Bandar OTT release: ಅನುರಾಗ್ ಕಶ್ಯಪ್ ಸಿನಿಮಾ ʻಬಂದರ್ʼ ಒಟಿಟಿ ರಿಲೀಸ್ ಡೇಟ್ ಅನೌನ್ಸ್!
Bandar OTT release: ಬಾಬಿ ಡಿಯೋಲ್ ಅಭಿನಯದ ಬಂದರ್ ಚಿತ್ರವು ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Zee5 ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಜೀ5 ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಆಗಸ್ಟ್ 28 ರಿಂದ ಬಂದರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ. ಅನುರಾಗ್ ಕಶ್ಯಪ್ ನಿರ್ದೇಶನದ ಬಂದರ್ ಚಿತ್ರದಲ್ಲಿ ಬಾಬಿ ಡಿಯೋಲ್ ನಾಯಕನಾಗಿ ನಟಿಸಿದ್ದಾರೆ, ಜೊತೆಗೆ ಸನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಮತ್ತು ಸಬಾ ಆಜಾದ್ ಕೂಡ ನಟಿಸಿದ್ದಾರೆ
ಬಂದರ್ ಸಿನಿಮಾ -
ಥಿಯೇಟ್ರಿಕಲ್ ಬಿಡುಗಡೆಯೊಂದಿಗೆ ಭಾರಿ ಸದ್ದು ಮಾಡಿದ ನಂತರ, ಅನುರಾಗ್ ಕಶ್ಯಪ್ (Anurag Kashyap) ಅವರ ಬಾಬಿ ಡಿಯೋಲ್ ಅಭಿನಯದ ಬಂದರ್ ಚಿತ್ರವು ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ (Zee 5 Streaming) Zee5 ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
ಜೀ5 ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಆಗಸ್ಟ್ 28 ರಿಂದ ಬಂದರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ. ಅನುರಾಗ್ ಕಶ್ಯಪ್ ನಿರ್ದೇಶನದ ಬಂದರ್ ಚಿತ್ರದಲ್ಲಿ ಬಾಬಿ ಡಿಯೋಲ್ ನಾಯಕನಾಗಿ ನಟಿಸಿದ್ದಾರೆ, ಜೊತೆಗೆ ಸನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಮತ್ತು ಸಬಾ ಆಜಾದ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: Yash: ‘ರಾಮಾಯಣ’ದಲ್ಲಿ ಯಶ್ ಅಬ್ಬರ; ಫಿದಾ ಆದ ಹನಿ ಸಿಂಗ್
ಡಾರ್ಕ್ ಹ್ಯೂಮರ್
ಬಂದರ್ʼ ಸಿನಿಮಾ ಕೂಡ ಸಸ್ಪೆನ್ಸ್ ಮತ್ತು ಡಾರ್ಕ್ ಹ್ಯೂಮರ್ ಒಳಗೊಂಡಿರುವ ಕಥಾಹಂದರವನ್ನ ಹೊಂದಿದೆ ರಾಜ್ ಬಿ ಶೆಟ್ಟಿ ಅವರ ಲುಕ್ ಮತ್ತು ಅವರು ವಿಲಕ್ಷಣ ನಗು ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ ಸಿನಿಮಾ.
#MeTooForMen ಚರ್ಚೆಯಲ್ಲಿ ಬೇರೂರಿರುವ ಬಂದರ್, "ಒಬ್ಬ ಮಹಿಳೆಯ ಆರೋಪದಿಂದ ಜೀವನ ತಲೆಕೆಳಗಾದ ಪುರುಷನ ಕಥೆಯನ್ನು ಒಳಗೊಂಡಿದೆ.
ಬಿಡುಗಡೆಯಾದ ನಂತರ ಈ ಚಿತ್ರ ಪ್ರೇಕ್ಷಕರನ್ನು ಸೆಳೆದಿದೆ. ಕೆಲವರು ಇದನ್ನು ಸುಳ್ಳು ಆರೋಪಗಳಿಗೆ ಬಲಿಯಾದವರ ದುಃಸ್ಥಿತಿಯನ್ನು ಎತ್ತಿ ತೋರಿಸುವ ಧೈರ್ಯಶಾಲಿ ಪ್ರಯತ್ನ ಎಂದು ಕಮೆಂಟ್ ಮಾಡಿದರು.

ಭಾರತದಾದ್ಯಂತ ತೆರೆಗಳಿಗಾಗಿ ಹೋರಾಡಬೇಕಾಗಿ ಬಂದರ್ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ. ಚಿತ್ರಮಂದಿರಗಳಲ್ಲಿ ಸೀಮಿತ ಪ್ರದರ್ಶನದಲ್ಲಿ ಇದು ವಿಶ್ವಾದ್ಯಂತ ₹ 5 ಕೋಟಿಗಿಂತ ಕಡಿಮೆ ಗಳಿಸಿತು. ಗ್ಯಾಂಗ್ಸ್ ಆಫ್ ವಸೇಪುರ್ʼ, ʻದೇವ್ ಡಿʼನಂತಹ ಕಲ್ಟ್ ಸಿನಿಮಾಗಳನ್ನ ನೀಡಿದ ಅನುರಾಗ್ ಕಶ್ಯಪ್ ಅವರ ಸಿನಿಮಾ ಎಂದರೆ ಅಲ್ಲಿ ಕಥೆ ಮತ್ತು ನಿರೂಪಣೆ ಎರಡೂ ವಿಭಿನ್ನವಾಗಿರುತ್ತದೆ. ʻಬಂದರ್ʼ ಸಿನಿಮಾ ಕೂಡ ಸಸ್ಪೆನ್ಸ್ ಮತ್ತು ಡಾರ್ಕ್ ಹ್ಯೂಮರ್ ಒಳಗೊಂಡಿರುವ ಕಥಾಹಂದರವನ್ನ ಹೊಂದಿದೆ.
ಇದನ್ನೂ ಓದಿ: Bigg Boss Kannada 13: ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?
ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದು. ಸ್ಯಾಫ್ರನ್ ಮ್ಯಾಜಿಕ್‌ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಜೀ ಸ್ಟುಡಿಯೋಸ್ ವಿತರಿಸಿರುವ ಈ ಚಿತ್ರದಲ್ಲಿ ಸಬಾ ಆಜಾದ್, ಸನ್ಯಾ ಮಲ್ಹೋತ್ರಾ ಮತ್ತು ಸಪ್ನಾ ಪಬ್ಬಿ ಇತರರು ನಟಿಸಿದ್ದಾರೆ.