ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಕೊಟ್ಟ ಗಿಲ್ಲಿ; ಕ್ಯಾಪ್ಟನ್‌ ರಾಶಿಕಾ ಶೆಟ್ಟಿ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ!

BBK 12 Captaincy Race: ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ರಾಶಿಕಾ ಶೆಟ್ಟಿ ಅವರ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ. ಗಿಲ್ಲಿ ನಟ ಮತ್ತು ರಘು ಅವರನ್ನು ರಾಶಿಕಾ ನಾಮಿನೇಟ್ ಮಾಡಿದ್ದರೂ, 'ಇಟ್ಟ ಗುರಿ ತಪ್ಪಲ್ಲ' ಟಾಸ್ಕ್‌ನಲ್ಲಿ ಗೆಲ್ಲುವ ಮೂಲಕ ಅವರಿಬ್ಬರೂ ನಾಮಿನೇಷನ್‌ನಿಂದ ಬಚಾವ್‌ ಆಗಿದ್ದಲ್ಲದೆ, ಕ್ಯಾಪ್ಟನ್ಸಿ ರೇಸ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

Bigg Boss 12: ರಾಶಿಕಾ ಲೆಕ್ಕಾಚಾರಗಳನ್ನ ಉಲ್ಟಾಪಲ್ಟಾ ಮಾಡಿದ ಗಿಲ್ಲಿ ನಟ!

-

Avinash GR
Avinash GR Dec 18, 2025 9:00 AM

ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ರಾಶಿಕಾ ಶೆಟ್ಟಿ ಅವರ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ. ಹೌದು, ಈ ವಾರ ಸ್ಪರ್ಧಿಗಳನ್ನು ನಾಮಿನೇಟ್‌ ಮಾಡುವ ಅಧಿಕಾರವನ್ನು ಬಿಗ್‌ ಬಾಸ್‌ ಕ್ಯಾಪ್ಟನ್‌ ರಾಶಿಕಾಗೆ ನೀಡಿದ್ದರು. ಆದರೆ ರಾಶಿಕಾ ಅಂದುಕೊಂಡಿದ್ದೇ ಒಂದು, ಕೊನೆಗೆ ಆಗಿದ್ದೇ ಇನ್ನೊಂದು ಎಂಬಂತೆ ಟ್ವಿಸ್ಟ್‌ ಸಿಕ್ಕಿದೆ. ಗಿಲ್ಲಿ ನಟ ಮತ್ತು ರಘು ಅವರು ರಾಶಿಕಾ ಲೆಕ್ಕಾಚಾರಗಳನ್ನ ತಲೆ ಕೆಳಗೆ ಮಾಡಿದ್ದಾರೆ.

ಕ್ಯಾಪ್ಟನ್ಸಿ ರೇಸ್‌ಗೆ ಅಭ್ಯರ್ಥಿಗಳಾದ ರಘು & ಗಿಲ್ಲಿ

ಕ್ಯಾಪ್ಟನ್ ರಾಶಿಕಾ ಅವರು ತಮಗಿರುವ ಅಧಿಕಾರ ಬಳಸಿ ಗಿಲ್ಲಿ ಮತ್ತುರಘು ಅವರನ್ನು ನಾಮಿನೇಟ್‌ ಮಾಡಿದ್ದರು. ಅತ್ತ ಧನುಷ್‌ ಮತ್ತು ರಜತ್‌ ಅವರನ್ನು ನಾಮಿನೇಷನ್‌ನಿಂದ ಬಚಾವ್‌ ಮಾಡಿದ್ದರು. "ನಾನು ಕ್ಯಾಪ್ಟನ್‌ ಆದಮೇಲೆ ರಾಶಿಕಾ ಮಾತು ಕೇಳಬೇಕು ಅಂತಲ್ಲ, ಕ್ಯಾಪ್ಟನ್‌ ಸ್ಥಾನಕ್ಕೆ ಗೌರವ ನೀಡಬೇಕು. ಕಾವ್ಯ ಮಾತಿಗೆ ಮರ್ಯಾದೆ ಕೊಡುವ ನೀವು ಕ್ಯಾಪ್ಟನ್‌ಗೆ ಆ ಮರ್ಯಾದೆ ಕೊಡಲ್ಲ" ಎಂದು ಗಿಲ್ಲಿಯನ್ನು ನಾಮಿನೇಟ್‌ ಮಾಡಿದ್ದಕ್ಕೆ ಕಾರಣ ನೀಡಿದ್ದರು ರಾಶಿಕಾ.

BBK 12: ಬಿಗ್ ಬಾಸ್ ಮನೆ ಈಗ ಬಿಬಿ ಕಾಲೇಜ್: ಭರ್ಜರಿಯಾಗಿ ಸಾಗುತ್ತಿದೆ ರಾಶಿಕಾ-ಸೂರಜ್ ಪ್ರೇಮಗೀತೆ

ಇನ್ನು, ರಘು ಅವರನ್ನು ನಾಮಿನೇಟ್‌ ಮಾಡಿದ್ದಕ್ಕೂ ರಾಶಿಕಾ ಬಳಿ ಕಾರಣ ಇತ್ತು. "ಬರೀ ಯೋಚನೆಯಲ್ಲೇ ರಘು ಅಣ್ಣ ಟೈಮ್‌ ವೇಸ್ಟ್‌ ಮಾಡ್ತಿದ್ದಾರೆ. ಅವರಿನ್ನೂ ಓಪನ್‌ ಅಪ್‌ ಆಗಬೇಕು, ಎಲ್ಲರೊಟ್ಟಿಗೆ ಮಾತನಾಡಬೇಕು. ತಮ್ಮ ನಿರ್ಧಾರಗಳೇನು ಎಂಬುದನ್ನು ನೇರವಾಗಿ ಹೇಳಬೇಕು" ಎಂದು ರಾಶಿಕಾ ಹೇಳಿದ್ದಾರೆ.

ಧನುಷ್‌ ಮತ್ತು ರಜತ್‌ನ ಸೇವ್‌ ಮಾಡಿದ್ದೇಕೆ?

"ಧನುಷ್‌ ನಿರ್ಧಾರಗಳು ಕರೆಕ್ಟ್‌ ಆಗಿರುತ್ತವೆ. ಯಾವುದೇ ಸಮಸ್ಯೆ ಬಂದರೂ ಧನುಷ್‌ ಮುಂದೆ ಹೋಗ್ತಾರೆ, ಆದರೆ ಜಗಳ ಮಾಡಲ್ಲ. ಇನ್ನು, ಎಲ್ಲರೂ ರಜತ್‌ ಅವರ ಮಾತುಗಳನ್ನ ತಪ್ಪು ಅಂತಾರೆ. ಆದರೆ, ನನಗೆ ಅವರು ತುಂಬಾ ಜೆನ್ಯೂನ್‌ ಅಂತ ಅನಿಸಿದ್ದರು" ಎಂಬುದು ಧನುಷ್‌ ಮತ್ತು ರಜತ್‌ ಅವರನ್ನು ಸೇವ್‌ ಮಾಡಲು ರಾಶಿಕಾ ನೀಡಿದ ಕಾರಣಗಳು.

BBK 12: ಶರಂಪರ ಕಿತ್ತಾಡಿದ ಚೈತ್ರಾ ಕುಂದಾಪುರ; ಫೈರ್‌ ಬ್ರ್ಯಾಂಡ್‌ ಜೊತೆ ಅಶ್ವಿನಿ ಗೌಡ ಫೈಟ್, ಸುಸ್ತಾಗಿಹೋದ ಕಾಪ್ಟನ್‌ ರಾಶಿಕಾ ಶೆಟ್ಟಿ!

ನಂತರ ಕ್ಯಾಪ್ಟನ್ಸ್‌ ರೇಸ್‌ಗಾಗಿ ನಡೆದ‌ ಇಟ್ಟ ಗುರಿ ತಪ್ಪಲ್ಲ ಟಾಸ್ಕ್‌ನಲ್ಲಿ ರಜತ್ ಮತ್ತು ಧನುಷ್ ಅವರನ್ನು ರಘು ಮತ್ತು ಗಿಲ್ಲಿ ತಂಡ ಸೋಲಿಸಿದೆ. ಆ ಮೂಲಕ ನಾಮಿನೇಟ್‌ ಆಗಿದ್ದ ಅವರಿಬ್ಬರು ಅದರಿಂದ ಬಚಾವ್‌ ಆಗಿದ್ದಾರೆ. ಅಲ್ಲದೆ, ರಾಶಿಕಾ ಕಡೆಯಿಂದ ಸೇಫ್‌ ಆಗಿದ್ದ ಧನುಷ್‌ ಮತ್ತು ರಜತ್‌ ಅವರು ಇಟ್ಟ ಗುರಿ ತಪ್ಪಲ್ಲ ಟಾಸ್ಕ್‌ನಲ್ಲಿ ಸೋತು ನಾಮಿನೇಟ್‌ ಆಗಿದ್ದಾರೆ. ಇನ್ನು, ಟಾಸ್ಕ್‌ ಗೆದ್ದ ಪರಿಣಾಮ, ಕ್ಯಾಪ್ಟನ್ಸ್‌ ರೇಸ್‌ಗೆ ಅಭ್ಯರ್ಥಿಗಳಾಗಿ ರಘು ಮತ್ತು ಗಿಲ್ಲಿ ಆಯ್ಕೆ ಆಗಿದ್ದಾರೆ. ಪ್ರತಿ ವಾರ ನಾಮಿನೇಟ್‌ ಆಗುತ್ತಿದ್ದ ಗಿಲ್ಲಿ, ಈ ವಾರ ನಾಮಿನೇಷನ್‌ನಿಂದ ಬಚಾವ್‌ ಆಗಿರುವುದು ವಿಶೇಷ.