ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actor Yash: ಭಾರತದ ಜನಪ್ರಿಯ ಬಿಜಿಎಂಐ ಗೇಮಿನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌!

Toxic Movie: ಬಿಜಿಎಂಐ ತನ್ನ ಅದ್ಭುತ ಪ್ರಚಾರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಜೊತೆ 'ಟಾಕ್ಸಿಕ್' ಚಿತ್ರತಂಡ ಒಪ್ಪಂದ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಇದಕ್ಕೂ ಮುಂಚೆ ಯಶ್‌ ಅವರು 'ವೆರೈಟಿ' ನಿಯತಕಾಲಿಕೆಯ ಕವರ್ ಪೇಜ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದು ಸಖತ್‌ ಸೌಂಡ್‌ ಮಾಡಿದ್ದರು. ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಯಶ್‌.

ಭಾರತದ ಜನಪ್ರಿಯ ಬಿಜಿಎಂಐ ಗೇಮಿನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌!

ನಟ ಯಶ್‌ -

Yashaswi Devadiga
Yashaswi Devadiga May 8, 2026 6:37 PM

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಭಾರತದಲ್ಲಿ ಜನಪ್ರಿಯ ಆನ್‌ಲೈನ್ ಮಲ್ಟಿಪ್ಲೇಯರ್ ಗೇಮ್ ಎನಿಸಿಕೊಂಡಿದೆ. ಇದು PUBG ಮೊಬೈಲ್‌ನ ಭಾರತೀಯ ಆವೃತ್ತಿಯಾಗಿದೆ. ಯಶ್ ಅವರು ಇದೀಗ ಭಾರತದ ಜನಪ್ರಿಯ ಗೇಮ್ ಆಗಿರುವ ಬಿಜಿಎಂಐನಲ್ಲಿ (BGMI) ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. BGMI ನ 4.4 ಅಪ್‌ಡೇಟ್‌ನಲ್ಲಿ ಯಶ್ (Yash) ಅವರ ‘ಟಾಕ್ಸಿಕ್’ (Toxic Movie) ಚಲನಚಿತ್ರದ ಥೀಮ್ ಆಧಾರಿತ ವಿಶೇಷ ಸ್ಕಿನ್‌ಗಳು ಮತ್ತು ಔಟ್‌ಫಿಟ್‌ಗಳು (Outfit) ಲಭ್ಯವಿರಲಿವೆ ಎಂದು ವರದಿಯಾಗಿದೆ.

ಬಿಜಿಎಂಐ ತನ್ನ ಅದ್ಭುತ ಪ್ರಚಾರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಜೊತೆ 'ಟಾಕ್ಸಿಕ್' ಚಿತ್ರತಂಡ ಒಪ್ಪಂದ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಆ ಮೂಲಕ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಬಿಜಿಎಂಐ ತನ್ನ ಮುಂದಿನ 4.4 ಅಪ್‌ಡೇಟ್‌ ಅನ್ನು ಶೀಘ್ರವೇ ಹೊರತರಲಿದೆ. ಹೊಸ ಆವೃತ್ತಿಯಲ್ಲಿ ಯಶ್ ಅವರು ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಸಹ ಗೇಮಿನಲ್ಲಿ ಇರಲಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: Amruthadhaare Serial: ಅಡೆತಡೆಗಳು‌ ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್‌!

ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶ್‌ ಭರ್ಜರಿ ಸೌಂಡ್‌

ಇದಕ್ಕೂ ಮುಂಚೆ ಯಶ್‌ ಅವರು 'ವೆರೈಟಿ' ನಿಯತಕಾಲಿಕೆಯ (Variety’s Cover Reveal) ಕವರ್ ಪೇಜ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದು ಸಖತ್‌ ಸೌಂಡ್‌ ಮಾಡಿದ್ದರು. ಅಂತಾರಾಷ್ಟ್ರೀಯ ನಿಯತಕಾಲಿಕೆ ‘ವೆರೈಟಿ’ ತನ್ನ ಕವರ್ ಪೇಜ್ ಮೇಲೆ ಯಶ್ ಅವರ ಫೋಟೋವನ್ನು ಫೀಚರ್ ಮಾಡಿತ್ತು. ಐಷಾರಾಮಿ ಕಾರಿನ ಒಳಗೆ ಬಿಳಿ ಬಣ್ಣದ ಸೂಟ್ ಹಾಗೂ ಹ್ಯಾಟ್ ಧರಿಸಿ ಯಶ್ ಸ್ಟೈಲಿಶ್‌ ಪೋಸ್‌ ಕೊಟ್ಟಿದ್ದರು.



ಖ್ಯಾತ ಚಲನಚಿತ್ರ ನಿರ್ಮಾಪಕಿ ಗೀತು ಮೋಹನ್ ದಾಸ್ ನಿರ್ದೇಶಿಸಿದ ಈ ಚಿತ್ರವನ್ನು ಯಶ್ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ಬೆಂಬಲಿಸುತ್ತಿದ್ದಾರೆ, ಇದು ಈಗಾಗಲೇ ಸಿನಿಮಾ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಅನ್ನು ಅಭಿವೃದ್ಧಿಯಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಭಾರತೀಯ ಚಲನಚಿತ್ರಗಳಲ್ಲಿ ಒಂದನ್ನಾಗಿ ಮಾಡಿದೆ.

ಮಾರ್ಚ್ 19ಕ್ಕೆ ರಿಲೀಸ್ ಆಗ್ಬೇಕಿದ್ದ ಸಿನಿಮಾ ಜೂನ್ 4ಕ್ಕೆ ಪೋಸ್ಟ್‌ಪೋನ್ ಆದಾಗ ರಾಕಿ ಭಾಯ್ ಅಭಿಮಾನಿಗಳು ಸಮಾಧಾನ ಮಾಡಿಕೊಂಡಿದ್ದರು. ಯಶ್ 'ಟಾಕ್ಸಿಕ್' ಡೇಟ್ ಅನ್ನು ಮುಂದೂಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಡೇಟ್ ಹರಿದಾಡುತ್ತಿತ್ತು.

ಇದನ್ನೂ ಓದಿ: Actor Yash: ಜಾಗತಿಕ ಮ್ಯಾಗಜಿನ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮಿಂಚಿಂಗ್‌; ಇದು ‘ದಿ ಯಶ್ ಎಫೆಕ್ಟ್’!

ಆಗಸ್ಟ್ ತಿಂಗಳಲ್ಲಿ 'ಟಾಕ್ಸಿಕ್' ರಿಲೀಸ್ ಆಗಬಹುದು ಎಂದು ಕೆಲವು ಫ್ಯಾನ್ಸ್ ಪೇಜ್‌ಗಳಲ್ಲಿ ಹರಿದಾಡಿದ್ದವು..