Bigg boss Kannada 13: ಆಗಲ್ಲ ಅಂದ್ರೆ ಹೋಗ್ತಾ ಇರು! ಅಮುಕು ಡುಮುಕುಗೆ ಬೆಂಡೆತ್ತಿದ ವಿನಯ್ ಗೌಡ
Vinay Gowda: ಜಡ್ಜ್‌ಗಳಾಗಿ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಚಂದನ್ ಶೆಟ್ಟಿ ಶೃತಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗ್ತಿದೆ. ಈ ಬಾರಿಯ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ಹೊಸ ಪ್ರೋಮೋ (New Promo) ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಅಗ್ನಿಪರೀಕ್ಷೆʼ (Bigg Boss agnipariskshe) ಎಂಬ ವಿಶೇಷ ಸೆಲೆಕ್ಷನ್ ಪ್ರಕ್ರಿಯೆ ಇದೆ. ಜಡ್ಜ್‌ಗಳಾಗಿ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಚಂದನ್ ಶೆಟ್ಟಿ ಶೃತಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗ್ತಿದೆ. ಈ ಬಾರಿಯ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ಹೊಸ ಪ್ರೋಮೋ (New Promo) ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾ ಖ್ಯಾತಿಯ ‘ಅಮುಕು ಡುಮುಕು’ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶನ ನೀಡಲು ಆಗಮಿಸಿದ್ದರು. ಸಂಗೀತ ಶೃಂಗೇರಿ ಅವರು, ‘ಸಂಗೀತಾ ಅವರು ನಿಮ್ಮನ್ನು ಕಂಡರೆ ಇಷ್ಟ ಎಂದು ಹೇಳಿಸಬೇಕು’ ಎಂದು ಒಂದು ಟಾಸ್ಕ್ ನೀಡುತ್ತಾರೆ. ಇದಕ್ಕೆ ಉತ್ತರಿಸಿದ ಅಮುಕು ಡುಮುಕು, ‘ನಾನು ಯಾರನ್ನೂ ಇಂಪ್ರೆಸ್ ಮಾಡಲು ಬಂದಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ, ಹೀಗೆಯೇ ಹೋಗುವುದು’ ಎಂದು ತಮ್ಮದೇ ಶೈಲಿಯಲ್ಲಿ ನೇರವಾಗಿ ಹೇಳುತ್ತಾರೆ. ವಿನಯ್ ಗೌಡ, ‘ಆಗಲ್ಲ ಅಂದರೆ ಹೋಗ್ತಾ ಇರು ಗೆಟ್‌ಔಟ್! ಹೋಗ್ತಾ ಇರು’ ಎಂದು ವೇದಿಕೆಯಲ್ಲೇ ಖಡಕ್ ಆಗಿ ಗದರಿ ಹೊರಗೆ ಕಳುಹಿಸುತ್ತಾರೆ. ಬಿಗ್ ಬಾಸ್ ಮನೆ ಪ್ರವೇಶಿಸಲು 60 ಜನ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ನಡೆಯುತ್ತಿದೆ.
ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ! ಆದ್ರೂ ವೀಕ್ಷಕರಿಗೆ ಇದೊಂದೇ ಬೇಸರ
ಸ್ಪರ್ಧಿಗಳ ಸಹನೆ, ದೈಹಿಕ ಸಾಮರ್ಥ್ಯ, ಆಟದ ತಂತ್ರ ಹಾಗೂ ನಡೆನುಡಿಯನ್ನ ಪರೀಕ್ಷಿಸಲು ಜಡ್ಜ್‌ಗಳು ನೇರವಾಗಿ ವೇದಿಕೆಯಲ್ಲೇ ವಿಭಿನ್ನ ಟಾಸ್ಕ್‌ಗಳನ್ನ ನೀಡಿದ್ದಾರೆ. ಈ ಟಾಸ್ಕ್‌ಗಳನ್ನ ಪೂರ್ಣಗೊಳಿಸಲು ಸ್ಪರ್ಧಿಗಳು ಹರಸಾಹಸ ಪಡ್ತಿರೋದು ಪ್ರೋಮೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಟ್ಟಾರೆಯಾಗಿ, ಈ 60 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ ʻಬಿಗ್ ಬಾಸ್ʼ ಮುಖ್ಯ ಮನೆಗೆ ಅರ್ಹತೆ ಪಡೆಯುವವರು ಯಾರು? ಅನ್ನೋದೇ ಕುತೂಹಲ.
ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ! ಆದ್ರೂ ವೀಕ್ಷಕರಿಗೆ ಇದೊಂದೇ ಬೇಸರ
ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.