ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅನುಷ್ಕಾ ಶೆಟ್ಟಿ ಮದುವೆ ವದಂತಿಗೆ ಬ್ರೇಕ್: ಸುಳ್ಳು ಸುದ್ದಿ ಹರಡುವವರ ವಿರುದ್ಧ 'ಸ್ವೀಟಿ' ತಂಡ ಗರಂ!

ನಟಿ ಅನುಷ್ಕಾ ಶೆಟ್ಟಿ ಮದುವೆ ಕುರಿತ ವದಂತಿಗಳ ಬಗ್ಗೆ ಅವರ ತಂಡ ಬೇಸರ ವ್ಯಕ್ತಪಡಿಸಿದೆ. ಬೆಂಗಳೂರು ಉದ್ಯಮಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಅವರ ತಂಡ, ಮದುವೆ ಎಂಬುದು ಅತ್ಯಂತ ವೈಯಕ್ತಿಕ ವಿಷಯ ಎಂದು ಹೇಳಿದೆ. ಪದೇಪದೇ ವದಂತಿ ಹರಡುವುದು ಖಾಸಗಿತನದ ಮೇಲಿನ ಅತಿಕ್ರಮಣ ಎಂದು ತಂಡವು ಖಂಡಿಸಿದೆ.

ಮದುವೆ ಸುದ್ದಿಗೆ ನಟಿ ಅನುಷ್ಕಾ ಶೆಟ್ಟಿ ತೀವ್ರ ಅಸಮಾಧಾನ

-

Avinash GR
Avinash GR Mar 19, 2026 12:12 PM

ʻಸ್ವೀಟಿʼ ಅನುಷ್ಕಾ ಶೆಟ್ಟಿ ಅವರು ಸಿನಿಮಾ ವಿಚಾರಗಳಿಗಿಂತ ಹೆಚ್ಚು ಸುದ್ದಿಯಾಗುವುದೇ ಮದುವೆ ಕುರಿತಾಗಿ. ಹೌದು, ಅನುಷ್ಕಾ ಶೆಟ್ಟಿ ಮದುವೆ ಯಾವಾಗ? ಅವರು ಪ್ರಭಾಸ್‌ ಜೊತೆಗೆ ಮದುವೆ ಆಗುತ್ತಾರೆ? ಇಲ್ಲ, ಅವರು ಮದುವೆನೇ ಆಗೋದಿಲ್ವಂತೆ. ಹೀಗೆ ಏನೇನೋ ಸುದ್ದಿಗಳು ಹರಿದಾಡುತ್ತವೆ. ಈಚೆಗೆ ಬೆಂಗಳೂರು ಮೂಲದ ಉದ್ಯಮಿ ಜೊತೆ ಅನುಷ್ಕಾ ಮದುವೆ ಅನ್ನೋ ಸುದ್ದಿ ಸಖತ್‌ ವೈರಲ್‌ ಆಗಿತ್ತು. ಇದೀಗ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಹೌದು, ಅನುಷ್ಕಾ ಶೆಟ್ಟಿ ಅವರ ತಂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಆ ರೀತಿ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಅನುಷ್ಕಾ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪದೇಪದೇ ಈ ರೀತಿ ಸುದ್ದಿಗಳು ಹರಿದಾಡುತ್ತಿರುವುದರ ಬಗ್ಗೆ ಅನುಷ್ಕಾ ಶೆಟ್ಟಿ ಅವರು ಬೇಸರದ ಜೊತೆಗೆ ಸಿಟ್ಟನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.

Anushka Shetty: ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

"ದೃಢೀಕರಿಸದ ಮಾಹಿತಿಯನ್ನು ಹರಡುತ್ತಿರುವ ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳ ವಿರುದ್ಧ ತಂಡವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ವೈಯಕ್ತಿಕ ವಿಷಯಗಳನ್ನು ಹೆಡ್‌ಲೈನ್ ಮಾಡುವುದರ ಬದಲು, ಅಧಿಕೃತ ಮಾಹಿತಿ ಬರುವವರೆಗೆ ಕಾಯುವಂತೆ ವಿನಂತಿಸಿದೆ. ವಾಸ್ತವಗಳಿಲ್ಲದೆ ಪದೇ ಪದೇ ವದಂತಿಗಳನ್ನು ಪ್ರಕಟಿಸುವುದು ಪತ್ರಿಕೋದ್ಯಮವಲ್ಲ, ಬದಲಾಗಿ ಇದು ಒಬ್ಬರ ಖಾಸಗಿತನದ ಮೇಲಿನ ಅತಿಕ್ರಮಣ ಎಂದು ಹೇಳಿದೆ.

ವಯಸ್ಸಿನ ಕುರಿತ ಚರ್ಚೆಗೆ ಆಕ್ಷೇಪ

ಅನುಷ್ಕಾ ಶೆಟ್ಟಿ ಅವರ ವಯಸ್ಸಿನ ಬಗ್ಗೆ ಸತತವಾಗಿ ನಡೆಯುತ್ತಿರುವ ಚರ್ಚೆಗಳ ಕುರಿತೂ ಅವರ ತಂಡವು ಖಂಡನೆ ವ್ಯಕ್ತಪಡಿಸಿದೆ. ಇದನ್ನು 'ಪರೋಕ್ಷ ವಯಸ್ಸಿನ ಅವಹೇಳನ' ಎಂದು ಬಣ್ಣಿಸಿರುವ ತಂಡ, "ಇಂತಹ ವಿಚಾರಗಳು ಕೇವಲ ನಟಿಯರ ಮೇಲೆ ಏಕೆ ಕೇಂದ್ರೀಕೃತವಾಗಿರುತ್ತವೆ? ನಟರನ್ನು ಇಂತಹ ಪ್ರಶ್ನೆಗಳಿಂದ ಏಕೆ ದೂರ ಇಡಲಾಗುತ್ತದೆ?" ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಲಾಗಿದೆ.

ಅನುಷ್ಕಾ ಶೆಟ್ಟಿ ಅವರು ಎಂದಿಗೂ ಅಗ್ಗದ ಪ್ರಚಾರಕ್ಕಾಗಿ ಇಂತಹ ಸ್ಟಂಟ್‌ಗಳನ್ನು ಅವಲಂಬಿಸಿಲ್ಲ. ಅವರು ತಮ್ಮ ವೈಯಕ್ತಿಕ ಜೀವನವನ್ನು ಗೌಪ್ಯವಾಗಿಡಲು ಬಯಸುತ್ತಾರೆ ಎಂದು ತಂಡವು ಹೇಳಿದ್ದು, ಮದುವೆ ಎಂಬುದು ಅತ್ಯಂತ ವೈಯಕ್ತಿಕ ವಿಷಯವಾಗಿದ್ದು, ಕೇವಲ 'ಕ್ಲಿಕ್ಸ್' ಅಥವಾ 'ಎಂಗೇಜ್‌ಮೆಂಟ್' ಹೆಚ್ಚಿಸಿಕೊಳ್ಳಲು ಅದನ್ನು ಸೆನ್ಸೇಷನಲ್ ಮಾಡಬಾರದು ಎಂದು ಮನವಿ ಮಾಡಿದೆ.

Anushka Shetty: ಅವ್ನು ಲವ್‌ ಯೂ ಅಂದ.... ಹಳೆ ಲವ್ ಸ್ಟೋರಿ ರಿವಿಲ್ ಮಾಡಿದ ನಟಿ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ತಂಡದ ಅಧಿಕೃತ ಹೇಳಿಕೆ

"ಅನುಷ್ಕಾ ಶೆಟ್ಟಿ ಅವರ ವಿವಾಹದ ಬಗ್ಗೆ ನಿರಂತರವಾಗಿ ಪೋಸ್ಟ್ ಮಾಡುತ್ತಿರುವ ಮಾಧ್ಯಮ ಸಂಸ್ಥೆಗಳು ಮತ್ತು ಪೇಜ್‌ಗಳಿಗೆ ವಿನಂತಿ. ಒಬ್ಬರ ವೈಯಕ್ತಿಕ ಜೀವನವನ್ನು ದೈನಂದಿನ ಸುದ್ದಿಯನ್ನಾಗಿ ಮಾಡುವ ಮೊದಲು ಅಧಿಕೃತ ದೃಢೀಕರಣಕ್ಕಾಗಿ ಕಾಯಿರಿ. ಊಹೆಗಳು ಮತ್ತು ದೃಢೀಕರಿಸದ ಮಾಹಿತಿಯನ್ನು ಪದೇ ಪದೇ ಪ್ರಕಟಿಸುವುದು ಪತ್ರಿಕೋದ್ಯಮವಲ್ಲ, ಅದು ಹಸ್ತಕ್ಷೇಪ" ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.