Amruthadhaare serial: ಭೂಮಿ - ಮಲ್ಲಿ ಮಾಡಿರೋ ಪ್ಲ್ಯಾನ್ ಶಕುಂತಲಾಗೆ ಗೊತ್ತಾಗೇ ಹೋಯ್ತು!
Amruthadhaare serial: ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದರು. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಜೀವಾ ಕೂಡ ಇದಕ್ಕೆ ಸಾಥ್ ಕೂಡ ಕೊಟ್ಟಿದ್ದ. ಮಧುರಾ, ಇದೀಗ ಜೈದೇವ್ ಬಲೆಗೆ ಬಿದ್ದಿದ್ದಾಳೆ. ಜೈದೇವ್ ವಿಚಾರ ತಿಳಿದುಕೊಳ್ಳಲು ಆತನ ಮನೆಯಲ್ಲಿ ಮಧುರಾ ಆಶ್ರಯ ಪಡೆದುಕೊಂಡಿದ್ದಳು.
ಅಮೃತಧಾರೆ ಧಾರಾವಾಹಿ -
ಜೈದೇವ್‌ನ ದಿಯಾ ಬೇಬಿ ಮತ್ತು ಹಾಲಿ ಗೆಳತಿ ದಿಢೀರ್ ನಾಪತ್ತೆಯಾಗಿದ್ದು, ಇಬ್ಬರ ಹುಡುಕಲು ಜೀವಾ ಮುಂದಾಗಿದ್ದಾನೆ. ಇದಕ್ಕಾಗಿ ಐಪಿಎಸ್ ಆಗಿರೋ ಮಲ್ಲಿ ಸಹಾಯ ಕೇಳಿದ್ದನು. ವಿಲನ್ ಜೈದೇವ್‌ನನ್ನು ಬಂಧಿಸಲು ಮಲ್ಲಿ ಮತ್ತು ಭೂಮಿಕಾ (Bhoomika) ಹೂಡಿದ ಹನಿಟ್ರ್ಯಾಪ್ ಈಗ ಫೇಲ್ ಆಗಿದೆ. ಪೊಲೀಸ್ ಅಧಿಕಾರಿ ಮಧುರಾಳ (Madhura) ನಿಜಬಣ್ಣ ಜೈದೇವ್‌ಗೆ ತಿಳಿದುಹೋಗಿದೆ. ಭೂಮಿ - ಮಲ್ಲಿ ಮಾಡಿರೋ ಪ್ಲ್ಯಾನ್ ಶಕುಂತಲಾಗೆ ತಿಳಿದಿದೆ. ಮಧುರ ಆಡ್ತಿರೋ ಆಟ ಜೈದೇವ್ ಮುಂದೆ ಬಯಲಾಗಿದೆ.
ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದರು. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಜೀವಾ ಕೂಡ ಇದಕ್ಕೆ ಸಾಥ್ ಕೂಡ ಕೊಟ್ಟಿದ್ದ. ಮಧುರಾ, ಇದೀಗ ಜೈದೇವ್ ಬಲೆಗೆ ಬಿದ್ದಿದ್ದಾಳೆ. ಜೈದೇವ್ ವಿಚಾರ ತಿಳಿದುಕೊಳ್ಳಲು ಆತನ ಮನೆಯಲ್ಲಿ ಮಧುರಾ ಆಶ್ರಯ ಪಡೆದುಕೊಂಡಿದ್ದಳು.
ಇದನ್ನೂ ಓದಿ: Amruthadhaare Serial: ಭೂಮಿ - ಮಲ್ಲಿ ಬಲೆಯ ಸುಳಿವು ಜೇಡಿಗೆ ಸಿಕ್ಕೇ ಬಿಡ್ತು! ಮಧುರಾ ಕಥೆ ಏನು?
ಜೈದೇವ್‌ಗಾಗಿ ಹಬ್ಬ ಆಚರಿಸಿ ರುಚಿಯಾದ ಅಡುಗೆ ಮಾಡಿದ್ದಳು. ಇನ್ನೇನು ಮಧುರಾ ರಚಿಸಿದ ವ್ಯೂಹದಲ್ಲಿ ಜೈದೇವ್ ಸಿಲುಕುತ್ತಾನೆ ಅನ್ನೋವಷ್ಟರಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜೀವಾ ಮತ್ತು ಭೂಮಿಕಾ ಜೊತೆಯಲ್ಲಿಯೂ ಮಧುರಾ ಮಾತನಾಡಿರುವ ವಿಷಯ ಜೈದೇವ್ ಮುಂದೆ ಬಯಲಾಗಿದೆ. ತನ್ನ ಮಾತುಗಳೆಲ್ಲಾ ರೆಕಾರ್ಡ್ ಮಾಡಿಕೊಂಡಿರುವ ಸೀಕ್ರೆಟ್ ಸಹ ತಿಳಿದಿದೆ. ಪೊಲೀಸ್ ಐಡೆಂಟಿಟಿ ಕಾರ್ಡ್ ಜೈದೇವ್‌ಗೆ ಸಿಕ್ಕಿದೆ. ಇಲ್ಲಿಗೆ ತನ್ನನ್ನು ಟ್ರ್ಯಾಪ್ ಮಾಡಲು ಮಲ್ಲಿ ಮಾಡಿರೋ ಪ್ಲಾನ್ ರಿವೀಲ್ ಆಗಿದೆ.
ಇದೀಗ ಜೈದೇವ್ ಮಧುರಾಳನ್ನು ಫಾಲೋ ಮಾಡಿಕೊಂಡು ಹೋಗಿದ್ದಾನೆ. ಅತ್ತ ಶಕುಂತಲಾಗೂ ಭೂಮಿ-ಮಲ್ಲಿ ರೆಕಾರ್ಡ್ ಮಾಡಿರೋ ವಿಚಾರ ಗೊತ್ತಾಗಿದೆ. ಮಧುರಾಗೂ ಜೈದೇವ್ ಮೇಲೆ ಡೌಟ್ ಶುರುವಾಗಿದೆ. ಶಕುಂತಲಾ ಈ ವಿಚಾರ ಮಗನಲ್ಲಿ ಪ್ರಸ್ತಾಪಿಸುತ್ತಿದ್ದಾಗ, ಇನ್ನು ನನ್ನ ತಂಟೆಗೆ ಬರಬಾರದು ಹಾಗೇ ಮಾಡ್ತೀನಿ ಅಂತ ಜೈದೇವ್ ಪಣ ತೊಟ್ಟಿದ್ದಾನೆ.
ಮುಂದೆ ಮಲ್ಲಿ-ಭೂಮಿ ಗತಿ ಏನು? ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ. ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ:
ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.