Bigg Boss Kannada 12: ಮಾಳು ಮನೆಗೆ ಹೋಗೋಕೆ ರಕ್ಷಿತಾನೆ ಕಾರಣ; ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ!
Spandana Rakshitha: ಈ ವಾರ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮನೆಯ ಕ್ಯಾಪ್ಟನ್ (Captain) ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವುದರಿಂದ ಮನೆಯ ಸದಸ್ಯರನ್ನು ನಾಮಿನೇಟ್ (Nominate) ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ. ಮನೆಯ ಒಂದೊಂದು ಜೋಡಿಯ ವಾದ ಪ್ರತಿವಾದವನ್ನು ಆಲಿಸಿ, ಅದರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹೋಗುವಂತೆ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಗಿಲ್ಲಿಗೆ ನೀಡಲಾಗಿದೆ. ರಕ್ಷಿತಾ ಅವರು ಕಾವ್ಯ (Kavya Shaiva) ಎದುರಾಳಿಯಾಗಿ, "ನನಗೆ ಕಾವ್ಯ ಅವರಲ್ಲಿ ವ್ಯಕ್ತಿತ್ವ, ಮನುಷ್ಯತ್ವ ಕಾಣಿಸ್ತಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಇದೀಗ ಸ್ಪಂದನಾ ಬಗ್ಗೆಯೂ ಹೊಸ ಆರೋಪ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಈ ವಾರ ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿ (Gilli Nata) ಮನೆಯ ಕ್ಯಾಪ್ಟನ್ (Captain) ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವುದರಿಂದ ಮನೆಯ ಸದಸ್ಯರನ್ನು ನಾಮಿನೇಟ್ (Nominate) ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ. ಮನೆಯ ಒಂದೊಂದು ಜೋಡಿಯ ವಾದ ಪ್ರತಿವಾದವನ್ನು ಆಲಿಸಿ, ಅದರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹೋಗುವಂತೆ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಗಿಲ್ಲಿಗೆ ನೀಡಲಾಗಿದೆ. ರಕ್ಷಿತಾ ಅವರು ಕಾವ್ಯ (Kavya Shaiva) ಎದುರಾಳಿಯಾಗಿ, "ನನಗೆ ಕಾವ್ಯ ಅವರಲ್ಲಿ ವ್ಯಕ್ತಿತ್ವ, ಮನುಷ್ಯತ್ವ ಕಾಣಿಸ್ತಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಇದೀಗ ಸ್ಪಂದನಾ (spandana) ಬಗ್ಗೆಯೂ ಹೊಸ ಆರೋಪ ಮಾಡಿದ್ದಾರೆ.
ಮಾಳು ಅವರು ತುಂಬಾ ಬೆಟರ್
ವ್ಯಕ್ತಿತ್ವದಲ್ಲಿ ಸ್ಪಂದನಾಕ್ಕಿಂತ ಮಾಳು ಅವರು ತುಂಬಾ ಬೆಟರ್ ಎಂದಿದ್ದಾರೆ ಇದು ಸ್ಪಂದನಗೆ ಕೋಪ ತರಿಸಿದೆ. ಬೇರೆ ಅವರನ್ನ ಪೋಟ್ರೆ ಮಾಡಿ ಆಟ ಆಡೋದು ಅಂದಿದ್ದಾರೆ. “ನನ್ನ ಅಭಿಪ್ರಾಯವನ್ನು ನಿಮಗೆ ಪ್ರಶ್ನೆ ಮಾಡಲು ನಿಮಗೆ ಯಾರೂ ಅಧಿಕಾರ ಕೊಟ್ಟಿಲ್ಲ” ಎಂದುʻ ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.
ಇದರಿಂದ ಕೋಪಗೊಂಡ ಸ್ಪಂದನಾ, ಅಷ್ಟೇ ಅಲ್ಲ ಮನೆಯಲ್ಲಿ ನಿನ್ನ ಅಭಿಪ್ರಾಯ ಹೇಗೆ ಕೋಡ್ತಿಯೋ ಹಾಗೇ ನನ್ನ ಅಭಿಪ್ರಾಯ ನಾನು ಕೊಡ್ತೀನಿ. ಮಾಳು ಮನೆಗೆ ಹೋಗೋಕೆ ನೀನೆ ಕಾರಣ. ಮಾಳು ಮಾತನಾಡಿರಬೇಕಾದನ್ನ ರಕ್ಷಿತಾ ಮಾತನಾಡಿಯೇ ಮಾಳು ಅವರನ್ನು ಮನೆಗೆ ಕಳುಹಿಸಿದ್ದು. ಅರ್ಧ ಆಟವನ್ನು ಆಡದೇ ಮನೆಗೆ ಹೋದರೆ ನಂಗೆ ತುಂಬಾ ಖಷಿ ಎಂದೂ ಹೇಳಿದ್ದಾರೆ.
ವೈರಲ್ ವಿಡಿಯೋ
ರಕ್ಷಿತಾ ಟಾರ್ಗೆಟ್
ರಕ್ಷಿತಾ ಅವರು ಮೊದಲಿಂದಲೂ ಕಾವ್ಯ ಹಾಗೂ ಸ್ಪಂದನಾ ಅವರನ್ನು ಟಾರ್ಗೆಟ್ ಮಾಡುತ್ತಲೇ ಬರುತ್ತಿದ್ದಾರೆ. ಕಾವ್ಯ ಅವರ ಕುರಿತಾಗಿಯೂ ರಕ್ಷಿತಾ ಹಲವು ಆರೋಪಗಳನ್ನು ಮಾಡಿದರು. ಪ್ರತಿ ಬಾರಿಯೂ ವ್ಯಕ್ತಿತ್ವ ಎಂಬ ಪದವನ್ನು ಹಿಡಿದುಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ ರಕ್ಷಿತಾ.
ಈ ನಡುವೆ ಕಾವ್ಯ ಎದುರಾಳಿಯಾಗಿದ್ದ ರಾಶಿಕಾ ಮತ್ತು ಧ್ರುವಂತ್ ಅವರನ್ನು ಗಿಲ್ಲಿ ನಾಮಿನೇಟ್ ಮಾಡಿದ್ದಾರೆ. ಇದನ್ನು ಅಶ್ವಿನಿ ಗೌಡ ಖಂಡಿಸಿದ್ದಾರೆ. "ಇಲ್ಲಿ ಎಲ್ಲಾ ಅಂದುಕೊಂಡಂತೆಯೇ ನಡೆಯುತ್ತಿದೆ" ಎಂದಿದ್ದಾರೆ. ಅಲ್ಲದೆ, ಗಿಲ್ಲಿ ನಿರ್ಧಾರಕ್ಕೆ ಧ್ರುವಂತ್ ಮತ್ತು ರಾಶಿಕಾ ಕೂಡ ಅಸಹನೆ ವ್ಯಕ್ತಪಡಿಸಿದ್ದಾರೆ. ನಂತರ ಇದಕ್ಕೆ ಪ್ರತಿ ಹೇಳಿಕೆ ನೀಡಿರುವ ಗಿಲ್ಲಿ ನಟ, "ಇಲ್ಲಿ ಯಾವುದೇ ಫೇವರಿಸಂ ಇಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಗಿಲ್ಲಿ ನಟ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು! ಗಿಲ್ಲಿ ಎದುರು ಅಬ್ಬರಿಸಿದ ಅಶ್ವಿನಿ ಗೌಡ
ಕೆಲವು ವಾರಗಳಿಂದ ಕಾವ್ಯ ಶೈವ, ಸ್ಪಂದನಾ ಸೋಮಣ್ಣ ಟಾಸ್ಕ್‌ನಲ್ಲಿ ಸೋಲಬೇಕು, ಹೊರಗಡೆ ಹೋಗಬೇಕು ಎಂದು ರಕ್ಷಿತಾ ಅವರು ಪ್ರಯತ್ನಪಟ್ಟಿದ್ದರು . ಇನ್ನೇನು ಮನೆಗೆ ಹೋಗಬೇಕಿದ್ದ ಸ್ಪಂದನಾ ಉಳಿದುಕೊಂಡಿರೋದು ಕೂಡ ಆಶ್ಚರ್ಯ ತಂದಿದೆ.