ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮಿಂಚು ರಹಸ್ಯಕ್ಕೆ ತಲುಪುವುದಕ್ಕೆ ಕೇಡಿ ಜೇಡಿ ಒಂದೇ ಹೆಜ್ಜೆ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಗೌತಮ್-ಭೂಮಿಕಾ ಮಿಂಚುವನ್ನು ದತ್ತು ನೀಡಲು ಯೋಚಿಸುತ್ತಿರುವಾಗ, ಜೈದೇವನಿಗೆ ಆಘಾತಕಾರಿ ಸತ್ಯವೊಂದು ತಿಳಿಯುತ್ತದೆ. ಲಕ್ಷ್ಮೀಕಾಂತನಿಂದ ಆಕಸ್ಮಿಕವಾಗಿ ಹೊರಬಿದ್ದ ಮಾತಿನಿಂದ, ಮಿಂಚು ಗೌತಮ್-ಭೂಮಿಕಾಳ ಸ್ವಂತ ಮಗಳು ಎಂಬ ರಹಸ್ಯ ಜೈದೇವನಿಗೆ ಗೊತ್ತಾಗುತ್ತದೆ. ಮುಂದೆ ಮಿಂಚು ಗತಿ ಏನು?

ಮಿಂಚು ರಹಸ್ಯಕ್ಕೆ ತಲುಪುವುದಕ್ಕೆ ಕೇಡಿ ಜೇಡಿ ಒಂದೇ ಹೆಜ್ಜೆ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 31, 2026 10:30 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಗೌತಮ್-ಭೂಮಿಕಾ ಮಿಂಚುವನ್ನು ದತ್ತು ನೀಡಲು ಯೋಚಿಸುತ್ತಿರುವಾಗ, ಜೈದೇವನಿಗೆ ಆಘಾತಕಾರಿ ಸತ್ಯವೊಂದು ತಿಳಿಯುತ್ತದೆ. ಲಕ್ಷ್ಮೀಕಾಂತನಿಂದ ಆಕಸ್ಮಿಕವಾಗಿ ಹೊರಬಿದ್ದ ಮಾತಿನಿಂದ, ಮಿಂಚು ಗೌತಮ್-ಭೂಮಿಕಾಳ (Gowtham Bhoomika) ಸ್ವಂತ ಮಗಳು ಎಂಬ ರಹಸ್ಯ ಜೈದೇವನಿಗೆ (Jaidev) ಗೊತ್ತಾಗುತ್ತದೆ. ಮುಂದೆ ಮಿಂಚು ಗತಿ ಏನು?
ಈಗಾಗಲೇ ಜ್ಯೋತಿಷಿ, ಸ್ವಂತ ಮಗಳಿಂದ ಗೌತಮ್‌ಗೆ ಕಂಟಕ ಇದೆ ಅನ್ನೋದನ್ನು ಹೇಳಿದ್ದರು. ಅದರಂತೆ ಈಗ ಜೈದೇವ್‌ಗೆ ಮಿಂಚು ಸತ್ಯ ಗೊತ್ತಾಗಿದೆ. ಮಿಂಚು ತಮ್ಮ ಮಗಳು ಅನ್ನೋದು ಗೌತಮ್‌ ಹಾಗೂ ಭೂಮಿಕಾ ಗೊತ್ತಿಲ್ಲ.

ಅತ್ತ ಮಹಿಮಾ ಮಗು ಕಳೆದುಕೊಂಡು ದುಃಖಿಸುತ್ತಿರುವ ಕಾರಣದಿಂದ ಮನಸ್ಸಿಲ್ಲದ ಮನಸ್ಸಿನಿಂದ ಮಿಂಚುವನ್ನು ಅವಳಿಗೆ ದತ್ತು ಕೊಡುವ ಬಗ್ಗೆ ಗೌತಮ್​, ಭೂಮಿಕಾ ಚಿಂತಿಸುತ್ತಿದ್ದಾರೆ. ಹಾಗೆ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Actor Jayaram: ಧೋನಿ ಪತ್ನಿಯ ಈ ನಡೆಗೆ ಗಾಬರಿಯಾಗಿ ಗೊಂದಲಕ್ಕೆ ಒಳಗಾಗಿದ್ದರಂತೆ ನಟ ಜಯರಾಂ!

ಕಿಡ್​ನ್ಯಾಪ್​ ಮಾಡಿ ಕಟ್ಟಿಹಾಕಿರುವ ಲಕ್ಷ್ಮೀಕಾಂತನಿಗೆ ದತ್ತು ಕೊಡುವ ವಿಷಯವನ್ನು ಜೈದೇವ ಹೇಳುತ್ತಾನೆ. ಆಗ ಲಕ್ಷ್ಮೀಕಾಂತ ಅಯ್ಯೋ ಇದೇನಾಗೋಯ್ತು, ಸ್ವಂತ ಮಗು ಮತ್ತೆ ದೂರವಾಗ್ತಾಳಾ ಎಂದು ಮಾತಾಡಿಕೊಳ್ಳುವಾಗ ಅದು ಜೈದೇವನ ಕಿವಿಗೆ ಬೀಳುತ್ತದೆ. ಮಿಂಚುನೇ ಗೌತಮ್​ ಪಾಲಿಗೆ ವಿಲನ್ ಆಗೋ ಹಾಗೆ ಜೈದೇವ್​ ತಲೆತಿರುಗಿಸಿದರೂ ಅಚ್ಚರಿ ಏನಿಲ್ಲ.

ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.

ಮಿಂಚುನಾ ಕಳೆದುಕೊಳ್ತಿರೋ ನೋವಿನಲಿ ಭೂಮಿಕಾ!

ಇನ್ನೊಂದು ಕಡೆ ಅಪೇಕ್ಷಾ ಹಾಗೂ ಪಾರ್ಥ ಭೂಮಿಕಾ ನಿರ್ಧಾರದ ಬಗ್ಗೆ ಪ್ರಶ್ನಿಸಿದ್ದಾರೆ. ಭೂಮಿ ಕೂಡ ಮಿಂಚು ಬಗ್ಗೆ ಭಾವುಕಳಾಗಿದ್ದಾಳೆ. ಒಂದು ಮಗು ಕಳೆದುಕೊಂಡ ನೋವು ಗೊತ್ತು. ಈಗ ಮಿಂಚು ಕೂಡ ದೂರ ಆಗುತ್ತಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾಳೆ.

ಜೆಡಿ ಅನಾಚಾರ ರೆಕಾರ್ಡ್‌

ಅತ್ತ ದಿಯಾ ಬೇಬಿ ಕೂಡ ಜೈದೇವ್‌ ಚಲನವಲನಗಳನ್ನು ನೋಡಿ, ತನ್ನ PA ಅನ್ನು ಅವನ ಹಿಂದೆ ಫಾಲೋ ಮಾಡಲು ಹೇಳಿದ್ದಾಳೆ. ಜೈದೇವ್‌, ಶಕುನಿ ಮಾಮಾಗೆ ಟಾರ್ಚರ್‌ ಕೊಟ್ಟಿರೋದನ್ನು ರೆಕಾರ್ಡ್‌ ಮಾಡಿದ್ದಾನೆ. ಈ ಸಾಕ್ಷಿಯಂದಲೂ ಜೈದೇವ್‌ಗ ಕಂಟಕ ಆದ್ರೂ ತಪ್ಪಿಲ್ಲ. ಮುಂದೆ ಜೈದೇವ್‌ ಏನು ಮಾಡ್ತಾನೆ? ಗೌತಮ್‌ ಮಗಳನ್ನು ಹೇಗೆ ಕಾಪಾಡಿಕೊಳ್ತಾನೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌? ಜೋಡಿಯ ಮುಂದಿನ ನಿರ್ಧಾರ ಏನು?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ