ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಭೂಮಿ ಬೇಹುಗಾರಿಕೆಯ ವಿಷಯ ಶಕುಂತಲಾನ ತಲುಪಲಿದ್ಯಾ ? ಇದು ʻಆಪರೇಷನ್​ ಮಧುರ ವ್ಯೂಹʼ!

Amruthadhaare Serial: ಅಮೃತಧಾರೆ (Amruthadhaare Serial) ಧಾರಾವಾಹಿಯಲ್ಲಿ ಭೂಮಿ-ಮಲ್ಲಿ ಬೇಹುಗಾರಿಕೆ ಭರ್ಜರಿಯಾಗಿಯೇ ನಡೆಯುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೀಗ ಶಕುಂತಲಾ ಅಡ್ಡ ಆಗ್ತಾಳಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಭೂಮಿ ಬೇಹುಗಾರಿಕೆಯ ವಿಷಯ ಶಕುಂತಲಾನ ತಲುಪಲಿದ್ಯಾ ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Aug 21, 2026 10:35 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare Serial) ಧಾರಾವಾಹಿಯಲ್ಲಿ ಭೂಮಿ-ಮಲ್ಲಿ ಬೇಹುಗಾರಿಕೆ ಭರ್ಜರಿಯಾಗಿಯೇ ನಡೆಯುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ (Bhoomika Malli) ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೀಗ ಶಕುಂತಲಾ ಅಡ್ಡ ಆಗ್ತಾಳಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಜೈದೇವನ ಹೆಣ್ಣಿನ ವೀಕ್ನೆಸ್

ಜೈದೇವ್‌ (Jaidev) ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ಮಲ್ಲಿ ಈ ಬಗ್ಗೆ ಭೂಮಿಕಾ ಮುಂದೆ ಹೇಳಿದ್ದಾಳೆ. ದಿಯಾಳ ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಫೇಲ್‌ ಆಗಿದೆ. ಆದರೆ ಇಲ್ಲಿಗೆ ಸುಮ್ಮನಾಗದ ಭೂಮಿ, ಮತ್ತೊಂದು ಪ್ಲ್ಯಾನ್‌ ಮಾಡ್ತಿದ್ದಾರೆ. ದಿಯಾ ಮತ್ತು ಅನು ಎನ್ನುವ ಯುವತಿಯರ ಕಾಣೆಯ ಹಿಂದೆ ಜೈದೇವನ ಕೈವಾಡ ಇದೆ ಎನ್ನುವುದು ಭೂಮಿಕಾ ಮತ್ತು ಮಲ್ಲಿಗೆ ತಿಳಿದಿದೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Bigg Boss Kannada 13: ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

ಮಧುರಾಳಿಗೆ ಮಾಡರ್ನ್​ ಡ್ರೆಸ್​ ತೊಡಿಸಿ ಜೈದೇವನ ಬಳಿ ಬಿಡಲಾಗಿದೆ. ಪಬ್​ನಲ್ಲಿ ಜೈದೇವ್​ ಡ್ರಿಂಕ್ಸ್​ ಮಾಡುತ್ತಿರುವಾಗ ಮಲ್ಲಿಯ ಆದೇಶದ ಮೇರೆಗೆ ಮಧುರಾ ಜೈದೇವನಿಗೆ ಡ್ಯಾಷ್​ ಹೊಡೆದಿದ್ದಾಳೆ. ಆರಂಭದಲ್ಲಿ ಜೈದೇವ ಏನೂ ತಲೆ ಕೆಡಿಸಿಕೊಳ್ಳಲಿಲ್ಲ. ಆ ಬಳಿಕ ಮಧುರಾ, ಜೈದೇವಇರುವ ಖುರ್ಚಿಯ ಎದುರು ಹೋಗಿ ಕುಳಿತು ಮಲ್ಲಿ ಹೇಳಿದಂತೆ ಸ್ಮೈಲ್​ ಮಾಡಿದ್ದಾಳೆ. ಜೈದೇವನ ವೀಕ್​ನೆಸ್​ ಹೆಣ್ಣು. ಅಂತೂ ಮಧುರ ಬಲೆಗೆ ಬಿದ್ದಿದ್ದಾನೆ.

ಅಷ್ಟೇ ಅಲ್ಲ ಮಧುರ ಮನೆ ತನಕ ಡ್ರಾಪ್‌ ಮಾಡಿದ್ದಾನೆ. ಇದು ಒಂದು ಕಡೆ ಆದ್ರೆ ಶಕುಂತಲಾ ಇನ್ನೊಂದು ಟೆನ್ಷನ್‌ ಇದ್ದಾಳೆ. ಭೂಮಿ ಲೇಟ್‌ ಆಗಿ ಬಂದಿರೋದು ನೋಡಿ, ಹೊರಗಡೆ ಹೋದ ಕಾರಣ ಏನು ಅಂತ ಕೇಳಿದ್ದಾಳೆ. ಅದಕ್ಕೆ ಭೂಮಿ ಬಾಯಿ ಬಿಡ್ತಾಳಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.



ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್‌ನನ್ನು ಎಚ್ಚರಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಜೈದೇವ್‌ ಕೂಡ ಅಲರ್ಟ್‌ ಆಗಿರಬಹುದು. ಗೌತಮ್‌ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್‌ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ.

ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ. ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Amruthadhaare Serial: ಭೂಮಿ ಬೆಹುಗಾರಿಕೆ ಚುರುಕಾಗೋ ಹೊತ್ತು! ಹಸಿದ ತೋಳ ಹಳ್ಳಕ್ಕೆ ಬೀಳಲೇ ಬೇಕು!

ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ