ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13 Elimination: ʻಬಿಗ್ ಬಾಸ್ʼ ಮನೆಯಿಂದ ‘ಮಹಾಕವಿ’ ಮಂಜ ಎಕ್ಸಿಟ್; ಆಪ್ತಸ್ನೇಹಿತ ಹೊರನಡೆದಿದ್ದಕ್ಕೆ ಗಾನವಿ ಕಣ್ಣೀರು!

BBK 13 Elimination: ಕಳೆದ ವಾರ ಬಿಗ್‌ ಬಾಸ್‌ ಶೋಗೆ ರೀ-ಎಂಟ್ರಿ ಕೊಟ್ಟಿದ್ದ ‘ಮಹಾಕವಿ’ ಮಂಜ ಮನೆಯಿಂದ ಹೊರನಡೆದಿದ್ದಾರೆ. ಅಸಲಿಗೆ ಮಂಜ ಸ್ಪರ್ಧಿಯಲ್ಲ, ಕೇವಲ ಒಂದು ವಾರದ ಅತಿಥಿಯಾಗಿ ಬಂದಿದ್ದರು ಎಂದು ಕಿಚ್ಚ ಸುದೀಪ್ ಎಂಬ ಮಾಹಿತಿಯನ್ನು

ʻಬಿಗ್ ಬಾಸ್ʼ ಮನೆಯಿಂದ ‘ಮಹಾಕವಿ’ ಮಂಜ ಎಕ್ಸಿಟ್; ಕಿಚ್ಚ ಕೊಟ್ರು ಟ್ವಿಸ್ಟ್!

-

Avinash GR
Avinash GR Nov 22, 2026 11:14 PM

ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಗೆ ರೀ-ಎಂಟ್ರಿ ಕೊಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ ‘ಮಹಾಕವಿ’ ಮಂಜ, ಇದೀಗ ಒಂದು ವಾರದ ಬಳಿಕ ಮನೆಯ ಮುಖ್ಯದ್ವಾರದ ಮೂಲಕ ಹೊರನಡೆದಿದ್ದಾರೆ. ಅಸಲಿಗೆ ಮಂಜ ಮನೆಯೊಳಗೆ ಸ್ಪರ್ಧಿಯಾಗಿ ಹೋಗಿರಲಿಲ್ಲ, ಬದಲಾಗಿ ಕೇವಲ ಒಂದು ವಾರದ ಮಟ್ಟಿಗೆ ಅತಿಥಿಯಾಗಿ ಆಗಮಿಸಿದ್ದರು ಎಂಬ ವಿಚಾರವನ್ನು ಕಿಚ್ಚ ಸುದೀಪ್ ಬಹಿರಂಗಪಡಿಸಿದ್ದಾರೆ. ಇಷ್ಟು ದಿನ ಮಂಜ ಮತ್ತೆ ಆಟವಾಡಲು ಬಂದಿದ್ದಾರೆ ಎಂದೇ ಭಾವಿಸಿದ್ದ ಮನೆಯ ಇತರ ಸ್ಪರ್ಧಿಗಳಿಗೆ ಸುದೀಪ್ ನೀಡಿದ ಈ ಟ್ವಿಸ್ಟ್ ದೊಡ್ಡ ಶಾಕ್ ನೀಡಿದೆ.

ತಿದ್ದಿಕೊಳ್ಳಲು ಇನ್ನೊಂದು ಅವಕಾಶ

‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಸಂಚಿಕೆಯಲ್ಲಿ ಮಂಜ ಅವರ ಮರುಪ್ರವೇಶದ ಹಿಂದಿನ ಕಾರಣವನ್ನು ಸುದೀಪ್ ಎಳೆಎಳೆಯಾಗಿ ಬಿಚ್ಚಿಟ್ಟರು. ಈ ಕುರಿತು ಮಾತನಾಡಿದ ಅವರು, "ಮನುಷ್ಯರಾದ ಮೇಲೆ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ, ಅದೇ ರೀತಿ ಮಂಜ ಕೂಡ ತಪ್ಪು ಮಾಡಿದ್ದ. ಆದರೆ ಆತ ವೇದಿಕೆ ಮೇಲೆ ಬಂದಾಗ ಆತನ ಕಣ್ಣಲ್ಲಿ ನಿಜವಾದ ಪಶ್ಚಾತ್ತಾಪವನ್ನು ನಾನು ಕಂಡೆ. ಬೇರೆ ಶೋಗಳಲ್ಲಿ ತಪ್ಪು ಮಾಡಿದ ಸ್ಪರ್ಧಿಗಳಿಗೆ ನೇರವಾಗಿ ರೆಡ್ ಕಾರ್ಡ್ ತೋರಿಸಿ ಹೊರಹಾಕುತ್ತಾರೆ. ಆದರೆ ಯಾವುದೇ ಸ್ಪರ್ಧಿಗೆ ರೆಡ್ ಕಾರ್ಡ್ ತೋರಿಸುವ ಇಚ್ಛೆ ನನಗಿಲ್ಲ, ಏಕೆಂದರೆ ಅದರಿಂದ ಆ ಸ್ಪರ್ಧಿಯ ಜೀವನವೇ ಹಾಳಾಗಿ ಹೋಗುತ್ತದೆ. ಹೀಗಾಗಿ ಅವನಿಗೆ ತಿದ್ದಿಕೊಳ್ಳಲು ಇನ್ನೊಂದು ಅವಕಾಶ ಕೊಡಬೇಕು ಅನಿಸಿತು" ಎಂದರು.

Kiccha Sudeep: ʻದೇವತೆʼ ಎನಿಸಿಕೊಂಡು 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ನಟಿ ಸಂಗೀತಾ ಭಟ್; ನಾಮಿನೇಟ್‌ ಆಗಿದ್ದವರು ನಿರಾಳ!

ಕೆಲವರಿಗೆ ಅಚ್ಚರಿ, ಕೆಲವರಿಗೆ ಸಮಾಧಾನ!

ವಾರಾಂತ್ಯದ ಎಲಿಮಿನೇಷನ್ ಪ್ರಕ್ರಿಯೆಯು ಮನೆಯವರಲ್ಲಿ ಸಾಕಷ್ಟು ಕುತೂಹಲ, ಆತಂಕ ಮೂಡಿಸಿತ್ತು. ನಾಮಿನೇಷನ್ ಪಟ್ಟಿಯಲ್ಲಿದ್ದವರ ಪೈಕಿ ಒಬ್ಬೊಬ್ಬರನ್ನೇ ಸೇಫ್ ಮಾಡುತ್ತಾ ಬಂದ ಸುದೀಪ್, ಅಂತಿಮವಾಗಿ ಜಗದೀಶ್ ಮತ್ತು ಮಂಜನನ್ನು ಬಾಟಮ್-2 ಹಂತಕ್ಕೆ ತಂದರು. ಈ ವೇಳೆ ಮನೆಯವರ ಎದೆಬಡಿತ ಹೆಚ್ಚಾಗಿತ್ತು. ಆಗ ಮಧ್ಯಪ್ರವೇಶಿಸಿದ ಸುದೀಪ್, ಮಂಜು ಈ ಮನೆಗೆ ಬಂದಿರುವುದು ಕೇವಲ ಅತಿಥಿಯಾಗಿ ಮಾತ್ರ, ಹಾಗಾಗಿ ಅವರು ಈಗ ಮನೆಯಿಂದ ಹೊರಬರುತ್ತಾರೆ ಮತ್ತು ಉಳಿದ ಸ್ಪರ್ಧಿಗಳೆಲ್ಲರೂ ಸೇಫ್ ಆಗಿದ್ದಾರೆ ಎಂದು ಘೋಷಿಸಿದರು. ಈ ನಿರ್ಧಾರವು ಮನೆಯ ಕೆಲವು ಸ್ಪರ್ಧಿಗಳಿಗೆ ಸಮಾಧಾನದ ನಿಟ್ಟುಸಿರು ತಂದರೆ, ಇನ್ನು ಕೆಲವರಿಗೆ ಅಚ್ಚರಿ ಉಂಟುಮಾಡಿತು.

ಬಿಕ್ಕಿ ಬಿಕ್ಕಿ ಅತ್ತ ಗಾನವಿ

ಮಂಜನ ಈ ದಿಢೀರ್ ನಿರ್ಗಮನ ಮನೆಯೊಳಗಿದ್ದ ಗಾನವಿ ಅವರಿಗೆ ತೀವ್ರ ಆಘಾತ ನೀಡಿದೆ. ಮನೆಗೆ ಬಂದ ಕೇವಲ ಒಂದೇ ವಾರದಲ್ಲಿ ಮಂಜ ಜೊತೆ ಗಾನವಿ ಸಿಕ್ಕಾಪಟ್ಟೆ ಆತ್ಮೀಯರಾಗಿ, ಭಾವನಾತ್ಮಕವಾಗಿ ಅಟ್ಯಾಚ್ ಆಗಿದ್ದರು. ಮಂಜ ಸ್ಪರ್ಧಿಯಲ್ಲ, ಅವರು ಈಗ ಮನೆಯಿಂದ ಹೊರಹೋಗುತ್ತಿದ್ದಾರೆ ಎಂಬ ವಿಚಾರ ಕೇಳುತ್ತಿದ್ದಂತೆಯೇ ಗಾನವಿ ತೀವ್ರ ಶಾಕ್‌ಗೆ ಒಳಗಾದರು. ಗೆಳೆಯ ಹೊರಗೆ ಹೋಗುವುದನ್ನು ಕಂಡು ದುಃಖ ತಡೆಯಲಾರದೆ ಗಾನವಿ ಬಿಕ್ಕಿ ಬಿಕ್ಕಿ ಅತ್ತರು.

ಅವಕಾಶ ಕೊಟ್ಟಿದ್ದು ನನ್ನ ವೈಯಕ್ತಿಕ ನಿರ್ಧಾರ

ಇನ್ನು, ಕಳೆದ ಬಾರಿ ಮಂಜ ಮನೆಯಿಂದ ಹೊರನಡೆದಾಗ ಅವರ ಬಿಗ್ ಬಾಸ್ ಜರ್ನಿಯ ವಿಟಿ ಪ್ಲೇ ಆಗಿರಲಿಲ್ಲ. ಹೀಗಾಗಿ ಮುಂದಿನ ಬಾರಿ ವೇದಿಕೆ ಮೇಲೆ ಮಂಜ ಅವರ ವಿಟಿ ಪ್ಲೇ ಮಾಡಿಸುವುದಾಗಿ ಸುದೀಪ್ ಮಾತುಕೊಟ್ಟಿದ್ದರು. ಅದರಂತೆ ಈ ಬಾರಿ ವೇದಿಕೆ ಮೇಲೆ ಮಂಜು ಅವರ ಬಿಗ್ ಬಾಸ್ ಮನೆಯ ಸುಂದರ ಜರ್ನಿಯ ವಿಡಿಯೋವನ್ನು ಪ್ರದರ್ಶಿಸಲಾಯಿತು.

ಬಳಿಕ ಮಾತನಾಡಿದ ಸುದೀಪ್, "ಎಲಿಮಿನೇಟ್ ಆಗುವ ಪ್ರತಿಯೊಬ್ಬ ಸ್ಪರ್ಧಿಗೂ ಒಂದು ಒಳ್ಳೆಯ ವಿಟಿ ಇರಬೇಕು ಮತ್ತು ಬಿಗ್ ಬಾಸ್ ಅವರಿಗೆ ಒಂದು ಸುಂದರ ಪಯಣವಾಗಿ ಕಾಣಿಸಬೇಕು ಎಂಬುದೇ ನನ್ನ ಆಸೆ. ಮಂಜನಿಗೆ ಇನ್ನೊಂದು ಅವಕಾಶ ಕೊಟ್ಟಿದ್ದು ನನ್ನ ವೈಯಕ್ತಿಕ ಆಯ್ಕೆಯಾಗಿತ್ತು. ಅಂದು ಮಂಜ ತಪ್ಪು ಮಾಡಿ ಮನೆಯಿಂದ ಹೊರಗೆ ಹೋಗಿದ್ದ, ಆದರೆ ಇಂದು ಸಂಪೂರ್ಣ ಬದಲಾಗಿ ಹೊರಗೆ ಬರುತ್ತಿದ್ದಾನೆ" ಎಂದು ಬೀಳ್ಕೊಟ್ಟರು.