Bigg Boss Kannada 12: ರಘು ಅಣ್ಣ ಅಂತ ಕರೆಯಬೇಕು ಅನ್ಸತ್ತೆ ಆದ್ರೆ....; ಅಶ್ವಿನಿ ಮಾತಿಗೆ ಸ್ವಯಂವರ ರೀತಿ ಫೀಲ್ ಆಯ್ತು ಎಂದ ಗಿಲ್ಲಿ ನಟ
Ashwini Raghu: ಈ ವಾರ ಸುದೀಪ್ ಅವರು ವೀಕೆಂಡ್‌ಗೆ ಗೈರಾದ ಹಿನ್ನೆಯಲ್ಲಿ ಮನೆಗೆ ಪ್ರೇಮ್ (Prem) ಹಾಗೂ ಭಾಗ್ಯಲಕ್ಷ್ಮೀ ತಾಂಡವ್, ಭಾಗ್ಯ ಅತಿಥಿಗಳಾಗಿ ಬಂದಿದ್ದರು. ಮನೆಮಂದಿಯನ್ನು ನಗಿಸಿ, ಕೆಲವೊಂದು ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳನ್ನು ನಿಭಾಯಿಸಿ ಹೋದರು. ಇದೀಗ ನಿರೂಪಕಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅಶ್ವಿನಿ ಗೌಡ ಅವರು ರಘು ಬಗ್ಗೆ ಹೊಗಳಿ ಸಖತ್ ಮಜಾ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಈ ವಾರ ಸುದೀಪ್ (Sudeep) ಅವರು ವೀಕೆಂಡ್‌ಗೆ ಗೈರಾದ ಹಿನ್ನೆಯಲ್ಲಿ ಮನೆಗೆ ಪ್ರೇಮ್ (Prem) ಹಾಗೂ ಭಾಗ್ಯಲಕ್ಷ್ಮೀ ತಾಂಡವ್, ಭಾಗ್ಯ ಅತಿಥಿಗಳಾಗಿ ಬಂದಿದ್ದರು. ಮನೆಮಂದಿಯನ್ನು ನಗಿಸಿ, ಕೆಲವೊಂದು ಬಿಗ್ ಬಾಸ್ (Bigg Boss Kannada) ಕೊಟ್ಟ ಟಾಸ್ಕ್‌ಗಳನ್ನು ನಿಭಾಯಿಸಿ ಹೋದರು. ಇದೀಗ ನಿರೂಪಕಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ (Anupama) ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅಶ್ವಿನಿ ಗೌಡ (Ashwini Gowda) ಅವರು ರಘು (Raghu) ಬಗ್ಗೆ ಹೊಗಳಿ ಸಖತ್ ಮಜಾ ಮಾಡಿದ್ದಾರೆ.
ಸ್ವಯಂವರ ರೀತಿ ಫೀಲ್
ಅನುಪಮಾ ಅವರು ಎಂಟ್ರಿ ಕೊಡುತ್ತಲೇ ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಡಿ ಎಂದಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಅವರು 14 ವಾರದಲ್ಲಿ ಅವತ್ತು ರಘು ಅವರನ್ನು ಕಂಡೆ. ಇವತ್ತು ಮಗುನ ನೋಡ್ತಾ ಇದ್ದೀನಿ. ಪ್ರೀತಿಯಿಂದ ಈ ಮನೆಯಲ್ಲಿ ರಘು ಅಣ್ಣ ಅಂತಾರೆ, ನಂಗೂ ರಘು ಅಣ್ಣ ಅಂತ ಕರಿಬೇಕು ಅನ್ಸತ್ತೆ. ನನ್ನನ್ನು ಅವರು ಅರ್ಥ ಮಾಡಿಕೊಂಡರು. ನಾನು ಅವರನ್ನು ಅರ್ಥ ಮಾಡಿಕೊಂಡೆ ಎಂದಿದ್ದಾರೆ. ರಘು ಕೂಡ ಅಶ್ವಿನಿ ಅವರು ತುಂಬಾ ಇಷ್ಟ ಎಂದಿದ್ದಾರೆ. ಇನ್ನು ಇವರಿಬ್ಬರ ಮಾತುಗಳನ್ನು ಕೇಳಿ, ಸ್ವಯಂವರ ರೀತಿ ಫೀಲ್ ಆಗ್ತಿದೆ ಅಂತ ಗಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಈ ವಾರ ಡಬಲ್ ಎಲಿಮಿನೇಷನ್! ಸ್ಪರ್ಧಿಗಳಿಗೆ ಸಖತ್ ಶಾಕ್
ವೈರಲ್ ವಿಡಿಯೊ
pic.twitter.com/5B0izSUJUL
— ಜೀವನ್ (@Rockstar_1_9) December 28, 2025
🚨 ಬಿಗ್ ಬಾಸ್ ಮನೆಗೆ ಮಾಜಿ ಕಂಟೆಸ್ಟೆಂಟ್ ಎಂಟ್ರಿ 👀
BBK S12 Sunday PROMO 🚨👀@Rockstar_1_9 @Rockstar_1_9#BBK12 #BiggBossKannada12 #BiggBoss #BiggBossKannada #biggbossseason12 #BBKSeason12 #BBK12live #KantaraChapter1 #TheDevil #GilliNata #Gilli
ಸೂರಜ್ ಔಟ್
ಬಿಗ್ ಬಾಸ್ ಸೀಸನ್ 12ರ ಫ್ಯಾಮಿಲಿ ವೀಕ್ ಮುಕ್ತಾಯವಾಗಿದೆ. ಇನ್ನೇನಿದರೂ ಸೀಸನ್ ಅಂತ್ಯ ಹಾಡಲು ಕೆಲವೇ ದಿನಗಳು ಇವೆ. ಎಲಿಮಿನೇಶನ್ ಬಿಸಿ ಸ್ಪರ್ಧಿಗಳಿಗೆ ತಟ್ಟಿದೆ. ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ.
ಸೂರಜ್ ಔಟ್ ಆಗಿದ್ದಾರೆ. ತಮ್ಮದೇ ಸ್ಟಾಟರ್ಜಿ ಇಟ್ಟುಕೊಂಡು ಆಟವಾಡುತ್ತ ಟಾಸ್ಕ್‌ಗಳನ್ನು ಮುಗಿಸುತ್ತಿದ್ದ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ.ಅಲ್ಲದೆ ಸ್ಪಂದನಾ ಸೋಮಣ್ಣ ಸಹ ದೊಡ್ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು, ಬೆಳಿಗ್ಗೆ ಏಳ್ಳುತ್ತಿದ್ದಂತೆ ಮನೆಯವರಿಗೆ ಒಂದು ಶಾಕ್ ಇತ್ತು. ಎಲ್ಲರಿಗೂ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಅದರಂತೆಯೇ ಎಲ್ಲರೂ ಬಂದರು. ಈ ವೇಳೆ ಮುಖ್ಯದ್ವಾರದ ಬಳಿ ಒಂದು ತಿರುಗುವ ವಸ್ತುವನ್ನು ಇಡಲಾಗಿತ್ತು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಿಂದ ಸೂರಜ್ ಸಿಂಗ್ ಎಲಿಮಿನೇಟ್! ರಾಶಿಕಾ ಕಣ್ಣೀರು
ಇದರ ಮೇಲೆ ನಾಲ್ಕು ಜನರನ್ನು ನಿಲ್ಲಿಸಲಾಯಿತು. ಈ ವೇಳೆ ಕಡಿಮೆ ಮತ ಪಡೆದ ಸೂರಜ್ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಇದು ಶಾಕಿಂಗ್ ಎನಿಸಿದೆ. ಲ್ಲರೂ ಭಾನುವಾರ ಈ ಎಲಿಮಿನೇಷನ್ ನಡೆಯುತ್ತದೆ ಎಂದುಕೊಂಡಿದ್ದರು. ಆದರೆ ಶನಿವಾರವೇ ಒಂದು ಎಲಿಮಿನೇಷನ್ ನಡೆದಿದೆ.