Bigg Boss Kannada 12: ಧ್ರುವಂತ್‌ಗೆ ಆಟ, ರಕ್ಷಿತಾಗೆ ಪ್ರಾಣ ಸಂಕಟ; ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿ ನಡುಕ!
Rakshitha : ಬಿಗ್ ಬಾಸ್ ಮನೆಯಿಂದ ಧ್ರುವಂತ್ ಹಾಗೂ ರಕ್ಷಿತಾ ಅವರು ಔಟ್ ಆಗಿದ್ದಾರೆ. ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಹಲವರು ಸೇಫ್ ಆಗಿ ಕೊನೆಗೆ ರಜತ್ , ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಅಂತಿಮ ಔಟ್ ಎಂದು ಘೋಷಿಸಲಾಯ್ತು. ಆದರೀಗ ಇಬರಿಬ್ಬರು ಸೀಕ್ರೆಟ್ ರೂಮ್‌ನಲ್ಲಿ ಇದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಿಂದ (Bigg Boss Kannada 12) ಧ್ರುವಂತ್ ಹಾಗೂ ರಕ್ಷಿತಾ (Rakshitha Out) ಅವರು ಔಟ್ ಆಗಿದ್ದಾರೆ. ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಹಲವರು ಸೇಫ್ ಆಗಿ ಕೊನೆಗೆ ರಜತ್ (Rajath) , ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಅಂತಿಮ ಔಟ್ ಎಂದು ಘೋಷಿಸಲಾಯ್ತು. ಆದರೀಗ ಇಬರಿಬ್ಬರು ಸೀಕ್ರೆಟ್ ರೂಮ್‌ನಲ್ಲಿ ಇದ್ದಾರೆ. ಅದರಲ್ಲೂ ಧ್ರುವಂತ್ ಕೊಟ್ಟ ಕಾಟಕ್ಕೆ ತಲೆ ಮೇಲೆ ಕೈ ಇಟ್ಟುಕೊಂಡು ಫುಲ್ ಟೆನ್ಷನ್ ಆಗಿದ್ದಾರೆ ರಕ್ಷಿತಾ (Rakshitha) .
ಮನೆಮಂದಿ ಹೇಳೋದೇನು?
ಮನೆಮಂದಿ ಧ್ರುವಂತ್ ಹಾಗೂ ರಕ್ಷಿತಾ ಅವರು ಔಟ್ ಆಗಿದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ಅವರೆಲ್ಲರೂ ಹಿಂದೆ ಮಾತನಾಡಿರೋದು ಧ್ರುವಂತ್ ಹಾಗೂ ರಕ್ಷಿತಾ ಮುಂದೆ ವಿಡಿಯೋ ಪ್ಲೇ ಆಗಿದೆ. ಮನೆಯ ಒಳಗೆ ಚೈತ್ರಾ ಅವರು ರಾಶಿಕಾ ಬಳಿ, ರಕ್ಷಿತಾದು ಒಂದೇ ಸಮಸ್ಯೆ ಅಂದ್ರೆ ತುಂಬಾ ಕನ್‌ಫ್ಯೂಸ್ ಆಗಿರ್ತಾ ಇದ್ಲು ಎಂದಿದ್ದಾರೆ.
ಇನ್ನು ರಜತ್, ರಕ್ಷಿತಾ ಮನೆಯಿಂದ ಹೊರಗೆ ಹೋಗುವಾಗ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಇತ್ತು. ಧ್ರುವಂತ್‌ಗೆ ಯಾರು ಒಬ್ಬರು ಮಾತನಾಡಿಸಲಿಲ್ಲ ಎಂದಿದ್ದಾರೆ. ಈ ವೇಳೆ ರಕ್ಷಿತಾ, ಧ್ರುವಂತ್‌ಗೆ ನನ್ನ ಜನ ನನ್ನನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ.
ವೈರಲ್ ವಿಡಿಯೋ
pic.twitter.com/2WUgog1k28
— ಜೀವನ್ (@Rockstar_1_9) December 15, 2025
🚨 ಅಯ್ಯೋ ದೇವರೇ ಒಂದೇ ರೂಮಲ್ಲಿ ನಿಮ್ಮ ಜೊತೆ ಹೇಗೆ ಇರೋದು 👀🔥
BIGG BOSS Kannada S12 Monday Promo 🚨👀@Rockstar_1_9 @Rockstar_1_9#BBK12 #BiggBossKannada12 #BiggBoss #BiggBossKannada #biggbossseason12 #BBKSeason12 #BBK12live #KantaraChapter1…
ಮನೆಮಂದಿ ರಕ್ಷಿತಾ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಕ್ಕೆ ಏನೋ, ಧ್ರುವಂತ್ ವ್ಯಂಗ್ಯ ಮಾಡಲು ಶುರು ಮಾಡಿದರು. ನಿನ್ನಂಥವರೇ, ನಿನ್ನ ಇಡೀ ಮನೆಯಲ್ಲಿ ಡ್ರಾಮಗಳನ್ನು ನೋಡಿಕೊಂಡೇ ಬಂದಿದ್ದೇನೆ ಎಂದಿದ್ದಾರೆ. ಧ್ರುವಂತ್ ಕೊಡೋ ಕಾಟಕ್ಕೆ, ಅಯ್ಯೋ ದೇವರೇ ಒಂದೇ ರೂಮಲ್ಲಿ ನಿಮ್ಮ ಜೊತೆ ಹೇಗೆ ಇರೋದು! ಅಂತ ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ.
ಗಿಲ್ಲಿ, ರಜತ್ ಬೇಸರ
ಇನ್ನು ಈ ವಾರ ವೋಟಿಂಗ್ ಲೈನ್ಸ್ ಓಪನ್ ಇರಲಿಲ್ಲ. ಬಿಗ್ಬಾಸ್ ಬೇಕೆಂತಲೆ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿಯನ್ನು ಹೊರಗೆ ಕರೆಸಿಕೊಂಡಿದ್ದಾರೆ. ರಕ್ಷಿತಾ ಹೊರಗೆ ಬಂದ ಬಳಿಕವೂ ಸಹ ಮನೆ ಸದಸ್ಯರು ರಕ್ಷಿತಾ ಬಗ್ಗೆಯೇ ಮಾತನಾಡುತ್ತಿದ್ದರು.
‘ನಾನು ಯಾರಿಗೂ ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ಬೇಸರವಾಯ್ತು, ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದರು ಗಿಲ್ಲಿ.
ರಘು ಅವರು ರಕ್ಷಿತಾ ಹೋಗುವಾಗ, ನೆನಪಿಗೆಂದು ಅವರ ಆಭರಣವನ್ನೇ ತೆಗೆದುಕೊಟ್ಟರು. ರಜತ್ ಸಹ, ‘ನಾನು ಕಳೆದ ಸೀಸನ್ನಲ್ಲಿಯೂ ಸಹ ಯಾರನ್ನೂ ಹಚ್ಚಿಕೊಂಡಿರಲಿಲ್ಲ ಆದರೆ ರಕ್ಷಿತಾ ಅನ್ನು ಬಹಳ ಹಚ್ಚಿಕೊಂಡಿದ್ದೆ’ ಎಂದು ಬೇಸರ ಮಾಡಿಕೊಂಡರು.