Bigg Boss Kannada 12: ಬಿಗ್‌ಬಾಸ್ ಗೆದ್ದ ಬಳಿಕ ಗಿಲ್ಲಿ ನಟ ಏನಂದ್ರು ಗೊತ್ತಾ?
Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ (Grand Finale) ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್ ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಇದೀಗ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ಗಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಗೆದ್ದ ಬಳಿಕ ಗಿಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada Season 12) ಗ್ರ್ಯಾಂಡ್ ಫಿನಾಲೆ (Grand Finale) ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ (Gilli Nata Winner) ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್ (Gilli Fans) ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಇದೀಗ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ಗಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಗೆದ್ದ ಬಳಿಕ ಗಿಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಅಳೋಣ ಅಂದ್ರೆ ನಂಗೆ ಅಳುನೂ ಬರಲ್ಲ
ಬಿಗ್ ಬಾಸ್ ಹೋಗಬೇಕಾದರೆ, ಕೆಲವು ಜನರ ಪ್ರೀತಿ ಸಂಪಾದಿಸಿದ್ದೆ, ಅವರಿಗೆ ಮೋಸ ಮಾಡಬಾರದು ಅಂದುಕೊಂಡಿದ್ದೆ. ಒಳಗಡೆ ವಿಡಿಯೊ ತೋರಿಸ್ತಾ ಇದ್ದರು. ಕಟೌಟ್ ಅದೆಲ್ಲ ಹಾಕಿರೋದು. ಅದೆಲ್ಲ ನೋಡಿ ನನಗೆ ತುಂಬಾ ಸಂತೋಷವಾಯ್ತು. ನನಗೆ ನಂಬಲೂ ಆಗ್ತಾ ಇರಲಿಲ್ಲ. ಹಾಳಾದ್ದು ಅಳೋಣ ಅಂದ್ರೆ ನಂಗೆ ಅಳುನೂ ಬರಲ್ಲ.
ಇದನ್ನೂ ಓದಿ: Bigg Boss Kannada 12: ಕೋಟ್ಯಂತರ ಮನಸ್ಸುಗಳನ್ನು ಗೆದ್ದ ಪುಟ್ಟಿ ರಕ್ಷಿತಾಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
ಅದೆಲ್ಲ ನೋಡಿ ಕೈ ಹಿಂಡಿಕೊಂಡು ನೋಡ್ತಾ ಇದ್ದೆ, ನಂಬಲೇ ಆಗ್ತಾ ಇರಲಿಲ್ಲ. ದೇವರ ಆಶೀರ್ವಾದ ತುಂಬಾ ಜಾಸ್ತಿ ಸಿಕ್ಕಿದೆ. ಇಷ್ಟು ಜನ ಪ್ರೀತಿ ತೋರಿಸ್ತಾ ಇದ್ದಾರೆ, ಆ ಯೋಗ್ಯತೆ, ಅರ್ಹತೆ ನನಗೆ ಇದ್ಯಾ ಅನ್ನೋದು ಅನ್ನಿಸುತ್ತೆ ಎಂದಿದ್ದಾರೆ ಗಿಲ್ಲಿ.
ಶುಭ ಹಾರೈಕೆ
ಗಿಲ್ಲಿ ವಿನ್ ಆದ ಬಳಿಕ ಸಾಕಷ್ಟು ಜನ, ಗಣ್ಯರು ಶುಭ ಹಾರೈಸಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು ಎಂದು ಹೆಚ್ ಡಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿದರು.
Our Orginal Challenging Star Gilli
— Spidey 🕷️🕸️ (@Movie_Tweetz_) January 19, 2026
Congratulations #bbk12 #GilliNata
Here the new tag #ChallengingStarGillipic.twitter.com/aI3kgR9dus
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ ನಟ ಚಾಂಪಿಯನ್ ಆಗಿದ್ದರಿಂದ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಗ್ರ್ಯಾಂಡ್ ಫಿನಾಲೆ ಹಿನ್ನೆಲೆಯಲ್ಲಿ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋದ ಬಿಗ್‌ಬಾಸ್ ಹೌಸ್ ಬಳಿ ಭಾನುವಾರ ರಾತ್ರಿ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದರು.
ಸಂಜೆಯೇ ಜಾಲಿವುಡ್ ಸ್ಟುಡಿಯೋದ ಎರಡೂ ಗೇಟ್ಗಳ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಗಿಲ್ಲಿ ಪರ ಜೈಕಾರ ಹಾಕಿ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ನೂಕುನುಗ್ಗಲು ಸಂಭವಿಸಿದ್ದರಿಂದ ಜನಸಂದಣಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.