Bigg Boss 12: ʻಈ ಉತ್ಸಾಹವನ್ನ ಎಲೆಕ್ಷನ್ ಬಂದಾಗ ತೋರಿಸಿ, ದೇಶ ಉದ್ಧಾರ ಆಗತ್ತೆʼ; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಜಾಹ್ನವಿ?
Bigg Boss Kannada 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಹಂತ ತಲುಪಿದ್ದು, ಗೆಳತಿ ಅಶ್ವಿನಿ ಗೌಡ ಪರವಾಗಿ ಮಾಜಿ ಸ್ಪರ್ಧಿ ಜಾಹ್ನವಿ ಅವರು ಮತ ಯಾಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ನೀಡುತ್ತಿರುವ ಬೆದರಿಕೆಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
ಬಿಗ್ ಬಾಸ್ ಫಿನಾಲೆಗೆ ಎರಡು ದಿನಗಳು ಮಾತ್ರ ಬಾಕಿ ಇದ್ದು, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಧನುಷ್ ಮತ್ತು ಕಾವ್ಯ ಅವರು ಫಿನಾಳೆ ಅಂಗಳದಲ್ಲಿ ನಿಂತಿದ್ದಾರೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳಿಗಾಗಿ ಪ್ರಚಾರ ನಡೆಯುತ್ತಿದೆ. ಅದರಲ್ಲೂ ಗಿಲ್ಲಿ ನಟರಾಜ್ ಅವರ ಹವಾ ಜೋರಾಗಿದೆ. ಇದೀಗ ಈ ಸೀಸನ್‌ನ ಮಾಜಿ ಸ್ಪರ್ಧಿ ಜಾಹ್ನವಿ ಅವರು ಕೂಡ ಅಖಾಡಕ್ಕೆ ಇಳಿದಿದ್ದು, ಅಶ್ವಿನಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಗಿಲ್ಲಿ ನಟನ ಫ್ಯಾನ್ಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಎಂಬ ಅನುಮಾನ ಹುಟ್ಟುಹಾಕಿದ್ದಾರೆ.
ಜಾಹ್ನವಿ ಏನಂದ್ರು ನೋಡಿ
"ನನ್ನ ಆತ್ಮೀಯ ಗೆಳತಿ ಅಶ್ವಿನಿ ಗೌಡ ಅವರು ಫಿನಾಲೆಗೆ ಬಂದಿದ್ದಾರೆ. ಅವರು ತುಂಬಾ ಚೆನ್ನಾಗಿ ಆಟ ಆಡಿದ್ದಾರೆ. ನಾನು ಈಗಾಗಲೇ ಮತ ಹಾಕಿದ್ದೇನೆ. ನಿಮ್ಮ ಅತ್ಯಮೂಲ್ಯವಾದ 99 ಮತಗಳನ್ನು ಅಶ್ವಿನಿ ಗೌಡಗೆ ಹಾಕಿ. ತಮಗೆ ಅನ್ನಿಸಿದ್ದನ್ನು ನೇರವಾಗಿ ಯಾವುದೇ ದಯೆ ದಾಕ್ಷಿಣ್ಯ ಇಲ್ಲದೇ ಮಾತನಾಡಿದ್ದಾರೆ. ಶಕ್ತಿಮೀರಿ ಟಾಸ್ಕ್ ಆಡಿದ್ದಾರೆ. ಗೆಲ್ಲುವ ಅರ್ಹತೆಯನ್ನು ಅವರು ಹೊಂದಿದ್ದಾರೆ. ಹಾಗಾಗಿ, ಎಲ್ಲರೂ ಅಶ್ವಿನಿ ಅವರಿಗೆ ವೋಟ್ ಮಾಡಿ, ಅವರನ್ನೇ ಗೆಲ್ಲಿಸೋಣ" ಎಂದು ಜಾಹ್ನವಿ ಮನವಿ ಮಾಡಿದ್ದಾರೆ.
BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ
ನೆಗೆಟಿವ್ ಆಗುತ್ತದೆ, ಆ ಬಗ್ಗೆ ಹುಷಾರಾಗಿರಿ
"ಕೆಲ ಅಭ್ಯರ್ಥಿಗಳ ಅಭಿಮಾನಿಗಳು, ನೀವೇನಾದರೂ ಈ ಕಂಟೆಸ್ಟಂಟ್‌ನ ಗೆಲ್ಲಿಸಿಲ್ಲ ಅಂದರೆ ಬಂದು ಸುಟ್ಟಾಕಿಬಿಡ್ತಿವಿ ಅಂತೆಲ್ಲಾ ಬೆದರಿಕೆ ಹಾಕ್ತಾ ಇದ್ದೀರಿ. ಇದು ಯಾವುದೂ ವರ್ಕ್ ಆಗಲ್ಲ. ನೀವು ಮಾಡುತ್ತಿರುವುದು ನಿಮ್ಮ ಅಭ್ಯರ್ಥಿಗೆ ಪಾಸಿಟಿವ್ ಅಂತೂ ಆಗಲ್ಲ. ಅದು ಅವರಿಗೆ ನೆಗೆಟಿವ್ ಆಗುತ್ತದೆ. ಆ ಬಗ್ಗೆ ಹುಷಾರಾಗಿರಿ" ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಜಾಹ್ನವಿ.
ಜಾಹ್ನವಿ ಹಂಚಿಕೊಂಡ ವಿಡಿಯೋ
ನಮ್ಮ ದೇಶ ಉದ್ದಾರ ಆಗಿರೋದು
"ಇನ್ನೊಂದು ಈ ಬೆಳವಣಿಗೆ ನೋಡುತ್ತಿದ್ದರೆ, ಅಳಬೇಕೋ, ನಗಬೇಕೋ ಗೊತ್ತಾಗುತ್ತಿಲ್ಲ. ಬಿಗ್ ಬಾಸ್ ಅನ್ನೋದು ಒಂದು ರಿಯಾಲಿಟಿ ಶೋ. ಅದೊಂದು ಮನರಂಜನೆ ಕಾರ್ಯಕ್ರಮ. ಅದನ್ನು ಪರ್ಸನಲ್ ಆಗಿ ತಗೊಬೇಡಿ. ಈ ಥರ ಎಲ್ಲಾ ಮಾಡ್ತಾ ಇರೋದು ನೋಡಿದಾಗ ಅಚ್ಚರಿ ಆಗತ್ತೆ. ಒಂದು ರಿಯಾಲಿಟಿ ಶೋಗೆ ತೋರಿಸುತ್ತಿರುವ ಆಸಕ್ತಿಯನ್ನು, ಆವೇಶಕ್ಕೆ ಒಳಗಾಗುವುದನ್ನು ಎಲೆಕ್ಷನ್ ಅಲ್ಲಿ ತೋರಿಸಿ. ಈಗ ತೋರಿಸುತ್ತಿರುವ ಗಂಭೀರತೆಯಲ್ಲಿ ಶೇ.10ರಷ್ಟು ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ತೋರಿಸಿದ್ದರೆ, ನಮ್ಮ ನಾಡು ದೇಶ ಉದ್ದಾರ ಆಗಿರೋದು" ಎಂದು ಜಾಹ್ನವಿ ಹೇಳಿದ್ದಾರೆ.
ಅಶ್ವಿನಿ ಅವರನ್ನೇ ಗೆಲ್ಲಿಸೋಣ
"ನಮ್ಮನ್ನು ಆಳುವ ಜನಪ್ರತಿನಿಧಿ ಯಾರಾಗಬೇಕು ಎಂದು ಶೇ.10ರಷ್ಟು ತಲೆ ಕೆಡಿಸಿಕೊಂಡಿದ್ದರೂ ಬಹುಶಃ ಇವತ್ತು ನಾವು ಈ ಥರ ಇರ್ತಾ ಇರಲಿಲ್ಲ. ಇದನ್ನು ನಾನು ಹೇಳಬೇಕು ಎಂದು ಅನ್ನಿಸ್ತು, ಹೇಳಿದೆ. ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ, ಅಶ್ವಿನಿ ಅವರನ್ನೇ ಗೆಲ್ಲಿಸೋಣ" ಎಂದು ಜಾಹ್ನವಿ ಹೇಳಿದ್ದಾರೆ.