Bigg Boss Kannada 13: ʻಕಳಪೆʼ ಪಟ್ಟ ಹೊತ್ತ ಗಾನವಿ! Hijacker ವಿರುದ್ದ ಒಂದಾಯ್ತಾ ಇಡೀ ಮನೆ?
Bigg Boss Kannada 13: ಸಣ್ಣ ಕಾರಣದಿಂದ ಶುರುವಾದ ಮನಸ್ತಾಪ ಈಗ ದೊಡ್ಡದಾಗಿ ಬೆಳೆಯುತ್ತಿದೆ. ಮಾತುಮಾತಿಗೂ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಹೊಸ ಸಂಚಿಕೆಯಲ್ಲಿ ಇಬ್ಬರ ನಡುವಿನ ಜಗಳ ತೀವ್ರವಾಗಿದೆ. ಟಾಸ್ಕ್ ಆಡುವಾಗ ಗಾನವಿ ವಿರುದ್ಧ ಇಡೀ ಟೀಮ್ ತಿರುಗಿ ಬಿದ್ದಿತ್ತು. ಇನ್ನುಳಿದ ಸ್ಪರ್ಧಿಗಳ ಹಿತಕ್ಕಾಗಿ ಗಾನವಿ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು. ಆದರೆ ಆ ಮಾತನ್ನು ಕೇಳಿಸಿಕೊಳ್ಳಲು ಗಾನವಿ ರೆಡಿ ಇರಲಿಲ್ಲ. ಇದೀಗ ಗಾನವಿಗೆ ಇಡೀ ಮನೆಯವರು ಕಳಪೆ ಪಟ್ಟ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
ಸಣ್ಣ ಕಾರಣದಿಂದ ಶುರುವಾದ ಮನಸ್ತಾಪ ಈಗ ದೊಡ್ಡದಾಗಿ ಬೆಳೆಯುತ್ತಿದೆ. ಮಾತುಮಾತಿಗೂ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಹೊಸ ಸಂಚಿಕೆಯಲ್ಲಿ ಇಬ್ಬರ ನಡುವಿನ ಜಗಳ ತೀವ್ರವಾಗಿದೆ. ಟಾಸ್ಕ್ ಆಡುವಾಗ ಗಾನವಿ ವಿರುದ್ಧ ಇಡೀ ಟೀಮ್ ತಿರುಗಿ ಬಿದ್ದಿತ್ತು. ಇನ್ನುಳಿದ ಸ್ಪರ್ಧಿಗಳ ಹಿತಕ್ಕಾಗಿ ಗಾನವಿ (Ganavi) ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು. ಆದರೆ ಆ ಮಾತನ್ನು ಕೇಳಿಸಿಕೊಳ್ಳಲು ಗಾನವಿ ರೆಡಿ ಇರಲಿಲ್ಲ. ಇದೀಗ ಗಾನವಿಗೆ ಇಡೀ ಮನೆಯವರು ಕಳಪೆ (Kalape) ಪಟ್ಟ ಕೊಟ್ಟಿದ್ದಾರೆ.
ಜಗ್ಗ ಮೊದಲಿಗೆ ಕಳಪೆಯನ್ನು ಗಾನವಿಗೆ ನೀಡಿದರು. ತುಂಬಾ ಕೂಗಾಟ ಮಾಡುತ್ತಾರೆ ತಲೆ ನೋವು ಶುರುವಾಗಿದೆ ಎಂದರು. ಅದಕ್ಕೆ ಗಾನವಿ ಇದ್ದವರು ಮನೆಗೆ ಹೋಗಿ ಎಂದಿದ್ದಾರೆ. ಗಗನ್ ಇದ್ದವರು ಗಾನವಿಗೆ ಕಳಪೆ ನೀಡಿ, ಮಾನುಪುಲೇಟ್ ಮಾಡುತ್ತಾರೆ ಎಂದರು. ಗಾನವಿ ಇದಕ್ಕೆ ಮಾತನಾಡಿ, ಕೆಲವೊಮ್ಮೆನಾವು ಮಾತನಾಡಬೇಕಾಗುತ್ತದೆ. ನನಗೋಸ್ಕರ ಇಲ್ಲಿ ಯಾರೂ ಸ್ಟ್ಯಾಂಡ್ ತೆಗೆದುಕೊಳಲ್ಲ.ನಿಮಗೋಸ್ಕರ ತೆಗೆದುಕೊಳ್ತಾರೆ. ಸ್ಟ್ರಾಂಗ್ ಆಗಿ ನಿಲ್ತೀನಿ. ಸ್ಟ್ರಾಂಗ್ ಆಗಿ ಆಡ್ತೀನಿ. ನನ್ನ ಆಟ ನಾನು ಆಡೇ ಆಡ್ತೀನಿ ಎಂದು ಗಾನವಿ ಕೂಗಾಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮಗಳೇ ಪ್ರಪಂಚ, ತಾಯಿ ಬಿಟ್ಟರೇ ಯಾರು ಇಲ್ಲ; ಜಗ್ಗಮಮ್ಮಿ ಕಣ್ಣೀರು
ಇದನ್ನೂ ಓದಿ: Bigg Boss Kannada 13: ನಿಯಮ ಮುರಿದ ಯಶಸ್; ಚಪ್ಪಾಳೆ ಗಿಟ್ಟಿಸಿಕೊಂಡ ಆಸಿಯಾ ಇದಕ್ಕೆ ಸಾಥ್!
ನಾಲ್ಕನೇ ವಾರದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮಧ್ಯೆಯೇ ಜಟಾಪಟಿ ಶುರುವಾಗಿದೆ. ಗಾನವಿಯ ಬಗ್ಗೆ ಪ್ರಶಾಂತ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ‘ಗಾನವಿ ತುಂಬಾ ಫೇಕ್ ವ್ಯಕ್ತಿತ್ವ ಇರುವ ಸ್ಪರ್ಧಿ’ ಎಂದು ಸೌಂದರ್ಯಾ ಶೆಟ್ಟಿ ಅವರು ಹೇಳಿದ್ದಾರೆ.
ಉಸ್ತುವಾರಿಗಳು ಟಾಸ್ಕ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಮನಸ್ಸಿಗೆ ಬಂದಂತೆ ರೂಲ್ಸ್ ಮಾಡಿ ಇಡೀ ಆಟವನ್ನು ಹಾಳು ಮಾಡಿದರು. ಗಾನವಿ ಅವರು ತಂಡದ ನಾಯಕಿ ಆಗಿ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗಿ ತಂಡಕ್ಕೆ ಗೆಲುವು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.