Bigg Boss Kannada 13: ಮಗಳೇ ಪ್ರಪಂಚ, ತಾಯಿ ಬಿಟ್ಟರೇ ಯಾರು ಇಲ್ಲ; ಜಗ್ಗಮಮ್ಮಿ ಕಣ್ಣೀರು
Bigg Boss Kannada 13: ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಗಾನವಿ ಗೌಡ ಅವರು ಯಶಸ್ ಮತ್ತು ಶಾಸ್ತ್ರಿಯನ್ನು ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ ಎಂದು ಗಾನವಿ ಅವರು ಮುಲಾಜಿಲ್ಲದೇ ಹೇಳಿದ್ದಾರೆ. ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಕೂಡ ಮನೆಯೊಳಗೆ ಎಂಟ್ರಿ ಕೊಟ್ಟರು. ಬಿಗ್ ಬಾಸ್ ನನಗೆ ಒಂದು ಇಮ್ಯುನಿಟಿ ಕೊಟ್ಟಿದ್ದಾರೆ, ಇಮ್ಯುನಿಟಿ ಪವರ್ ಇದೆ. ಫೋನ್ ಕೊಟ್ಟಿದ್ದಾರೆ. ರಾತ್ರಿ ಕೊಡ್ತೀನಿ ಮಾತಾಡಿ ಎಂದು ಪ್ರಶಾಂತ್ ಅವರು ಜಗ್ಗ ಮಮ್ಮಿಗೆ ಕಾಡಿಸಲು ಹೇಳಿದ್ದಾರೆ. ಆದರೆ ಇದೇ ವೇಳೆ ಜಗ್ಗ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಗೆ (Bigg Boss Kannada 13) ಕಾಲಿಡುತ್ತಿದ್ದಂತೆಯೇ ಗಾನವಿ ಗೌಡ ಅವರು ಯಶಸ್ ಮತ್ತು ಶಾಸ್ತ್ರಿಯನ್ನು ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ ಎಂದು ಗಾನವಿ ಅವರು ಮುಲಾಜಿಲ್ಲದೇ ಹೇಳಿದ್ದಾರೆ. ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಕೂಡ ಮನೆಯೊಳಗೆ ಎಂಟ್ರಿ ಕೊಟ್ಟರು. ಬಿಗ್ ಬಾಸ್ ನನಗೆ ಒಂದು ಇಮ್ಯುನಿಟಿ ಕೊಟ್ಟಿದ್ದಾರೆ, ಇಮ್ಯುನಿಟಿ ಪವರ್ ಇದೆ. ಫೋನ್ ಕೊಟ್ಟಿದ್ದಾರೆ. ರಾತ್ರಿ ಕೊಡ್ತೀನಿ ಮಾತಾಡಿ ಎಂದು ಪ್ರಶಾಂತ್ ಅವರು ಜಗ್ಗ ಮಮ್ಮಿಗೆ (Jagga Mummy) ಕಾಡಿಸಲು ಹೇಳಿದ್ದಾರೆ. ಆದರೆ ಇದೇ ವೇಳೆ ಜಗ್ಗ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ತಾಯಿ ಮತ್ತು ಮಗಳೇ ಪ್ರಪಂಚ
ಹೌದು, ಜಗ್ಗ ಅವರು ಮಗಳು ಮತ್ತು ತಾಯಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನ್ ತಾಯಿಗೆ ಆರೋಗ್ಯ ಸರಿಯಿಲ್ಲ. ಚಾಮುಂಡೇಶ್ವರಿ ಆಶೀರ್ವಾದಿಂದ ಅವರಿಗೆ ಏನು ಆಗಿಲ್ಲ ಅಂದ್ರೆ ಸಾಕು. ನಿಮ್ಮತ್ರ ಮನಸ್ಸು ಬಿಚ್ಚಿ ಹೇಳುತ್ತಿದ್ದೇನೆ. ನನಗೆ ತಾಯಿ ಮತ್ತು ಮಗಳೇ ಪ್ರಪಂಚ.
ತಾಯಿ ಇಲ್ಲದೇ ನಾನು ಬದುಕಲ್ಲ. ನನಗೆ ನಾಲ್ಕು ಜನ ಅಣ್ಣಂದಿರು. ನಾಲ್ಕು ಜನ ಅಣ್ಣಂದಿರು ನನಗೆ. ನಮ್ಮನ್ನ ನೋಡೋಕೆ ರೆಡಿ ಇರಲಿಲ್ಲ. ನನಗಂತೂ ಯಾಕೆ ಬದುಕಬೇಕು ಅನ್ಸುತ್ತಿತ್ತು. ಮದುವೆ ಆದ್ಮೇಲೆ ನನಗೆ ಮಗಳು ಹುಟ್ಟಿದಳು. 4ವರ್ಷ ನಾನು ಮತ್ತು ನನ್ನ ಹೆಂಡ್ತಿ ಚೆನ್ನಾಗಿದ್ದೀವಿ. ಆದರೇ ಮಾತು ಬಿಟ್ಟು, ತವರು ಮನೆಗೆ ಹೋದಳು. ಮಗಳನ್ನು ಸೇರಿಸಲಿಲ್ಲ.
ಇದನ್ನೂ ಓದಿ: Bigg Boss Kannada 13: 'ಇನ್ಮೇಲೆ ಖಂಡಿತ ಬಿಗ್ ಬಾಸ್ ನೋಡಲ್ಲ'; ಅವಿನಾಶ್ ನೇರ ಹೇಳಿಕೆ
ತಬ್ಬಲಿ ಆಗೋದಳು
ಅಜ್ಜಿ ಮನೆಯಲ್ಲಿತ್ತು ನನ್ನ ಮಗಳು. ಈಗ ನಾನು ಇಲ್ಲಿದ್ದೀನಿ. ನೋಡೋಕೆ ಆಗ್ತಿಲ್ಲ. ಅಮ್ಮ ಆಸ್ಪತ್ರೆಯಲ್ಲಿ, ಚಿಕ್ಕಮಗಳು ತಬ್ಬಲಿ ಆಗೋದಳು. ನನ್ನ ಪ್ರೀತಿನೂ ಇಲ್ಲ, ತಾಯಿ ಪ್ರೀತಿನೂ ಇಲ್ಲ, ಭಯ ಆಗ್ತಿದೆ ಎಂದು ಪ್ರಶಾಂತ್ ಜೊತೆ ಹೇಳಿಕೊಂಡ ಕಣ್ಣೀರಿಟ್ಟಿದ್ದಾರೆ.
ಆಗ ಪ್ರಶಾಂತ್ ಇದ್ದವರು ಸಮಾಧಾನ ಪಡಿಸಿ, ನಿಮ್ಮ ಜೊತೆ ನಾವಿದ್ದೇವೆ. ನಿಮಗೋಸ್ಕರ ನಾನು ನಿಲ್ತೀನಿ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 13: ಅಸಹ್ಯ ನೀನು, ತಂದು ಹಾಕಿ ತಮಾಷೆ ನೋಡೋ ವ್ಯಕ್ತಿತ್ವ ಎಂದು ಕಿರಣ್ ಮೇಲೆ ಗಾನವಿ ಗರಂ
‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಜಗ್ಗ ಮಮ್ಮಿ ಪಾತ್ರ ಮಾಡಿರುವ ಇವರ ಹೆಸರು ಜಗದೀಶ ಎಂ.ಬಿ. ಇವರ ಊರು ಮಂಡ್ಯ ಜಿಲ್ಲೆಯ ಶೂಟಿಂಗ್ ಮಹದೇವಪುರ.ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್ 3’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದವರು ಜಗದೀಶ್. ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ‘ಜಗ್ಗ ಮಮ್ಮಿ’ ಪಾತ್ರಕ್ಕೆ ಜಗದೀಶ್ ಜೀವ ತುಂಬಿದ್ದರು.