BBK 12: ತಮ್ಮೂರಿನ ಹುಡುಗಿ ರಕ್ಷಿತಾ ಶೆಟ್ಟಿಗೆ ಚೈತ್ರಾ ಕುಂದಾಪುರ ಸಪೋರ್ಟ್ ಮಾಡಲಿಲ್ವಾ? ಫೈರ್ ಬ್ರ್ಯಾಂಡ್ ಕೊಟ್ಟ ಉತ್ತರ ಇದು!
Chaitra Kundapura Interview: ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಚೈತ್ರಾ ಕುಂದಾಪುರ ಅವರು ರಕ್ಷಿತಾ ಶೆಟ್ಟಿ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ರಕ್ಷಿತಾ ಮತ್ತು ತಾವು ಒಂದೇ ಊರಿನವರಾಗಿದ್ದರೂ (ಉಡುಪಿ), ಮನೆಯೊಳಗೆ ಅವರ ಪರವಾಗಿ 'ಫೇವರಿಸಂ' ಮಾಡುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
-
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಅತಿಥಿಯಾಗಿ ಮನೆಯೊಳಗೆ ಹೋಗಿದ್ದ ಅವರು 3 ವಾರಗಳ ಕಾಲ ಶೋನಲ್ಲಿ ಇದ್ದರು. ರಜತ್ ಮತ್ತು ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳೇ ಎಂದು ಹೇಳಲಾಗಿತ್ತು. ಅಂತಿಮವಾಗಿ ರಜತ್ ಮತ್ತು ಚೈತ್ರಾ ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಇದ್ದರು. ಚೈತ್ರಾ ಅವರು ರಕ್ಷಿತಾಗೆ ಸಪೋರ್ಟ್ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ರೀತಿ ಆಗಲಿಲ್ಲ. ಇದೀಗ ಆ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ.
ನಾನು ಮತ್ತು ರಕ್ಷಿತಾ ಉಡುಪಿಯವರು
"ಆ ಥರದ್ದನ್ನೆಲ್ಲಾ ನಾನು ನಂಬೋದಿಲ್ಲ. ಬಿಗ್ ಬಾಸ್ ಅನ್ನೋದು ಬೇರೆ ಥರದ್ದೇ ಒಂದು ಮನೆ. ಯಾರಿಗೋ ಫೆವರಿಸಂ ಮಾಡಿಕೊಂಡು ಹೋದರೆ, ಅದು ಜನರಿಗೆ ಗೊತ್ತಾಗುತ್ತದೆ. ನಾನು ದಿಢೀರ್ ಅಂತ ರಕ್ಷಿತಾಗೆ ಹೊಗಳೋದು, ಅವಳ ಜೊತೆಗೆ ಇರುವುದು ಮಾಡಿದರೆ, ಅದನ್ನ ನೋಡಿದವರಿಗೆ ಏನು ಅನ್ನಿಸಬಹುದು? ಇವರು ಒಂದೇ ಊರಿನವರು, ಅದಕ್ಕೆ ಜೊತೆಗೆ ಇದ್ದಾರೆ ಅಂತ ಹೇಳ್ತಾರೆ. ನಾನು ಮತ್ತು ರಕ್ಷಿತಾ ಒಂದೇ ಊರಿನವರು. ನಮ್ಮಿಬ್ಬರದು ಉಡುಪಿ. ನಮ್ಮಿಬ್ಬರ ಮನೆಗಳು 10-15 ಕಿ.ಮೀ. ದೂರದಲ್ಲಿವೆ" ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಸ್ಪಂದನಾ ಜೊತೆಗೆ ನಾನು ಕ್ಲೋಸ್ ಇದ್ದೇನೆ
"ನನಗೆ ಸ್ಪಂದನಾ ಕೂಡ ಮೊದಲಿನಿಂದಲೂ ಪರಿಚಯ. ನಾವಿಬ್ಬರು ಬಿಗ್ ಬಾಸ್‌ಗೂ ಮುನ್ನ ಒಂದು ಶೋ ಮಾಡಿದ್ವಿ. ಹೀಗೆ ಕ್ಲೋಸ್ ಇದ್ದೆವು ಎಂಬ ಕಾರಣಕ್ಕೆ ಸಪೋರ್ಟ್ ಮಾಡುವುದು ಸರಿ ಅನ್ನಿಸೋದಿಲ್ಲ. ಸ್ಪರ್ಧಿಗಳ ಆಟಕ್ಕೆ ತೊಂದರೆ ಆಗದಂತೆ ನಾವು ಇರಬೇಕಾಗಿತ್ತು. ಯಾಕೆಂದರೆ, ನಾವು ಅತಿಥಿಗಳು. ಅದು ಸ್ಪರ್ಧಿಗಳಿಗೆ ಗೊತ್ತಿಲ್ಲದಿದ್ದರೂ, ನಮಗೆ ಗೊತ್ತಿತ್ತು. ನಮ್ಮೂರಿನವರು ಎಂಬ ಕಾರಣಕ್ಕೆ, ನಾವು ಫೇವರಿಸಂ ಮಾಡಿ, ಒಬ್ಬರನ್ನೇ ಹೊಗಳಿದರೆ, ಹೊರಗಡೆ ಜನಕ್ಕೆ ನಾವು ಯಾವ ರೀತಿ ಕಾಣಿಸುತ್ತೇವೆ? ಅದು ತುಂಬಾ ಮುಖ್ಯವಾಗುತ್ತದೆ" ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
Bigg Boss Kannada 12: ನನಗೆ ಪುನರ್ ಜನ್ಮ ಕೊಟ್ಟಿದ್ದೇ ಬಿಗ್ ಬಾಸ್! ಕಣ್ಣೀರಿಟ್ಟ ಚೈತ್ರಾ ಕುಂದಾಪುರ
ನನ್ನ ಬಗ್ಗೆ ರಕ್ಷಿತಾ ಮೆಚ್ಚುಗೆ ವ್ಯಕ್ತಪಡಿಸಿದ್ದಳು
"ನಾನು ಆ ರೀತಿ ಫೇವರಿಸಂ ಮಾಡಿ, ಹೊರಗೆ ಬಂದಾಗ, ನನಗೆ ಇಲ್ಲಿ ಯಾರಾದರೂ ಪ್ರಶ್ನೆ ಮಾಡಿದರೆ, ಅವರಿಗೆ ನಾನು ಉತ್ತರ ಕೊಡಲು ನನಗೆ ಆತ್ಮಸಾಕ್ಷಿ ಇರಬೇಕು ಅಲ್ವಾ? ನನ್ನ ಕಣ್ಣ ಮುಂದೆ ಅವಳು ತಪ್ಪು ಮಾಡಿದಾಗ, ಅದನ್ನು ತಪ್ಪು ಎಂದು ನೇರವಾಗಿ ಹೇಳಿದ್ದೇನೆ. ಚೈತ್ರಕ್ಕ ಮನಸ್ಸಿನಲ್ಲಿ ಇರೋದನ್ನು ನೇರವಾಗಿ ಹೇಳ್ತಾರೆ. ಅವರು ನನ್ನಂತೆಯೇ, ಹಾಗಾಗಿ ಅವರು ನನಗೆ ಇಷ್ಟ ಎಂದು ರಕ್ಷಿತಾ ಎಲ್ಲರ ಎದುರು ಹೇಳಿದ್ದಳು. ಅವಳಿಗೂ ನಾನು ಏನನ್ನಾದರೂ ನೇರವಾಗಿ ಹೇಳಿದರೆ ತಾನೇ, ಅವಳಿಗೂ ತಿದ್ದಿಕೊಳ್ಳಲು ಸಾಧ್ಯ" ಎಂದು ಚೈತ್ರಾ ಕುಂದಾಪುರ ಹೇಳಿದ್ಧಾರೆ.