Amulya Gowda: ಮದುವೆ ವದಂತಿ ಬಗ್ಗೆ ಕೊನೆಗೂ ಫುಲ್ ಸ್ಟಾಪ್ ಇಟ್ರಾ `ಕಮಲಿ' ಖ್ಯಾತಿಯ ಹೀರೋ, ಹೀರೋಯಿನ್?
Amulya Gowda: ಅಮೂಲ್ಯ ಗೌಡ ʻಶ್ರೀ ಗೌರಿʼ ಧಾರಾವಾಹಿ ಮುಗಿದಮೇಲೆ ಕನ್ನಡದಲ್ಲಿ ಬೇರೆ ಯಾವ ಪ್ರಾಜೆಕ್ಟ್ ಕೂಡ ಒಪ್ಪಿಕೊಂಡಿಲ್ಲ. ಬದಲಿಗೆ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ನಿರಂಜನ್ ಅವರು ಕೂಡ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.
ಅಮೂಲ್ಯ-ನಿರಂಜನ್ -
ಬಿಗ್ ಬಾಸ್ ಕನ್ನಡ ಒಟಿಟಿʼ (Bigg Boss Kannada OTT) ಮತ್ತು ʻಬಿಗ್ ಬಾಸ್ ಕನ್ನಡ ಸೀಸನ್ 9’ರ ಖ್ಯಾತಿಯ ನಟಿ ಅಮೂಲ್ಯ ಗೌಡ ಸದ್ಯ ತೆಲುಗು ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಆಡಿಯನ್ಸ್‌ಗಳಿಗೂ ಚಿರಪರಿಚಿತರಾಗಿದ್ದಾರೆ. ಜೊತೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿರುವ ಅಮೂಲ್ಯ ಗೌಡ ಅವರು ʻಕಮಲಿʼ (kamali Serial) ಧಾರಾವಾಹಿ ಖ್ಯಾತಿಯ ನಿರಂಜನ್ ಬಿಎಸ್ ಅವರ ಜೊತೆಗೆ ಲವ್‌ನಲ್ಲಿದ್ದಾರೆ ಎಂದು ಹಲವು ವರ್ಷಗಳಿಂದಲೂ ಗಾಸಿಪ್‌ಗಳು ಓಡಾಡುತ್ತಲೇ ಇದೆ. ತೆಲುಗು ವಾಹಿನಿಯ ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದ ಹೇಳಿಕೆ ಹಾಗೂ ‘Will You Marry Me’ ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.
ತೆಲುಗು ಧಾರಾವಾಹಿಯಲ್ಲಿ ಬ್ಯುಸಿ
ಅಮೂಲ್ಯ ಗೌಡ ʻಶ್ರೀ ಗೌರಿʼ ಧಾರಾವಾಹಿ ಮುಗಿದಮೇಲೆ ಕನ್ನಡದಲ್ಲಿ ಬೇರೆ ಯಾವ ಪ್ರಾಜೆಕ್ಟ್ ಕೂಡ ಒಪ್ಪಿಕೊಂಡಿಲ್ಲ. ಬದಲಿಗೆ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ನಿರಂಜನ್ ಅವರು ಕೂಡ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: Ramayana Movie: ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್ ಹೇಳಿದ್ದೇನು?
ಇದೀಗ ಸದ್ಯ ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ. ಕಾಲಿಗೆ ಗಜ್ಜೆ ತೊಡಿಸುವ ಕ್ಷಣ ಮತ್ತು ‘Will U Marry Me’ ಎಂಬ ಬರಹದ ಹಿನ್ನೆಲೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇದರಿಂದಾಗಿ ಅಮೂಲ್ಯ-ನಿರಂಜನ್ ನಿಜ ಜೀವನದಲ್ಲೂ ಮದುವೆಯಾಗಲಿದ್ದಾರಾ ಎಂಬ ಚರ್ಚೆ ಮತ್ತಷ್ಟು ಜೋರಾಗಿದೆ.
ಇದಕ್ಕೂ ಮುಂಚೆ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೂಲ್ಯ ಅವರಿಗೆ ಗಾಯವಾಗಿದೆ ಎಂದು ನಿರಂಜನ್‌ಗೆ ಫ್ರಾಂಕ್ ಕಾಲ್ ಮಾಡಿ ಕರೆಸಲಾಗಿತ್ತು.
ಆಗ ಅಮೂಲ್ಯ ಅವರ ಬಗ್ಗೆ ನಿರಂಜನ್ ತೋರಿಸಿದ ಕಾಳಜಿ ಮತ್ತು ಆತಂಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ಸಖತ್ ಸುದ್ದಿಯಾಗಿದೆ.
ಒಟ್ಟಿನಲ್ಲಿ, ‘ಕಮಲಿ’ ಧಾರಾವಾಹಿಯ ಅಮೂಲ್ಯ ಗೌಡ-ನಿರಂಜನ್ ಜೋಡಿಯ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ಅಭಿಮಾನಿಗಳ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನಟಿ ಅಮೂಲ್ಯ ಗೌಡ ಕಿರುತೆರೆ ಆಡಿಯನ್ಸ್‌ಗೆ ತುಂಬಾನೇ ಹತ್ತಿರವಾಗಿದ್ದಾರೆ. 2018ರಲ್ಲಿ ಪ್ರಸಾರವಾಗುತ್ತಿದ್ದ ʻಕಮಲಿʼ ಧಾರಾವಾಹಿ ಅಮೂಲ್ಯ ಗೌಡ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ʻಬಿಗ್ ಬಾಸ್ ಕನ್ನಡ ಓಟಿಟಿʼ ಮತ್ತು ʻಬಿಗ್ ಬಾಸ್ ಕನ್ನಡ ಸೀಸನ್ 9’ ರಲ್ಲೂ ಭಾಗವಹಿಸಿದ್ದರು.
ಇದನ್ನೂ ಓದಿ: Pavala Shyamala: ತೆಲುಗಿನ ಖ್ಯಾತ ಹಿರಿಯ ನಟಿ ಪಾವಲ ಶ್ಯಾಮಲ ಇನ್ನಿಲ್ಲ
ಸದ್ಯ ಕನ್ನಡದಲ್ಲಷ್ಟೇ ಅಲ್ಲ, ತೆಲುಗು ಸೀರಿಯಲ್‌ಗಳ ಪ್ರೇಕ್ಷಕರಿಗೂ ಅಮೂಲ್ಯ ಗೌಡ ಚಿರಪರಿಚಿತರಾಗಿದ್ದಾರೆ.