ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ದಿಯಾ ಕಥೆ ಮುಗಿಸಿದ ಜೈದೇವ್‌! ಗೌತಮ್‌ ಜೋಡಿಗೆ 'ಮಿಂಚು' ಸುಳಿವು ಸಿಗಲಿದ್ಯಾ?

Amruthadhaare Serial: ಜೈದೇವ್ ತನ್ನ ಪತ್ನಿ ದಿಯಾಳನ್ನು ಕೊಲೆ ಮಾಡಿದ್ದಾನೆ. ಜೈದೇವ್ ಅವಳ ಆಸ್ತಿಯ ಬಗ್ಗೆ ತಿಳಿದುಕೊಂಡು ಆಕೆಯನ್ನು ಸಾಯಿಸಲು ಪ್ಲ್ಯಾನ್​​ ಹಾಕಿದ್ದ. ಆದರೆ, ದುಡ್ಡು ಎಲ್ಲಿದೆ ತಿಳಿದುಕೊಳ್ಳುವ ಮೊದಲೇ ಆಕೆಯನ್ನು ಸಾಯಿಸಿದ್ದಾನೆ. ಇನ್ನೊಂದು ಕಡೆ ಭೂಮಿ ಮಗಳು ಹುಡುಕಾಟದಲ್ಲಿ ಇದ್ದಾಳೆ.

ದಿಯಾ ಕಥೆ ಮುಗಿಸಿದ ಜೈದೇವ್‌! ಗೌತಮ್‌ ಜೋಡಿಗೆ 'ಮಿಂಚು' ಸುಳಿವು ಸಿಗಲಿದ್ಯಾ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 1, 2026 9:55 AM

ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್‌ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಜೈದೇವ್ ತನ್ನ ಪತ್ನಿ ದಿಯಾಳನ್ನು ಕೊಲೆ ಮಾಡಿದ್ದಾನೆ. ಜೈದೇವ್ ಅವಳ ಆಸ್ತಿಯ ಬಗ್ಗೆ ತಿಳಿದುಕೊಂಡು ಆಕೆಯನ್ನು ಸಾಯಿಸಲು ಪ್ಲ್ಯಾನ್​​ ಹಾಕಿದ್ದ. ಆದರೆ, ದುಡ್ಡು ಎಲ್ಲಿದೆ ತಿಳಿದುಕೊಳ್ಳುವ ಮೊದಲೇ ಆಕೆಯನ್ನು ಸಾಯಿಸಿದ್ದಾನೆ. ಇನ್ನೊಂದು ಕಡೆ ಭೂಮಿ (Bhoomi) ಮಗಳು ಹುಡುಕಾಟದಲ್ಲಿ ಇದ್ದಾಳೆ.

ಗೌತಮ್ – ಭೂಮಿಕಾಗೆ 'ಮಿಂಚು' ಎಂಬ ಸುಳಿವು ಸಿಗಲಿದ್ಯಾ?

ಜೀ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಅದರಲ್ಲಿ ಭೂಮಿ, ಮಿಂಚು ಜೀವನದಲ್ಲಿ ಆಗಮನ ಆಗಿರೋ ಬಗ್ಗೆ ಹೇಳಿಕೊಂಡಿದ್ದಾಳೆ, ಅಷ್ಟೇ ಅಲ್ಲ ಮಗಳ ಹುಡುಕಾಟದಲ್ಲಿ ಇದೆ ಜೋಡಿ. ಅಖಿಲಾಂಡೇಶ್ವರಿ ಸಹಾಯದಿಂದ ಮಗಳ ಬಗ್ಗೆ ಸುಳಿವೂ ಸಿಕ್ಕಿದೆ. ಆದರೆ ಇದು ಶಕುನಿ ಮಾಮಗೆ ಗೊತ್ತಾಗಿದೆ.

ಈ ವಿಚಾರ ಇನ್ನೂ ಭೂಮಿ ಹಾಗೂ ಗೌತಮ್‌ಗೆ ಗೊತ್ತಿಲ್ಲ. ಭೂಮಿ ಕೂಡ ತನ್ನ ಗಂಡ ಗೌತಮ್‌, ಮಗಳನ್ನು ಮಡಿಲಲ್ಲಿ ಹಾಕುವೆ ಅನ್ನೋ ಭರವಸೆ ನೀಡಿದ್ದಾನೆ. ಹೀಗಾಗಿ ನೋವು ನಲಿವಿನ ನಡುವೆ ಮನತುಂಬೋ ಜಬರ್ದಸ್ತ್ ಸಂಚಿಕೆಗಳು ಮುಂದಿನ ದಿನಗಳಲ್ಲಿ ಪ್ರಸಾರ ಕಾಣಲಿದೆ.

ಇದನ್ನೂ ಓದಿ: Suman Kalyanpur: ಗಾಯಕಿ, ಕನ್ನಡತಿ ಸುಮನ್ ಕಲ್ಯಾಣಪುರ ಇನ್ನಿಲ್ಲ

ದಿಯಾಳ ಕೊಲೆ ಮಾಡಿದ ಜೈದೇವ್​

ಜೈದೇವ್‌ಗೆ ಮಿಂಚು ಬಗ್ಗೆ ಗೊತ್ತಾಗಿದೆ, ಶಕುನಿ ಮಾಮಾಗೆ ಟಾರ್ಚರ್‌ ಕೊಟ್ಟಿರುವ ಬಗ್ಗೆ ದಿಯಾಗೆ ಗೊತ್ತಾಗಿದೆ. ಅಷ್ಟೇ ಅಲ್ಲ ಜೈದೇವ್‌ಗೆ ಈ ಕುರಿತು ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾಳೆ. ನಿನಗೆ ಮನುಷತ್ವ ಇದೆಯಾ? ಆ ಮಗು ಏನು ಮಾಡಿತ್ತು? ತಂದೆ ತಾಯಿಯಿಂದ ಮಗವನ್ನು ದೂರು ಮಾಡೋದು ಪಾಪ ಎಂದಿದ್ದಾಳೆ. ಇದಕ್ಕೆ ಜೈದೇವ್‌ ಕೂಡ, ಸೇಡು ನನಗೆ ಮುಖ್ಯ. ಅವರ ಅವನತಿ ಕಂಡರೆ ನನ್ನ ಆತ್ಮಕ್ಕೆ ಶಾಂತಿ ಎಂದಿದ್ದಾನೆ. ಅತ್ತ ದಿಯಾ ಕೂಡ ಇದೆಲ್ಲ ನೋಡಿ, ಈ ವಿಚಾರವನ್ನು ಗೌತಮ್‌ಗೆ ತಿಳಿಸುವೆ ಎಂದು ಕಾಲ್‌ ಮಾಡಲು ಹೋಗಿದ್ದಾಳೆ.

ಆದರೆ ಅಷ್ಟೊತ್ತಿಗೆ ಆಗಲೇ ಜೈದೇವನಿಗೆ ಮೋಸ ಮಾಡಿದ ಪತ್ನಿ ದಿಯಾಳನ್ನು ಸಾಯಿಸಿಬಿಟ್ಟಿದ್ದಾನೆ ಜೈದೇವ್​. ಅವಳ ಆಸ್ತಿಯ ಬಗ್ಗೆ ತಿಳಿದುಕೊಂಡು ಆಕೆಯನ್ನು ಸಾಯಿಸಲು ಪ್ಲ್ಯಾನ್​​ ಹಾಕಿದ್ದ. ಆದರೆ, ದುಡ್ಡು ಎಲ್ಲಿದೆ ತಿಳಿದುಕೊಳ್ಳುವ ಮೊದಲೇ ಆಕೆಯನ್ನು ಸಾಯಿಸಿಬಿಟ್ಟಿದ್ದಾನೆ.

ಮುಂದೆ ಜೈದೇವ್‌ ಏನು ಮಾಡ್ತಾನೆ? ಮಿಂಚು ಪ್ರಾಣಕ್ಕೆ ಅಪಾಯ ತರ್ತಾನಾ? ಗೌತಮ್‌ಗೆ ಈ ವಿಚಾರ ಗೊತ್ತಾಗೋದು ಹೇಗೆ? ಶಕುನಿ ಮಾಮ ತಪ್ಪಿಸಿಕೊಂಡು ಎಲ್ಲ ವಿಚಾರ ಹೇಳ್ತಾನಾ? ಮಿಂಚುನಿಂದಾಗಿ ಗೌತಮ್‌ ಪ್ರಾಣಕ್ಕೆ ಅಪಾಯ ಇದೆಯಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಮಿಂಚು ರಹಸ್ಯಕ್ಕೆ ತಲುಪುವುದಕ್ಕೆ ಕೇಡಿ ಜೇಡಿ ಒಂದೇ ಹೆಜ್ಜೆ!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ