ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bhagyalakshmi Kannada Serial: ಅಂತ್ಯ ಹಾಡ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್‌? ಅಂತಿಮ ಸಂಚಿಕೆಗಳ ಪ್ರಸಾರ ಯಾವಾಗ?

Bhagyalakshmi Serial: ಭಾಗ್ಯಲಕ್ಷ್ಮೀ’ ಧಾರಾವಾಹಿ 2022ರಲ್ಲಿ ಪ್ರಸಾರ ಆರಂಭಿಸಿತು. ಮೊದಲು ಅಕ್ಕ-ತಂಗಿ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ, ಆ ಬಳಿಕ ಅಕ್ಕನ ಕಥೆಯೇ ಬೇರೆ, ತಂಗಿ ಕಥೆಯೇ ಬೇರೆ ಮಾಡಲಾಯಿತು. ‘ಲಕ್ಷ್ಮೀ ಬಾರಮ್ಮ ಹೆಸರಲ್ಲಿ ತಂಗಿ ಧಾರಾವಾಹಿ ಪ್ರಸಾರ ಕಂಡಿತು. ‘ಭಾಗ್ಯಲಕ್ಷ್ಮೀ’ ಹಾಗೆಯೇ ಮುಂದುವರಿಯಿತು. ಈಗ ಧಾರಾವಾಹಿ ಅಂತ್ಯ ಕಾಣುತ್ತಿದೆ ಎನ್ನಲಾಗುತ್ತಿದೆ.

ಅಂತ್ಯ ಹಾಡ್ತಿದೆ ಭಾಗ್ಯಲಕ್ಷ್ಮೀ? ಅಂತಿಮ ಸಂಚಿಕೆಗಳ ಪ್ರಸಾರ ಯಾವಾಗ?

ಭಾಗ್ಯಲಕ್ಷ್ಮೀ ಧಾರಾವಾಹಿ -

Yashaswi Devadiga
Yashaswi Devadiga May 18, 2026 10:09 AM

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮೀ' (Bhagyalakshmi Kannada Serial:) ಸಾವಿರ ಸಂಚಿಕೆಗಳನ್ನು ಪೂರೈಸಿದೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ 2022ರಲ್ಲಿ ಪ್ರಸಾರ ಆರಂಭಿಸಿತು. ಮೊದಲು ಅಕ್ಕ-ತಂಗಿ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ, ಆ ಬಳಿಕ ಅಕ್ಕನ ಕಥೆಯೇ ಬೇರೆ, ತಂಗಿ ಕಥೆಯೇ ಬೇರೆ ಮಾಡಲಾಯಿತು. ‘ಲಕ್ಷ್ಮೀ ಬಾರಮ್ಮ (Lakshmi Baramma) ಹೆಸರಲ್ಲಿ ತಂಗಿ ಧಾರಾವಾಹಿ ಪ್ರಸಾರ ಕಂಡಿತು. ‘ಭಾಗ್ಯಲಕ್ಷ್ಮೀ’ ಹಾಗೆಯೇ ಮುಂದುವರಿಯಿತು. ಈಗ ಧಾರಾವಾಹಿ (Kannada Serial) ಅಂತ್ಯ ಕಾಣುತ್ತಿದೆ ಎನ್ನಲಾಗುತ್ತಿದೆ.

ಇದೇ ತಿಂಗಳು ತನ್ನ ಕಥೆಗೆ ಭಾಗ್ಯಲಕ್ಷ್ಮೀ ವಿದಾಯ ಹೇಳುತ್ತಿದೆ ಎನ್ನಲಾಗುತ್ತಿದೆ. ಅಂತಿಮ ಸಂಚಿಕೆಗಳು ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರ ಕಾಣಲಿದೆ.

ಇದನ್ನೂ ಓದಿ: Ravi Mohan: ರವಿ ಮೋಹನ್‌ಗೆ ಖುಷ್ಬೂ ಖಡಕ್ ತಿರುಗೇಟು! ಟ್ವೀಟ್‌ನಲ್ಲಿ ಏನಿದೆ?

ನಟನಾ ಜರ್ನಿಯಲ್ಲಿ ಹೊಸ ಮೈಲಿಗಲ್ಲು

‘ಭಾಗ್ಯಲಕ್ಷ್ಮೀʼ ಧಾರಾವಾಹಿ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ನಟಿ, ನಿರೂಪಕಿ ಸುಷ್ಮಾ ಕೆ ರಾವ್ ಅವರ ನಟನಾ ಜರ್ನಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಧಾರಾವಾಹಿ ಇದು.. ತಾಂಡವ್‌ನ ಕಿರಿಕಿರಿ - ಕಿರುಕುಳದಿಂದ ತಪ್ಪಿಸಿಕೊಂಡು ಭಾಗ್ಯ - ಆದಿ ವಿವಾಹವಾಗಿತ್ತು. ಈ ಹಿಂದೆ ಭಾಗ್ಯಗೆ ಹಲವು ಸಂಕಷ್ಟಗಳು ಎದುರಾಗಿದ್ದವು. ಎಲ್ಲಾ ಸಂಕಷ್ಟಗಳನ್ನು ದಾಟಿಕೊಂಡು ಭಾಗ್ಯ - ಆದಿ ವಿವಾಹವಾಗಿದೆ. ಆದರೆ ವಿವಾಹವಾಗಿ ವರನ ಮನೆಗೆ ಬಂದ ಬೆನ್ನಲ್ಲೇ ಇಲ್ಲೂ ಭಾಗ್ಯಾಗೆ ಸಾಲು ಸಾಲು ಸವಾಲುಗಳು ಎದುರಾಗಿವೆ.

ಅಷ್ಟೇ ಅಲ್ಲ ಆದಿ - ಭಾಗ್ಯ ಬಗ್ಗೆ ಮೀನಾಕ್ಷಿ ಮನಸ್ಸಲ್ಲಿ ಏಕೆ ಕೆಟ್ಟದ್ದು ಇದೆ ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇನ್ನು ಸೀರಿಯಲ್‌ ಅಂತ್ಯವಾಗೋ ಬಗ್ಗೆ ವಾಹಿನಿ ಆಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಈ ಹಿಂದೆ ನಟ ಸುದರ್ಶನ್‌ ಒಂದು ಧಾರಾವಾಹಿ ಸಾವಿರ ಎಪಿಸೋಡ್ ಪೂರ್ಣಗೊಳಿಸುತ್ತಿದ್ದಂತೆ ಧಾರಾವಾಹಿ ಮುಗಿಯುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.

ನಮ್ಮ ಧಾರಾವಾಹಿ ಕಡಿಮೆ ಟಿಆರ್​​ಪಿ ಪಡೆದರೆ ಆ ರೀತಿಯ ಊಹೆ ಅಥವಾ ಕಲ್ಪನೆ ಮಾಡಿಕೊಳ್ಳಬಹುದು. ಆದರೆ, ನಮ್ಮ ಧಾರಾವಾಹಿ ಉತ್ತಮ ಟಿಆರ್​​ಪಿಯನ್ನೇ ಪಡೆದುಕೊಳ್ಳುತ್ತಿದೆ. ಹೀಗಾಗಿ, ಧಾರಾವಾಹಿ ಮುಗಿಯುತ್ತದೆ ಎಂಬುದರಲ್ಲಿ ಅರ್ಥವಿಲ್ಲ. ಆದರೂ ಧಾರಾವಾಹಿ ವಿಷಯದಲ್ಲಿ ವಾಹಿನಿಯವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದರು.

ಇದನ್ನೂ ಓದಿ: K Rajan: ಖ್ಯಾತ ತಮಿಳು ನಿರ್ಮಾಪಕ ಕೆ.ರಾಜನ್‌ ಆತ್ಮಹತ್ಯೆ; ಕಾರಣ ಏನು?

ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಸುದರ್ಶನ್ ರಂಗಪ್ರಸಾದ್, ಕಾವ್ಯ ಗೌಡ, ಹರೀಶ್ ರಾಜ್, ಭವ್ಯಶ್ರೀ ರೈ, ಸುಕೃತಾ ನಾಗ್, ಮುಖ್ಯಮಂತ್ರಿ ಚಂದ್ರು ಮುಂತಾದವರು ಅಭಿನಯಿಸುತ್ತಿದ್ದಾರೆ.