ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ ಹಾಗೂ ಗಿಲ್ಲಿ ಹಾವಳಿ ಜೋರಾಗಿದೆ. ರಜತ್‌ ಹಾಗೂ ಚೈತ್ರಾ ನಡುವೆ ಟಾಸ್ಕ್‌ ವೇಳೆ ಸಿಕ್ಕಾಪಟ್ಟೆ ಗಲಾಟೆ ಆಯ್ತು. ಫ್ಯಾಮಿಲಿ ಮ್ಯಾಟರ್‌ ಕೂಡ ಗಲಾಟೆ ಮಧ್ಯದಲ್ಲಿ ತಂದರು. ಇದೀಗ ರಜತ್‌ ಅವರು ಗಿಲ್ಲಿ ಇಟ್ಟುಕೊಂಡು ಚೈತ್ರಾ ಅವರನ್ನ ಉರಿಸುತ್ತಿದ್ದಾರೆ. ಚೈತ್ರಾ-ರಜತ್ ಜಗಳಕ್ಕೆ ಗಿಲ್ಲಿನೇ ಸೇತುವೆ ಆಗಿದ್ದಾರೆ.

ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 17, 2025 2:34 PM

ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ (Rajath Gilli) ಹಾಗೂ ಗಿಲ್ಲಿ ಹಾವಳಿ ಜೋರಾಗಿದೆ. ರಜತ್‌ ಹಾಗೂ ಚೈತ್ರಾ ನಡುವೆ ಟಾಸ್ಕ್‌ ವೇಳೆ ಸಿಕ್ಕಾಪಟ್ಟೆ ಗಲಾಟೆ ಆಯ್ತು. ಫ್ಯಾಮಿಲಿ (Family Matter) ಮ್ಯಾಟರ್‌ ಕೂಡ ಗಲಾಟೆ ಮಧ್ಯದಲ್ಲಿ ತಂದರು. ಇದೀಗ ರಜತ್‌ ಅವರು ಗಿಲ್ಲಿ ಇಟ್ಟುಕೊಂಡು ಚೈತ್ರಾ ಅವರನ್ನ ಉರಿಸುತ್ತಿದ್ದಾರೆ. ಚೈತ್ರಾ-ರಜತ್ (Chaithra Rajath) ಜಗಳಕ್ಕೆ ಗಿಲ್ಲಿನೇ ಸೇತುವೆ ಆಗಿದ್ದಾರೆ.

ಕೀ ಕೊಟ್ಟರೆ ಸಾಕು ಚೈತ್ರಾ ಕೂಗೋದೇ!

ಮೊದಲಿಗೆ ಗಿಲ್ಲಿ ಕೀ ಕೊಟ್ಟರೆ ಸಾಕು ಚೈತ್ರಾ ಕಿಟಾರ್‌ ಅಂತ ಕಿರುಚುತ್ತಾರೆ. ಹೋದ ಸೀಸನ್‌ ಬರೀ ಬಾಯಿ ಮಾತೇ ಒಂದು ಗೆದ್ದಿಲ್ಲ. ಏಳು ಸಲ ಕಳಪೆ ತಳ್ಳಿದ್ದು ಇದಕ್ಕೆ ಅಂತ ರಜತ್‌ ಅಂತಿದ್ದಾರೆ. ಶುಕ್ರವಾರ ಬಂದರೆ ಸಾಕು ಹುಷಾರ್‌ ತಪ್ತಾ ಇದ್ಯಂತೆ ಏಕೆ? ಅಂತ ಪ್ರಶ್ನೆ ಇಟ್ಟಿದ್ದಾರೆ ಗಿಲ್ಲಿ.

ನಾ ಕಂಡ ಚೈತ್ರಾ ಅಂತ ಬುಕ್‌ ಬರೀಲಾ ಅಂತ ಗಿಲ್ಲಿ ಸಖತ್‌ ಚೈತ್ರಾ ಬಗ್ಗೆ ಕಾಮಿಡಿ ಮಾಡಿದ್ದಾರೆ. ಚೈತ್ರಾ ಆಡಿಕೊಳ್ಳೋದು ಅಂದರೆ ಒಂಥರಾ ಖುಷಿ ಅಂದಿದ್ದಾರೆ ಗಿಲ್ಲಿ. ಇನ್ನು ಗಿಲ್ಲಿ ಕಾಮಿಡಿಗೆ ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನು ಗಿಲ್ಲಿ ಮಾತಿಗೆ ಚೈತ್ರಾ ಕೂಡ ಕೌಂಟರ್‌ ಕೊಟ್ಟಿದ್ದಾರೆ. ಬಾಯಿಯಿಂದ ಬಂದಿದ್ದೀನಿ. ಬಾಯಿಯಿಂದಲೇ ಗೆಲ್ತೀನಿ ಅಂತ ಹೇಳಿದ್ದಾರೆ. ನಾನು ಹುಷಾರು ತಪ್ಪಿಸೋಕೆ ಬಂದಿದ್ದೀನಿ ಅಂತ ಕೂಗಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ವೀಕೆಂಡ್‌ನಲ್ಲಿ ಕೆಲವರಿಗೆ ಮಾತ್ರ ಸುದೀಪ್ ಬೈಯೋದ್ಯಾಕೆ? ಕೊಟ್ಟರು ಕಾರಣ

ಟಾಸ್ಕ್ ಸರಿಯಾಗಿ ನಿಭಾಯಿಸದ ಚೈತ್ರಾ

ಈವರೆಗೆ ಬಿಗ್ ಬಾಸ್ ಮನೆಯಲ್ಲಿ ಇಂತಹ ಕೆಟ್ಟ ಆಟ ಆಡುವ ಯಾರೊಬ್ಬ ಸ್ಪರ್ಧೆಯೂ ಇರಲಿಲ್ಲ. ಟಾಸ್ಕ್ ನಲ್ಲಿ ಎಲ್ಲರೂ ನ್ಯಾಯಬದ್ಧವಾಗಿ ಆಟ ಆಡುತ್ತಿದ್ದರು. ಇದೀಗ ಚೈತ್ರ ಬಂದ ನಂತರ ಕ್ಯಾಪ್ಟನ್ ಟಾಸ್ಕ್ ಉಸ್ತುವಾರಿ ಹಾಳು ಮಾಡಿದರು. ಇತ್ತೀಚೆಗೆ ಬಿಗ್ ಬಾಸ್ ನೀಡಿದ ಟಾಸ್ಕ್​​ನಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬೇರೆ ಬೇರೆ ತಂಡದಲ್ಲಿ ಆಟ ಆಡುತ್ತಿದ್ದರು. ಆಗ ಅವರಿಬ್ಬರ ನಡುವೆ ಕ್ಲ್ಯಾಶ್ ಆಗಿದೆ.

ಕಲರ್ಸ್‌ ಕನ್ನಡ ಪ್ರೋಮೋ

ಟಾಸ್ಕ್ ಆಡುವಾಗ ನಿಯಮಗಳನ್ನು ಮುರಿದಿದ್ದಾರೆ ಎಂಬುದು ರಜತ್ ಆರೋಪ. ನೀನು ಸುಳ್ಳಿ ಎಂದು ಚೈತ್ರಾಗೆ ಕೂಗಿದ್ದಾರೆ ರಜತ್‌. ನ್ಯಾಯವಾಗಿ ಆಟ ಆಡೋಕೆ ಚೈತ್ರಾಗೆ ಒಮ್ಮೆಯೂ ಆಗಲ್ಲ. ಸೋಲುವ ಸಮಯದಲ್ಲಿ ಮೋಸ ಮಾಡ್ತಾಳೆ ಎಂದು ರಜತ್‌ ಅವರು ಚೈತ್ರಾ ಬಗ್ಗೆ ಹೇಳಿದ್ದಾರೆ. ಈ ವೇಳೆ ಚೈತ್ರಾ ಅವರು ಫ್ಯಾಮಿಲಿಯನ್ನು ತಂದು ಕೂಗಾಡಿದರು. ಚೈತ್ರಾ ಅವರು ಫ್ಯಾಮಿಲಿ ಬಗ್ಗೆ ಮಾತನಾಡಿದ್ದಕ್ಕೆ ರಜತ್​​ಗೆ ಕೋಪಬಂದಿದೆ. ಆಟ ಆಡೋಕೆ ಯೋಗ್ಯತೆ ಇಲ್ಲದೇ ಇರುವವಳು ನೀನು ಅಂತ ರಜತ್‌ ಕೂಗಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸೀಕ್ರೆಟ್‌ ರೂಮಲ್ಲಿ ಧ್ರುವಂತ್‌ ಸಣ್ಣ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಕೆಂಡ!

ಇದಕ್ಕೂ ಮುಂಚೆ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್‌ ಆಗಿತ್ತು. ಚೈತ್ರಾ ಮತ್ತು ಅಶ್ವಿನಿ ಗೌಡ ನಡುವೆ ಯಾವ ಲೆವೆಲ್‌ಗೆ ಪೈಪೋಟಿ ಇತ್ತು ಎಂದರೆ, ಅಶ್ವಿನಿಗೆ ಪರಚಿ, ಗಿಲ್ಲಿ, ಉಗಿದು ರಂಪಾ ಮಾಡಿದರೆ, ಚೈತ್ರಾ ಅವರ ಕೈಗೆ ಅಶ್ವಿನಿ ಪಟಪಟ ಅಂತ ಹೊಡೆದೇ ಬಿಟ್ಟಿದ್ದಾರೆ! ತಮ್ಮ ಬಟ್ಟೆಯನ್ನು ಅಶ್ವಿನಿ ಎಳೆದರು ಅಂತ ಚೈತ್ರಾ ಕೂಗಾಡಿದರೆ, ಚೈತ್ರಾ ಕುಂದಾಪುರ ನನ್ನ ಕಾಲನ್ನು ಉಗುರಿನಿಂದ ಪರಚಿದ್ರು ಎಂದು ಅಶ್ವಿನಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಪರಚಿದ ಕೈಗೆ ಅಶ್ವಿನಿ ಹೊಡೆದಿದ್ದೂ ಆಗಿದೆ.