ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಬಿಡುಗಡೆ: ಪ್ರಚಾರ ಅಭಿಯಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜಕುಮಾರ್ ರಾವ್

ಟಾಟಾ ಪ್ಲೇ ಈಗ ಟಾಟಾ ಪ್ಲೇ ಸ್ಮಾರ್ಟ್ ಎಂಬ ಟೆಲಿವಿಷನ್ ಸ್ಟ್ರೀಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಕನೆಕ್ಟೆಡ್ ಟಿವಿಗಳಲ್ಲಿ ನೇರ ಪ್ರಸಾರದ ಟಿವಿ ಅನುಭವ ನೀಡಲು ವಿನ್ಯಾಸ ಗೊಳಿಸಲಾಗಿದೆ. ಚಂದಾದಾರರು ಯಾವುದೇ ಸೆಟ್-ಟಾಪ್ ಬಾಕ್ಸ್, ಡಿಶ್ ಆಂಟೆನಾ ಅಥವಾ ವೈರ್‌ಗಳ ಅಗತ್ಯವಿಲ್ಲದೇ 500ಕ್ಕೂ ಹೆಚ್ಚು ಲೈವ್ ಚಾನೆಲ್‌ ಗಳನ್ನು ಪಡೆಯಲಿದ್ದಾರೆ.

ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಬಿಡುಗಡೆ

-

Profile
Ashok Nayak Oct 21, 2026 10:06 PM

ಟಾಟಾ ಪ್ಲೇ ಈಗ ಟಾಟಾ ಪ್ಲೇ ಸ್ಮಾರ್ಟ್ ಎಂಬ ಟೆಲಿವಿಷನ್ ಸ್ಟ್ರೀಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಕನೆಕ್ಟೆಡ್ ಟಿವಿಗಳಲ್ಲಿ ನೇರ ಪ್ರಸಾರದ ಟಿವಿ ಅನುಭವವನ್ನು ನೀಡಲು ವಿನ್ಯಾಸ ಗೊಳಿಸಲಾಗಿದೆ. ಚಂದಾದಾರರು ಯಾವುದೇ ಸೆಟ್-ಟಾಪ್ ಬಾಕ್ಸ್, ಡಿಶ್ ಆಂಟೆನಾ ಅಥವಾ ವೈರ್‌ಗಳ ಅಗತ್ಯವಿಲ್ಲದೇ 500ಕ್ಕೂ ಹೆಚ್ಚು ಲೈವ್ ಚಾನೆಲ್‌ ಗಳನ್ನು ಪಡೆಯಲಿದ್ದಾರೆ.

ಟಾಟಾ ಪ್ಲೇ ಸ್ಮಾರ್ಟ್ ಪ್ರಮುಖ ಆಕರ್ಷಣೆಯೆಂದರೆ, ಎಲ್ಲರಿಗೂ ಅತ್ಯಂತ ಪ್ರಿಯವಾದ ಮತ್ತು ಬಳಸಲು ಸರಳವಾದ ಟಾಟಾ ಪ್ಲೇನ ಲೈವ್ ಟಿವಿ ಅನುಭವ. ಇದನ್ನು ದೊಡ್ಡ ಪರದೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಮನೆಗಳಲ್ಲಿನ ಬ್ರಾಡ್‌ಬ್ಯಾಂಡ್ ಮೂಲಕ ತಡೆರಹಿತವಾಗಿ ಒದಗಿಸ ಲಾಗುತ್ತದೆ.

ಪ್ರಸ್ತುತ ಡಿಟಿಎಚ್ ಸೇವೆ, ಕೇಬಲ್ ಸಂಪರ್ಕ ಬಳಸುತ್ತಿರಲಿ ಅಥವಾ ಯಾವುದೇ ಪೇ-ಟಿವಿ ಸೇವೆ ಹೊಂದಿರದಿದ್ದರೂ ಸಹ, ಯಾರೇ ಆದರೂ ತಮ್ಮ ಸ್ಮಾರ್ಟ್ ಟಿವಿಯ ಆ್ಯಪ್ ಸ್ಟೋರ್‌ನಿಂದ ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಅನ್ನು ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ವೀಕ್ಷಕರಿಗೆ ಯಾವುದೇ ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಂಡು ತಮ್ಮ ಸ್ಮಾರ್ಟ್ ಟಿವಿ, ಮೊಬೈಲ್ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ ಗಳಲ್ಲಿ ಲೈವ್ ಚಾನೆಲ್‌ ಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್ʼನಿಂದ ಹೊಸ ಇಂಟ್ರಾ V40 ಬಿಡುಗಡೆ

ದೊಡ್ಡ ಪರದೆಯ ಮೇಲೆ, ಚಾನೆಲ್ ಸಂಖ್ಯೆಗಳು, ಪ್ರೋಗ್ರಾಂ ಗೈಡ್ ಮತ್ತು ರಿಮೋಟ್-ಸ್ನೇಹಿ ನಿಯಂತ್ರಣಗಳೊಂದಿಗೆ ಡಿಟಿಎಚ್‌ ಗೆ ರೂಢಿಯಾಗಿರುವ ಯಾರಿಗಾದರೂ ಇದು ಪರಿಚಿತ ಅನುಭವ ನೀಡುತ್ತದೆ. ಯಾವುದೇ ಬೆಂಬಲಿತ ಸಾಧನದಲ್ಲೂ ಈ ಆ್ಯಪ್ ತೆರೆದು ವೀಕ್ಷಣೆ ಪ್ರಾರಂಭಿಸಬಹುದು. ಇದು ನೂತನ ಪೀಳಿಗೆಯ ಕನೆಕ್ಟೆಡ್ ಸ್ಕ್ರೀನ್‌ ಗಳಿಗೆ ಟಾಟಾ ಪ್ಲೇ ಮನರಂಜನೆಯ ಸರಳತೆ ಮತ್ತು ಸುಲಭ ಅನುಭವವನ್ನು ತರುತ್ತದೆ.

ಈ ಬಿಡುಗಡೆಯ ಕುರಿತು ಟಾಟಾ ಪ್ಲೇನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿತ್ ನಾಗ್ ಪಾಲ್ ಅವರು, "ಕನೆಕ್ಟೆಡ್ ಮನೆಗಳು ಕಂಟೆಂಟ್ ವೀಕ್ಷಿಸುವ ವಿಧಾನವನ್ನು ಸ್ಮಾರ್ಟ್ ಟಿವಿಗಳು ಮತ್ತು ಹೋಮ್ ಬ್ರಾಡ್‌ ಬ್ಯಾಂಡ್‌ ಗಳು ಸಂಪೂರ್ಣವಾಗಿ ಬದಲಾಯಿಸಿವೆ. ಹೀಗಿದ್ದರೂ, ಕ್ರೀಡೆ, ಸುದ್ದಿ ಹಾಗೂ ದಿನನಿತ್ಯದ ಧಾರಾವಾಹಿಗಳನ್ನು ನಿಗದಿತ ಸಮಯಕ್ಕೆ ದೊಡ್ಡ ಪರದೆಯ ಮೇಲೆ ಲೈವ್ ಆಗಿ ನೋಡಬೇಕೆನ್ನುವ ಗ್ರಾಹಕರ ಮೂಲಭೂತ ಬಯಕೆ ಮಾತ್ರ ಬದಲಾಗಿಲ್ಲ.

ok

ಡಿಟಿಎಚ್ ಸಾಮಾನ್ಯ ಜನರನ್ನು ತಲುಪುವಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಸಾಗಿದ್ದರೆ, ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಅನ್ನು ಇಂಟರ್ನೆಟ್ ಹೊಂದಿದ ನಗರದ ಮನೆಗಳ ಮಾಹಿತಿ ಮತ್ತು ಮನರಂಜನೆಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ," ಎಂದು ಹೇಳಿದರು.

ಈ ಚಂದಾದಾರಿಕೆಯು ಕುಟುಂಬದ ವೀಕ್ಷಣೆಯ ಆದ್ಯತೆಗಳಿಗೆ ಅನುಗುಣವಾಗಿ ರೂಪುಗೊಂಡಿದೆ. ಗ್ರಾಹಕರು ತಾವು ಕಂಟೆಂಟ್ ವೀಕ್ಷಿಸಲು ಬಯಸುವ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮನೆಗಾಗಿ ಒಂದು ತಿಂಗಳ ಪ್ಲಾನ್ ತಿಂಗಳಿಗೆ ಕೇವಲ ರೂ. 199 ರಿಂದ ಪ್ರಾರಂಭವಾಗುತ್ತದೆ. ಟಾಟಾ ಪ್ಲೇ ಸ್ಮಾರ್ಟ್ ಆ್ಯಪ್ ಸ್ಯಾಮ್‌ಸಂಗ್, ಆಂಡ್ರಾಯ್ಡ್ ಟಿವಿ, ವಿಡಾ, ಗೂಗಲ್ ಟಿವಿ ಮತ್ತು ಫೈರ್‌ ಟಿವಿ ಜೊತೆಗೆ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಹಾಗೂ ಟ್ಯಾಬ್ಲೆಟ್ ಸಾಧನಗಳಲ್ಲಿ ಲಭ್ಯವಿದೆ.

ಈ ಬಿಡುಗಡೆಯ ಪ್ರಚಾರಾಂದೋಲನದಲ್ಲಿ ಖ್ಯಾತ ನಟ ರಾಜಕುಮಾರ್ ರಾವ್ ಅವರು ತಂದೆ ಮತ್ತು ಮಗಳು ಇಬ್ಬರ ದ್ವಿಪಾತ್ರವನ್ನು ಅತ್ಯಂತ ಚತುರ ಹಾಗೂ ಹಗುರವಾದ ಅವತಾರದಲ್ಲಿ ಸುಲಭವಾಗಿ ನಿಭಾಯಿಸಿದ್ದಾರೆ. ಅವರ ನಡುವಿನ ತಮಾಷೆಯ ಸಂಭಾಷಣೆಗಳು ಲೈವ್ ಟಿವಿ ವೀಕ್ಷಿಸುವುದು ಈಗ ಹೆಚ್ಚು ಸ್ಮಾರ್ಟ್ ಮತ್ತು ತೊಂದರೆ-ರಹಿತವಾಗಿದೆ ಎಂಬ ಸರಳ ಸತ್ಯವನ್ನು ಹಾಸ್ಯಮಯವಾಗಿ ಎತ್ತಿ ತೋರಿಸುತ್ತವೆ. ಸೆಟ್-ಟಾಪ್ ಬಾಕ್ಸ್, ಡಿಶ್ ಆಂಟೆನಾ ಮತ್ತು ವೈರ್‌ ಗಳ ಸಾಂಪ್ರದಾಯಿಕ ಡಿಟಿಎಚ್ ವ್ಯವಸ್ಥೆಗೆ ತಿಲಾಂಜಲಿ ಇಡುವ ಮೂಲಕ, ಟಾಟಾ ಪ್ಲೇನ ಈ ಆ್ಯಪ್-ಆಧಾರಿತ ಪರಿಹಾರವು ವೀಕ್ಷಕರಿಗೆ ಲೈವ್ ಟಿವಿಯನ್ನು ಪ್ರವೇಶಿಸಲು ಸರಳ, ಸುಲಭ ಮತ್ತು ಅನುಕೂಲಕರ ಮಾರ್ಗವನ್ನು ಒದಗಿಸುತ್ತದೆ.

ಟಾಟಾ ಪ್ಲೇ ಜೊತೆಗಿನ ತಮ್ಮ ಒಡನಾಟದ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜಕುಮಾರ್ ರಾವ್, "ಇಂದಿನ ಜನರು ಕಂಟೆಂಟ್ ವೀಕ್ಷಿಸುವ ವಿಧಾನಕ್ಕೆ ತಕ್ಕಂತೆ ಬದಲಾಗುತ್ತಲೇ, ಟೆಲಿವಿಷನ್‌ ನ ಮೂಲ ಸಾರವನ್ನು ಟಾಟಾ ಪ್ಲೇ ಸ್ಮಾರ್ಟ್ ಹೇಗೆ ಕಾಯ್ದುಕೊಂಡಿದೆ ಎಂಬುದು ನನಗೆ ತುಂಬಾ ಇಷ್ಟವಾಯಿತು. ಈ ಪ್ರಚಾರ ಅಭಿಯಾನವು ನಾನು ಇಲ್ಲಿಯವರೆಗೆ ಮಾಡಿರುವ ಯಾವುದೇ ಕೆಲಸಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು.

ಒಂದೇ ಫ್ರೇಮ್‌ ನಲ್ಲಿ ತಂದೆ ಮತ್ತು ಮಗಳು ಇಬ್ಬರ ಪಾತ್ರವನ್ನೂ ನಿಭಾಯಿಸಲು, ಹೊರನೋಟ ಮಾತ್ರವಲ್ಲದೆ ಮನಸ್ಥಿತಿ, ದೈಹಿಕ ಭಾಷೆ ಮತ್ತು ಭಾವನೆಗಳನ್ನು ನಿರಂತರವಾಗಿ ಬದಲಾಯಿಸಿಕೊಳ್ಳಬೇಕಾಗಿತ್ತು. ಇದು ಸೃಜನಶೀಲವಾಗಿ ಸವಾಲಿನಿಂದ ಕೂಡಿದ್ದರೂ, ಅತ್ಯಂತ ತೃಪ್ತಿದಾಯಕವಾಗಿತ್ತು ಮತ್ತು ಎರಡು ಸಂಪೂರ್ಣ ವಿಭಿನ್ನ ಪಾತ್ರಗಳನ್ನು ಅನ್ವೇಷಿಸಲು ನನಗೆ ಅವಕಾಶ ನೀಡಿತು. ಎಲ್ಲರಿಗೂ ಅನ್ವಯಿಸುವ ಸಂದೇಶವನ್ನು ತಲುಪಿಸುತ್ತಲೇ ಮನರಂಜನೆ ನೀಡುವ ಕಥೆಗಳತ್ತ ನಾನು ಯಾವಾಗಲೂ ಆಕರ್ಷಿತನಾಗುತ್ತೇನೆ, ಮತ್ತು ಈ ಅಭಿಯಾನವು ಅದನ್ನೇ ಅಪಾರ ಪ್ರೀತಿ ಹಾಗೂ ಹಾಸ್ಯದೊಂದಿಗೆ ಮಾಡುತ್ತದೆ" ಎಂದು ಹೇಳಿದರು.