ʻಕಾಂತಾರ: ಚಾಪ್ಟರ್ 1ʼ ಸಿನಿಮಾ ನೋಡಿದ್ಮೇಲೆ ರಿಷಬ್ ಶೆಟ್ಟಿಗೆ ಕಾಲ್ ಮಾಡಿದ್ದ ವಿಜಯ್ ಸೇತುಪತಿ; ಇಬ್ಬರ ನಡುವಿನ ಮಾತುಕತೆ ಹೇಗಿತ್ತು?
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟ ವಿಜಯ್ ಸೇತುಪತಿ ಅವರು 'ಕಾಂತಾರ' ಸಿನಿಮಾ ನೋಡಿ ರಿಷಬ್ ಶೆಟ್ಟಿಗೆ ಕಾಲ್ ಮಾಡಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಖುದ್ದಾಗಿ ಫೋನ್ ಮಾಡಿ ಅಭಿನಂದಿಸಿದ ವಿಚಾರವನ್ನು ತಿಳಿಸಿದ ಅವರು, ರಿಷಬ್ ಅವರ ನಟನಾ ಶೈಲಿ ಮತ್ತು ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
-
ಕಾಂತಾರ: ಚಾಪ್ಟರ್ 1 ಸಿನಿಮಾದ ಮೂಲಕ ರಿಷಬ್ ಶೆಟ್ಟಿಗೆ ಜಾಸ್ತಿ ಜನಪ್ರಿಯತೆ ಸಿಕ್ಕಿದೆ. ಅವರೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪರಭಾಷೆಯ ಕಲಾವಿದರು ಕೂಡ ಈಗ ರಿಷಬ್ ಶೆಟ್ಟಿ ಪ್ರತಿಭೆ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ವಿಜಯ್ ಸೇತುಪತಿ ಅವರು ಈಚೆಗೆ ಒಂದು ಇವೆಂಟ್‌ನಲ್ಲಿ ರಿಷಬ್ ಶೆಟ್ಟಿಗೆ ಮನಸಾರೆ ಹೊಗಳಿದ್ದಾರೆ. ʻಕಾಂತಾರ: ಚಾಪ್ಟರ್ 1ʼ ಸಿನಿಮಾ ನೋಡಿದ್ಮೇಲೆ ರಿಷಬ್ ಶೆಟ್ಟಿಗೆ ಕಾಲ್ ಮಾಡಿದ್ದ ವಿಚಾರವನ್ನು ಸಹ ಎಲ್ಲರೆದುರು ಹೇಳಿದ್ದಾರೆ.
ವೇದಿಕೆ ಮೇಲೆ ವಿಜಯ್ ಸೇತುಪತಿ ಹೇಳಿದ್ದೇನು?
"ನಾನು ಕಾಂತಾರ ಸಿನಿಮಾ ನನಗೆ ಆ ಸಿನಿಮಾ ಬಹಳ ಇಷ್ಟವಾಯ್ತು. ಕೂಡಲೇ ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದೆ. ಆ ಸಿನಿಮಾ ಒಂದು ರೀತಿ ಜೀವ ತುಂಬಿದಂತಿತ್ತು. ಆ ಜೀವನವನ್ನು ನೋಡಿ, ಅನುಭವಿಸಿದವರಿಗೆ ಮಾತ್ರವೇ ಆ ರೀತಿ ಚಲನಚಿತ್ರವನ್ನು ಮಾಡಲು ಸಾಧ್ಯ. ರಿಷಬ್ ಅವರನ್ನು ಬಿಟ್ಟು ಬೇರೆ ಯಾರೂ ಸಹ ಕಾಂತಾರ ಸಿನಿಮಾ ಮಾಡಲು ಸಾಧ್ಯವಿರುತ್ತಿರಲಿಲ್ಲ. ನಮಗೆ ಆ ರೀತಿ ಅನಿಸುವಂತೆ ಅವರು ಅದರಲ್ಲಿ ನಟಿಸಿದ್ದಾರೆ. ನಾನು ಫೋನ್ ಮಾಡಿ, ಪರಿಚಯ ಮಾಡಿಕೊಂಡೆ. ಆಗ ಅವರು, "ಸರ್, ನೀವು ನನಗೆ ಚೆನ್ನಾಗಿ ಗೊತ್ತು" ಎಂದರು. ನನಗೆ ಆಗ ತುಂಬಾ ಖುಷಿ ಆಯ್ತು" ಎಂದು ವಿಜಯ್ ಸೇತುಪತಿ ಹೇಳಿಕೊಂಡಿದ್ದಾರೆ.
"ನಾನು ಕೂಡ ರಿಷಬ್ ಅವರ ರೀತಿಯಲ್ಲೇ 2004ರಲ್ಲಿ ನಟನಾ ವೃತ್ತಿ ಆರಂಭಿಸಿದೆ. ಇಂದು ಅವರು ಸಿನಿಮಾದ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡಿ, ಅದನ್ನು ಕಲಿತು, ಎಲ್ಲದರಲ್ಲೂ ಯಶಸ್ವಿ ಆಗಿದ್ದಾರೆ. ನಿಮ್ಮೊಂದಿಗೆ ನನಗೆ ಕೆಲಸ ಮಾಡುವ ಆಸೆ ಇದೆ. ನಾವಿಬ್ಬರು ಈ ವೇದಿಕೆ ಮೇಲೆ ಒಟ್ಟಿಗೆ ಇದ್ದೇವೆ ಎಂದು ಈ ಮಾತನ್ನು ಹೇಳುತ್ತಿಲ್ಲ. ಖಂಡಿತ ನಿಮ್ಮೊಂದಿಗೆ (ರಿಷಬ್) ಕೆಲಸ ಮಾಡುವಾಸೆ ಇದೆ" ಎಂದು ವಿಜಯ್ ಸೇತುಪತಿ.
ವಿಜಯ್ ಸೇತುಪತಿ - ರಿಷಬ್ ಶೆಟ್ಟಿ ಮಾತುಕತೆ
Vijay sethupathi watched kantara and called @shetty_rishab & congratulated on success.
— Gk (@Ggk_here_) March 22, 2026
Beautiful bonding bw rishab %& setupathi 😍👌 @VijaySethuOffl #kantarachapter2 #kantara pic.twitter.com/AtwU99rZr2
ʻಲೆಜೆಂಡರಿʼ ಮಣಿರತ್ನಂ ಜೊತೆ ಕೈಜೋಡಿಸಿದ ನಟ ವಿಜಯ್ ಸೇತುಪತಿ; ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ
ವಿಜಯ್ ಸೇತುಪತಿ ಮಾತಿಗೆ ರಿಷಬ್ ಶೆಟ್ಟಿ ಹೇಳಿದ್ದೇನು?
"ವಿಜಯ್ ಸೇತುಪತಿ ಸರ್ ನನಗೆ ಫೋನ್ ಮಾಡಿದಾಗ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರುಮಾಡಿದರು. 'ನಾನು ನಿಮ್ಮ ಸಿನಿಮಾ ನೋಡಿದೆ, ತುಂಬಾ ಚೆನ್ನಾಗಿದೆ' ಎಂದು ಹೇಳಿದರು. ನಂಗೆ ಆಗ ತುಂಬಾ ಖುಷಿಯಾಗಿ ನಾನು ತಮಿಳಿನಲ್ಲೇ ಅವರಿಗೆ ಪ್ರತಿಕ್ರಿಯಿಸಿದೆ. 'ಸರ್, ತುಂಬಾ ಧನ್ಯವಾದಗಳು. ನೀವು ನನಗೆ ಫೋನ್ ಮಾಡಿದ್ದೇ ದೊಡ್ಡ ವಿಷಯ' ಎಂದು ಹೇಳಿದೆ. ನನಗೆ ತಮಿಳು ಮಾತನಾಡಲು ಬರುತ್ತದೆ ಎಂದು ತಿಳಿದ ತಕ್ಷಣ ನಮ್ಮ ನಡುವೆ ಸುದೀರ್ಘ ಸಂಭಾಷಣೆ ನಡೆಯಿತು" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. "ನಿಮ್ಮೊಂದಿಗೆ ಕೆಲಸ ಮಾಡಬೇಕು" ಎಂಬ ವಿಜಯ್ ಸೇತುಪತಿ ಮಾತಿಗೆ ರಿಷಬ್ ಶೆಟ್ಟಿ ಕೂಡ "ಖಂಡಿತಾ ಸರ್" ಎಂದು ಹೇಳಿದರು.