Bigg Boss kannada 13: ಮೂರನೇ ವಾರದಲ್ಲೇ ಬಿಗ್ ಟ್ವಿಸ್ಟ್! ಅನ್‌ಫೇರ್ ಎಂದು ಕಣ್ಣೀರಿಟ್ಟ ಗಗನ್ ಚಿನ್ನಪ್ಪ
Bigg Boss kannada 13: ತಾಂಡವ್ ರಾಮ್ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಅವರ ವೋಟ್ಗಳನ್ನು ಬೇರೆಯವರು ಕಿತ್ತುಕೊಂಡಿದ್ದರಿಂದಲೇ ಈ ರೀತಿಯ ಪರಿಸ್ಥಿತಿ ಬಂತು. ಆಟದಲ್ಲಿ ಗೆದ್ದ ಆಸಿಯಾ, ಧನುಷ್, ಕಿರಣ್ ಶಾಸ್ತ್ರಿ ಹಾಗೂ ಕಾವ್ಯ ಅವರಿಗೆ ಒಂದು ಅಡ್ವಾಂಟೇಜ್ ಸಿಕ್ಕಿತ್ತು. ತಮ್ಮನ್ನ ತಾವು ಉಳಿಸಿಕೊಳ್ಳಲು ಉಳಿದ ಸದ್ಯಸ್ಯರಿಂದ ತಲಾ 50% ವೋಟ್ ಪಡೆದು ಸೇವ್ ಆಗಲು ಅವಕಾಶ ಕೊಟ್ಟರು. ತಾಂಡವ್ ರಾಮ್ಗೆ ಅನ್ಯಾಯವಾಗಿದೆ ಎಂದು ಗಗನ್ ಚಿನ್ನಪ್ಪ ಅವರು ಈ ವಿಷಯವನ್ನು ಓಪನ್ ಆಗಿಯೇ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ತಾಂಡವ್ ರಾಮ್ (thadav Ram) ಅವರು ಬಿಗ್ ಬಾಸ್ ಮನೆಯಿಂದ (Eliminate) ಹೊರ ನಡೆದಿದ್ದಾರೆ. ಅವರ ವೋಟ್ಗಳನ್ನು ಬೇರೆಯವರು ಕಿತ್ತುಕೊಂಡಿದ್ದರಿಂದಲೇ ಈ ರೀತಿಯ ಪರಿಸ್ಥಿತಿ ಬಂತು. ಆಟದಲ್ಲಿ ಗೆದ್ದ ಆಸಿಯಾ, ಧನುಷ್, ಕಿರಣ್ ಶಾಸ್ತ್ರಿ ಹಾಗೂ ಕಾವ್ಯ ಅವರಿಗೆ ಒಂದು ಅಡ್ವಾಂಟೇಜ್ ಸಿಕ್ಕಿತ್ತು. ತಮ್ಮನ್ನ ತಾವು ಉಳಿಸಿಕೊಳ್ಳಲು ಉಳಿದ ಸದ್ಯಸ್ಯರಿಂದ ತಲಾ 50% ವೋಟ್ ಪಡೆದು ಸೇವ್ ಆಗಲು ಅವಕಾಶ ಕೊಟ್ಟರು. ತಾಂಡವ್ ರಾಮ್ಗೆ ಅನ್ಯಾಯವಾಗಿದೆ ಎಂದು ಗಗನ್ ಚಿನ್ನಪ್ಪ (gagan chinnappa) ಅವರು ಈ ವಿಷಯವನ್ನು ಓಪನ್ ಆಗಿಯೇ ಹಂಚಿಕೊಂಡಿದ್ದಾರೆ.
ಕಿರಣ್ ಅವರು ಸೌಂದರ್ಯಾ ಅವರಿಂದ, ಕಾವ್ಯಾ ಅವರು ಜಗದೀಶ್ ಅವರಿಂದ, ಆಸಿಯಾ ಅವರು ಲಿಖಿತ್ ಅವರಿಂದ ಹಾಗೂ ಧನುಷ್ ಅವರು ತಾಂಡವ್ ರಾಮ್ ಅವರಿಂದ ವೋಟ್ ಕಸಿದುಕೊಂಡರು. ಈ ರೀತಿ ವೋಟ್ ಕಳೆದುಕೊಂಡ ನಾಲ್ವರಲ್ಲಿ ಮಾತ್ರ ಎಲಿಮಿನೇಷನ್ ನಡೆಯಲಿದೆ ಎಂದು ಘೋಷಿಸಿದರು. ಮೊದಲು ಕಿರಣ್, ನಂತರ ಜಗದೀಶ್ ಸೇವ್ ಆದರು. ಕೊನೆಯಲ್ಲಿ ಸೌಂದರ್ಯಾ ಹಾಗೂ ತಾಂಡವ್ ಪೈಕಿ ತಾಂಡವ್ ಎಲಿಮಿನೇಟ್ ಆದರು.
Gagan crying continuosly almost 1 hour how much genuine bond with Thandav it shows. 🫂
— Varun M S Varun (@VarunMS77) September 25, 2026
He deserves a lot because both are lived together with no expectation thats matter in freindship whoever won the cup no matter. 😊
I never seen in BB this type of emotional Bond📈#BBK13 pic.twitter.com/41O2YCZbeA
ಗಗನ್ ಚಿನ್ನಪ್ಪ ಅಂತೂ ತಮ್ಮ ಗೆಳೆಯ ನಾಮಿನೇಟ್ ಆಗಿದ್ದಾರೆ ಎಂಬ ಕ್ಷಣದಿಂದಲೂ ಕಣ್ಣೀರಿಡುತ್ತಿದ್ದರು. ಇದು ಅನ್‌ಫೇರ್ ಬಿಗ್ ಬಾಸ್, ಪ್ಲೀಸ್ ಹೀಗೆ ಮಾಡಬೇಡಿ ಬಿಗ್ ಬಾಸ್, ತುಂಬಾ ಒಳ್ಳೆ ವ್ಯಕ್ತಿ, ಯಾರಿಗೂ ಕೆಟ್ಟದ್ದನ್ನ ಬಯಸಿರಲಿಲ್ಲ ಬಿಗ್ ಬಾಸ್ ಎಂದು ಅತ್ತರು ಗಗನ್.
‘ಬಿಗ್ ಬಾಸ್ ಕನ್ನಡ ಸೀಸನ್ 13’ಅಲ್ಲಿ ಈ ವಾರ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ವೈಲ್ಡ್ ಕಾರ್ಡ್ ಮೂಲಕ ಬರೋದು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಇವರ ಜೊತೆ ತಾಂಡವ್ ರಾಮ್ ಕೂಡ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳ ಚರ್ಚೆಯ ಪ್ರಕಾರ ತಾಂಡವ್ ರಾಮ್ ಅವರು ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.