಕೌಟುಂಬಿಕ ನ್ಯಾಯಾಲಯವು ಮಾರ್ಚ್ 11 ರಂದು ಪರಸ್ಪರ ಒಪ್ಪಿಗೆಯ ಮೂಲಕ ದಂಪತಿಗೆ ವಿಚ್ಛೇದನ ನೀಡಿತು. ಈ ಬಗ್ಗೆ ಹೆಚ್ಚಾಗಿ ಏನೂ ಹೇಳದ ನಟಿ ಹನ್ಸಿಕಾ ವಿವರಗಳನ್ನು ಖಾಸಗಿಯಾಗಿಡಲು ಆಯ್ಕೆ ಮಾಡಿಕೊಂಡಿದ್ದಾರೆ.

ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ -

Yashaswi Devadiga
Yashaswi Devadiga Apr 17, 2026 7:35 PM

ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ ಮೋಟ್ವಾನಿ (Hansika Motwani ) 2022ರಲ್ಲಿ ಸೊಹೇಲ್ ಖತುರಿಯಾ (Sohael Khaturiya) ಅವರನ್ನು ಮದುವೆಯಾಗಿದ್ದರು. ಈ ಸೊಹೇಲ್ ಖತುರಿಯಾ ಬೇರೆ ಯಾರು ಅಲ್ಲ ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ. ಸೊಹೇಲ್ ಖತುರಿಯಾ ಅವರಿಂದ ಬೇರ್ಪಟ್ಟ ನಂತರ, ಹನ್ಸಿಕಾ ಈ ಬಗ್ಗೆ ಮೌನ ಮುರಿದಿದ್ದಾರೆ. ಮುಂಬೈನ ಬಾಂದ್ರಾದ ಕೌಟುಂಬಿಕ ನ್ಯಾಯಾಲಯವು ಮಾರ್ಚ್ 11 ರಂದು ಪರಸ್ಪರ ಒಪ್ಪಿಗೆಯ ಮೂಲಕ ದಂಪತಿಗೆ ವಿಚ್ಛೇದನ (Divorce) ನೀಡಿತು. ಈ ಬಗ್ಗೆ ಹೆಚ್ಚಾಗಿ ಏನೂ ಹೇಳದ ನಟಿ ಹನ್ಸಿಕಾ ವಿವರಗಳನ್ನು ಖಾಸಗಿಯಾಗಿಡಲು ಆಯ್ಕೆ ಮಾಡಿಕೊಂಡಿದ್ದಾರೆ.

ವಿಚ್ಛೇದನದ ಬಗ್ಗೆ ಮೌನ ಮುರಿದ ಹನ್ಸಿಕಾ ಮೋಟ್ವಾನಿ

ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿ, "ಜನರು ಕ್ಲಿಕ್‌ಬೈಟ್ ಬಯಸಿದ್ದರು, ಅವರಿಗೆ ಅದು ಸಿಕ್ಕಿತು. ಅವರಿಗೆ ಹೆಡ್‌ಲೈನ್‌ ಬೇಕಿತ್ತು. ಅದು ಅವರಿಗೆ ಸಿಕ್ಕಿದೆ. ನಾನು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ಇಷ್ಟ ಪಡಲ್ಲ.ಏಕೆಂದರೆ ಅದು ನನಗೆ ಮುಖ್ಯವಲ್ಲ. ನನಗೆ ಯಾವುದೇ ಈ ಬಗ್ಗೆ ವಿಷಾದವಿಲ್ಲ. ನೀವು ತಪ್ಪಾದ ರೈಲು ಹತ್ತಿದರೆ , ಅಲ್ಲಿ ಕಷ್ಟ ಪಡುವುದಕ್ಕಿಂತ ರೈಲಿನಿಂದ ಇಳಿಯುವುದು ಉತ್ತಮ" ಎಂದು ಹೇಳಿದರು.

ಇದನ್ನೂ ಓದಿ: Amruthadhaare Serial: ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ; ಗೌತಮ್ - ಭೂಮಿಕಾ ಜೋಡಿ ಕಂಡು ವೀಕ್ಷಕರು ಖುಷ್‌!

ನನ್ನ ನಿರ್ಧಾರದಿಂದ ತಾನು ತೃಪ್ತಳಾಗಿದ್ದೇನೆ. ನನ್ನ ಕುಟುಂಬ ನನ್ನ ಜೊತೆಗಿದೆ. ತನ್ನ ತಾಯಿ ಮತ್ತು ಸಹೋದರ ಬೇಷರತ್ತಾಗಿ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದಿದ್ದಾರೆ.

ವಿಷಯಗಳನ್ನು ಖಾಸಗಿಯಾಗಿ ಇಡುವ ತನ್ನ ನಿರ್ಧಾರದ ಬಗ್ಗೆ ನಟಿ ಮಾತನಾಡಿ, ಏನು ತಪ್ಪಾಯಿತು ಎಂಬುದರ ವಿವರಗಳು ಅವರಿಬ್ಬರಿಗೆ ಮಾತ್ರ ತಿಳಿದಿವೆ ಎಂದಿದ್ದಾರೆ.

ಹನ್ಸಿಕಾ, ನಿನಗೆ ವಯಸ್ಸಾಯ್ತು ಮದುವೆಯಾಗು, ಮಕ್ಕಳು ಮಾಡಿಕೊಂಡು ಹಾಯಾಗಿ ಇರು ಎಂದು ಹೇಳುವ ಜನರನ್ನು ನಾನು ನನ್ನ ಜೀವನದಲ್ಲಿ ಯಾವತ್ತೂ ಭೇಟಿಯಾಗಿಲ್ಲ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ತುಂಬಾ ಬಲಿಷ್ಠರು ಮತ್ತು ಸ್ವತಂತ್ರರಾಗಿದ್ದು, ತಮ್ಮ ಭವಿಷ್ಯಕ್ಕಾಗಿ ಬೇಕಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅವರು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.

ಹನ್ಸಿಕಾ ಮತ್ತು ಸೊಹೇಲ್ ಖತುರಿಯಾ ಡಿಸೆಂಬರ್ 2022 ರಲ್ಲಿ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ನಡೆದ ಅದ್ಧೂರಿ ಸಮಾರಂಭಲ್ಲಿ ವಿವಾಹವಾದರು.

ಸಿನಿಮಾ ವಿಚಾರಕ್ಕೆ ಬರೋದಾದರೆ, ಹನ್ಸಿಕಾ ಮೋಟ್ವಾನಿ ಕೊನೆಯ ಬಾರಿಗೆ 2024 ರಲ್ಲಿ ಶಬರಿ ಮತ್ತು ಗುರು ಸರವಣನ್ ನಿರ್ದೇಶನದ ಗಾರ್ಡಿಯನ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಸುರೇಶ್ ಚಂದ್ರ ಮೆನನ್ ಮತ್ತು ಶ್ರೀಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಮಿಶ್ರ ವಿಮರ್ಶೆಗಳನ್ನು ಪಡೆದರು.

ಇದನ್ನೂ ಓದಿ: Rishab Shetty: ‘ಕಾಂತಾರದಲ್ಲಿ ನಟಿಸುವ ಆಸೆ ಇರಲಿಲ್ಲʼ; ರಿಷಬ್‌ ಶೆಟ್ಟಿ

ತೆಲುಗು ನೃತ್ಯ ಕಾರ್ಯಕ್ರಮ ಧೀ ಸೆಲೆಬ್ರಿಟಿ ಸ್ಪೆಷಲ್ 2 ನಲ್ಲಿ ಅವರು ತೀರ್ಪುಗಾರರಾಗಿಯೂ ಕಾಣಿಸಿಕೊಂಡರು. ಶೀಘ್ರದಲ್ಲೇ ತೆಲುಗು ಚಿತ್ರ ನಶಾದಲ್ಲಿ ನಟಿಸಲಿದ್ದಾರೆ.