ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ; ಧನ್ಯವಾದ ಹೇಳಿದ ಶಕುಂತಲಾ!

Amruthadhaare Serial: ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಶಕುಂತಲಾ ಆ ಬಳಿಕ ಗೌತಮ್‌ ಹಾಗೂ ಭೂಮಿಗೆ ಧನ್ಯವಾದ ಹೇಳಿದ್ದಾಳೆ.ಅತ್ತ ಮನೆಯವರೆಲ್ಲರೂ ಸಮಾಧಾನ ಮಾಡಿದ್ದರೂ ಮಹಿಮಾ ಕೇಳುವ ಸ್ಥಿತಿಯಲ್ಲಿ ಇಲ್ಲ.

Amruthadhaare: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 27, 2026 10:36 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಭೂಮಿ ಹಾಗೂ ಗೌತಮ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಿಮಾ ಈಗ ಮಗು ಕಳೆದುಕೊಂಡ ನೋವಿನಲ್ಲಿ ಇದ್ದಾಳೆ. ಅತ್ತ ಮನೆಯವರೆಲ್ಲರೂ ಸಮಾಧಾನ ಮಾಡಿದ್ದರೂ ಮಹಿಮಾ ಕೇಳುವ ಸ್ಥಿತಿಯಲ್ಲಿ ಇಲ್ಲ. ಇನ್ನೊಂದು ಕಡೆ ಶಕುಂತಲಾ (Shakunala) ಮಗಳಿಗೆ ಸಾಂತ್ವಾನ ಮಾಡಿದ್ದಕ್ಕೆ ಗೌತಮ್‌ (Gowtham Bhoomika) ಹಾಗೂ ಭೂಮಿಕಾಗೆ ಧನ್ಯವಾದ ಹೇಳಿದ್ದಾಳೆ.

ಗೌತಮ್‌ ಹಾಗೂ ಭೂಮಿಗೆ ಧನ್ಯವಾದ

ಮಹಿಮಾ ಸಾಕಷ್ಟು ಬಾರಿ ಮಗಳನ್ನು ಕಳೆದುಕೊಂಡಿದ್ದಾಳೆ. ಅದೇ ನೋವಿನಲ್ಲಿ ಇದ್ದಳು. ಶಕುಂತಲಾ ಸೇರಿದಂತೆ ಗೌತಮ್‌ ಹಾಗೂ ಭೂಮಿ ಮಹಿಮಾಗೆ ಸಮಾಧಾನ ಮಾಡಿದ್ದಾರೆ. ಶಕುಂತಲಾ ಆ ಬಳಿಕ ಗೌತಮ್‌ ಹಾಗೂ ಭೂಮಿಗೆ ಧನ್ಯವಾದ ಹೇಳಿದ್ದಾಳೆ.

ಇದನ್ನೂ ಓದಿ: Jagapathi Babu: ಖಿನ್ನತೆಯಿಂದ ಹೊರಬರಲು ಪ್ರಭಾಸ್‌ ಸಹಾಯ! ಜಗಪತಿ ಬಾಬು ಮುಕ್ತ ಮಾತು

ಮಹಿಮಾ ಮೊದಲು ಯಾರ ಜೊತೆಗೆ ಬೆರೆಯುತ್ತಿರಲಿಲ್ಲ. ಆ ನಂತರ ಎಲ್ಲರ ಜೊತೆ ಮಾತನಾಡಲು ಶುರು ಮಾಡಿದ್ದಳು. ಆದರೆ ಅವಳಿಗೆ ಮತ್ತೆ ಮಗು ಆಗುತ್ತೆ ಅನ್ನೋದಕ್ಕೂ ನನಗೆ ಧೈರ್ಯ ಸಾಲಲಿಲ್ಲ. ಆ ಧೈರ್ಯ ನಿವಿಬ್ಬರೂ ಕೊಟ್ಟರಿ, ಮುಂದೆ ಎಲ್ಲವೂ ಒಳ್ಳೆದಾದರೆ ಸಾಕು. ನೀವಿಬ್ಬರೂ ಮತ್ತೆ ಮಗು ಆಗುತ್ತೆ ಅಂದಗಾ ಮಹಿಮಾಗೆ ಹೋಪ್ಸ್‌ ಕೂಡ ಬಂದಿತ್ತು ಎಂದಿದ್ದಾಳೆ ಶಕುಂತಲಾ.

ಭೂಮಿ ತಾಯಿ ಬೇಡಿಕೆಗೆ ಶಾಕ್‌ ಆದ್ರೂ ಗೌತಮ್‌!

ಮಹಿಮಾ ಮಗು ಕಳೆದುಕೊಂಡ ನೋವಲ್ಲೇ ಇದ್ದಾಳೆ, ಮಿಂಚು ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾಳೆ, ಇದನ್ನು ಗಮನಿಸಿದ ಭೂಮಿ ತಾಯಿ ಈಗ ಹೊಸ ಬೇಡಿಕೆ ಇಟ್ಟಿದ್ದಾರೆ. ಮಿಂಚುಳನ್ನು ಮಹಿಮಾಗೆ ದತ್ತು ಕೊಡಿ ಎಂದಿದ್ದಾರೆ. ಇದನ್ನು ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ.



ಅಷ್ಟೇ ಅಲ್ಲ ದೂರದಲ್ಲಿ ಕೇಳಿಸಿಕೊಂಡ ಅಪ್ಪು ಕೂಡ ಶಾಕ್‌ ಆಗಿದ್ದಾನೆ. ಮುಂದೆ ಈ ಜೋಡಿ ಏನು ಮಾಡುತ್ತೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌!

ಅತ್ತ ಜೈದೇವ್‌ಗೂ ಮಿಂಚು ಸುಳಿವು ಸಿಕ್ಕಿದಂತಿದೆ. ಮಿಂಚುನೇ ಗೌತಮ್‌ ಮಗಳು ಅನ್ನೋ ಸತ್ಯ ಗೊತ್ತಾದರೆ ಸುಮ್ಮನೇ ಅಂತೂ ಬಿಡಲ್ಲ ಕೆಡಿ ಜೈದೇವ್‌. .ಎಲ್ಲಕ್ಕಿಂತ ಮುಖ್ಯವಾಗಿ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.

ಇದನ್ನೂ ಓದಿ: Amruthadhaare Serial: ಅನಿರೀಕ್ಷಿತವಾಗಿ ಬಂದಿರೋ ಸವಾಲನ್ನು ಹೇಗೆ ಎದುರಿಸ್ತಾರೆ ಗೌತಮ್ - ಭೂಮಿಕಾ ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ