ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಕಾಮಿಡಿ ಮಾಡ್ಕೊಂಡೇ ಗಿಲ್ಲಿ ಬಿಗ್‌ ಬಾಸ್‌ ಗೆದ್ದ...’: ಜಗ್ಗಾ ಮಮ್ಮಿ ಹೇಳಿಕೆಗೆ ಕೆರಳಿ ಕೆಂಡವಾದ ನೆಟ್ಟಿಗರು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಕ್ಲಾಸ್‌!

Bigg Boss kannada 13 Contestants: ʻಬಿಗ್‌ ಬಾಸ್‌ʼ ಮನೆಯಲ್ಲಿ ಜಗ್ಗಾ ಮಮ್ಮಿ ಅಲಿಯಾಸ್‌ ಜಗದೀಶ್‌ ಅವರು ಮಾತನಾಡುವಾಗ ನಾಲಿಗೆ ಹರಿಬಿಟ್ಟಿದ್ದಾರೆ. ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ ಬರೀ ಕಾಮಿಡಿ ಮಾಡ್ಕೊಂಡೇ ಬಿಗ್‌ ಬಾಸ್‌ ಗೆದ್ದರು ಎಂಬ ಹೇಳಿಕೆ ನೀಡಿ, ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗಿಲ್ಲಿ ಬಗ್ಗೆ ಕೇವಲವಾಗಿ ಮಾತನಾಡಿದ ಜಗ್ಗಾ ಮಮ್ಮಿ; ನೆಟ್ಟಿಗರು ಏನಂದ್ರು?

-

Avinash GR
Avinash GR Oct 6, 2026 6:03 PM

‘ಬಿಗ್‌ ಬಾಸ್ ಕನ್ನಡ’ ರಿಯಾಲಿಟಿ ಶೋ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ವಿನ್ನರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದವರು ನಟ ಗಿಲ್ಲಿ. ದೊಡ್ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿ, ತಮ್ಮ ನೈಜ ವ್ಯಕ್ತಿತ್ವದಿಂದಲೇ ದಾಖಲೆ ಮತಗಳನ್ನು ಪಡೆದು ಟ್ರೋಫಿ ಎತ್ತಿಹಿಡಿದ ಗಿಲ್ಲಿ ಕುರಿತಾಗಿ ಈಗ 13ನೇ ಸೀಸನ್‌ನ ಮನೆಯೊಳಗೆ ಅಪಸ್ವರ ಕೇಳಿಬಂದಿದೆ.

ಪ್ರಸ್ತುತ ನಡೆಯುತ್ತಿರುವ ಸೀಸನ್‌ನಲ್ಲಿ ಜಗ್ಗಾ ಮಮ್ಮಿ ನೀಡಿರುವ ಲಘು ಹೇಳಿಕೆಯೊಂದು ಹೊರಗಡೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಗಿಲ್ಲಿ ಅಭಿಮಾನಿಗಳು ಜಗದೀಶ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಗ್ಗಾ ಮಮ್ಮಿಯ ಅಸಡ್ಡೆ ಮಾತು

ದೊಡ್ಮನೆಯೊಳಗೆ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್, ಸಂಗೀತಾ ಭಟ್‌ ಹಾಗೂ ಜಗ್ಗಾ ಮಮ್ಮಿ ನಡುವೆ ಹಿಂದಿನ ಸೀಸನ್‌ಗಳ ವಿನ್ನರ್ಸ್ ಕುರಿತು ಸಂಭಾಷಣೆ ನಡೆಯುತ್ತಿತ್ತು. ಈ ವೇಳೆ ಆಸಿಯಾ, "ಹಿಂದಿನ ಸೀಸನ್‌ಗಳಲ್ಲಿ ಫೈನಲಿಸ್ಟ್ ಆಗಿರುವವರು ಅಥವಾ ಟ್ರೋಫಿ ಗೆದ್ದವರೆಲ್ಲರೂ ಕೇವಲ ಟಾಸ್ಕ್ ಆಡಿಯೇ ಗೆದ್ದಿದ್ದಾರೆ ಅಂತೇನೂ ಇಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಾತಿಗೆ ಮಧ್ಯಪ್ರವೇಶಿಸಿದ ಜಗ್ಗಾ ಮಮ್ಮಿ, "ಗಿಲ್ಲಿ ನಟ ಅಂತೂ ಬರೀ ಕಾಮಿಡಿ ಮಾಡಿಕೊಂಡೇ ಗೆದ್ದುಬಿಟ್ಟ" ಎಂದು ಲಘುವಾಗಿ ಕಾಮೆಂಟ್ ಮಾಡಿದ್ದರು. ಜಗ್ಗಾ ಅವರ ಈ ಅಸಡ್ಡೆಯ ಮಾತು ಪ್ರಸಾರವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.

ಗಿಲ್ಲಿ ಪರವಾಗಿ ಫ್ಯಾನ್ಸ್‌ ಟ್ವೀಟ್‌


‘ಬಿಗ್‌ ಬಾಸ್ ಕನ್ನಡ’ ರಿಯಾಲಿಟಿ ಶೋ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ವಿನ್ನರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದವರು ನಟ ಗಿಲ್ಲಿ. ದೊಡ್ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿ, ತಮ್ಮ ನೈಜ ವ್ಯಕ್ತಿತ್ವದಿಂದಲೇ ದಾಖಲೆ ಮತಗಳನ್ನು ಪಡೆದು ಟ್ರೋಫಿ ಎತ್ತಿಹಿಡಿದ ಗಿಲ್ಲಿ ಕುರಿತಾಗಿ ಈಗ 13ನೇ ಸೀಸನ್‌ನ ಮನೆಯೊಳಗೆ ಅಪಸ್ವರ ಕೇಳಿಬಂದಿದೆ. ಪ್ರಸ್ತುತ ನಡೆಯುತ್ತಿರುವ ಸೀಸನ್‌ನಲ್ಲಿ ಜಗ್ಗಾ ಮಮ್ಮಿ ನೀಡಿರುವ ಲಘು ಹೇಳಿಕೆಯೊಂದು ಹೊರಗಡೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಗಿಲ್ಲಿ ಅಭಿಮಾನಿಗಳು ಜಗದೀಶ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗ್ಗಾ ಮಮ್ಮಿಯ ಅಸಡ್ಡೆ ಮಾತು ದೊಡ್ಮನೆಯೊಳಗೆ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್, ಸಂಗೀತಾ ಭಟ್‌ ಹಾಗೂ ಜಗ್ಗಾ ಮಮ್ಮಿ ನಡುವೆ ಹಿಂದಿನ ಸೀಸನ್‌ಗಳ ವಿನ್ನರ್ಸ್ ಕುರಿತು ಸಂಭಾಷಣೆ ನಡೆಯುತ್ತಿತ್ತು. ಈ ವೇಳೆ ಆಸಿಯಾ, "ಹಿಂದಿನ ಸೀಸನ್‌ಗಳಲ್ಲಿ ಫೈನಲಿಸ್ಟ್ ಆಗಿರುವವರು ಅಥವಾ ಟ್ರೋಫಿ ಗೆದ್ದವರೆಲ್ಲರೂ ಕೇವಲ ಟಾಸ್ಕ್ ಆಡಿಯೇ ಗೆದ್ದಿದ್ದಾರೆ ಅಂತೇನೂ ಇಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಾತಿಗೆ ಮಧ್ಯಪ್ರವೇಶಿಸಿದ ಜಗ್ಗಾ ಮಮ್ಮಿ, "ಗಿಲ್ಲಿ ನಟ ಅಂತೂ ಬರೀ ಕಾಮಿಡಿ ಮಾಡಿಕೊಂಡೇ ಗೆದ್ದುಬಿಟ್ಟ" ಎಂದು ಲಘುವಾಗಿ ಕಾಮೆಂಟ್ ಮಾಡಿದ್ದರು. ಜಗ್ಗಾ ಅವರ ಈ ಅಸಡ್ಡೆಯ ಮಾತು ಪ್ರಸಾರವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಗಿಲ್ಲಿ ತಾಕತ್ತು ಯಾರಿಗೂ ಇಲ್ಲ ಜಗ್ಗಾ ಮಮ್ಮಿ ಅವರ ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿರುವ ನೆಟ್ಟಿಗರು, ಗಿಲ್ಲಿ ಆಟದ ಶೈಲಿ ಮತ್ತು ಅವರ ವ್ಯಕ್ತಿತ್ವವನ್ನು ನೆನಪಿಸಿ ಸೋಷಿಯಲ್ ಮೀಡಿಯಾದಲ್ಲಿ ಚಾಟಿ ಬೀಸಿದ್ದಾರೆ. "ಗಿಲ್ಲಿ ಆಗಲು ನಿಮ್ಮಿಂದ ಸಾಧ್ಯವಿಲ್ಲ. ಅವರು ನಿಯತ್ತು, ವ್ಯಕ್ತಿತ್ವ ಮತ್ತು ಎಂಟರ್‌ಟೈನ್‌ಮೆಂಟ್‌ ಮಾಡುವ ತಾಕತ್ ಈಗಿನ ಸೀಸನ್‌ನಲ್ಲಿ ಯಾರಿಗೂ ಇಲ್ಲ" ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವರು, "ಗಿಲ್ಲಿ ಕೇವಲ ಕಾಮಿಡಿ ಮಾತ್ರ ಮಾಡಲಿಲ್ಲ; ಮುಳ್ಳಿನ ಹಾದಿಯಲ್ಲಿ ನಡೆದು, ತನ್ನ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡ ಅಪ್ರತಿಮ ಕಲಾವಿದ. ಹಾಸ್ಯದಲ್ಲೇ ಬದುಕಿನ ಪಾಠ ಹೇಳಿದ ಅವರ ಗತ್ತು ನಿಮಗೇನು ಗೊತ್ತು? ಅವರ ಕಾಲ ಧೂಳಿಗೂ ನೀವು ಸಮವಿಲ್ಲ" ಎಂದು ತಿರುಗೇಟು ನೀಡಿದ್ದಾರೆ. ಜಗ್ಗಾ ಮಮ್ಮಿಗೆ ಕಟು ಶಬ್ದಗಳಲ್ಲಿ ಕ್ಲಾಸ್ ಜೊತೆಗೆ, "ಗಿಲ್ಲಿ ಬಿಗ್ ಬಾಸ್ ಮನೆಯ ನಿಯಮಗಳನ್ನು ಗೌರವಿಸಿ, ಟಾಸ್ಕ್‌ಗಳಲ್ಲಿ ಶಕ್ತಿಮೀರಿ ಪ್ರಯತ್ನಿಸಿ, ನೇರವಾಗಿ ಮುಖಾಮುಖಿ ಮಾತನಾಡುತ್ತಿದ್ದರೇ ಹೊರತು ಬೆನ್ನ ಹಿಂದೆ ಚಾಡಿ ಹೇಳುವ ಕೆಟ್ಟ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಮನೆಯೊಳಗೆ ಸದಾ ಪಾಸಿಟಿವ್ ವಾತಾವರಣ ನಿರ್ಮಿಸಿ ಸ್ನೇಹ–ಪ್ರೀತಿಯಿಂದ ಲಕ್ಷಾಂತರ ಜನರ ಮನಗೆದ್ದವರು" ಎಂದು ನೆಟ್ಟಿಗರು ಜಗ್ಗಾ ಮಮ್ಮಿಗೆ ಕಟು ಶಬ್ದಗಳಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ, ಗಿಲ್ಲಿ ನಟನ ಗೆಲುವನ್ನು ಕೇವಲ ‘ಕಾಮಿಡಿ’ಗೆ ಸೀಮಿತಗೊಳಿಸಿ ಮಾತನಾಡಿದ ಜಗ್ಗಾ ಮಮ್ಮಿ ನಡೆ ಈಗ ಬಿಗ್ ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಟ್ರೋಲ್ ಹಾಗೂ ಟೀಕೆಗಳ ಸುರಿಮಳೆಯೇ ಮುಂದುವರಿದಿದೆ.

ಗಿಲ್ಲಿ ತಾಕತ್ತು ಯಾರಿಗೂ ಇಲ್ಲ

ಜಗ್ಗಾ ಮಮ್ಮಿ ಅವರ ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿರುವ ನೆಟ್ಟಿಗರು, ಗಿಲ್ಲಿ ಆಟದ ಶೈಲಿ ಮತ್ತು ಅವರ ವ್ಯಕ್ತಿತ್ವವನ್ನು ನೆನಪಿಸಿ ಸೋಷಿಯಲ್ ಮೀಡಿಯಾದಲ್ಲಿ ಚಾಟಿ ಬೀಸಿದ್ದಾರೆ. "ಗಿಲ್ಲಿ ಆಗಲು ನಿಮ್ಮಿಂದ ಸಾಧ್ಯವಿಲ್ಲ. ಅವರು ನಿಯತ್ತು, ವ್ಯಕ್ತಿತ್ವ ಮತ್ತು ಎಂಟರ್‌ಟೈನ್‌ಮೆಂಟ್‌ ಮಾಡುವ ತಾಕತ್ ಈಗಿನ ಸೀಸನ್‌ನಲ್ಲಿ ಯಾರಿಗೂ ಇಲ್ಲ" ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವರು, "ಗಿಲ್ಲಿ ಕೇವಲ ಕಾಮಿಡಿ ಮಾತ್ರ ಮಾಡಲಿಲ್ಲ; ಮುಳ್ಳಿನ ಹಾದಿಯಲ್ಲಿ ನಡೆದು, ತನ್ನ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡ ಅಪ್ರತಿಮ ಕಲಾವಿದ. ಹಾಸ್ಯದಲ್ಲೇ ಬದುಕಿನ ಪಾಠ ಹೇಳಿದ ಅವರ ಗತ್ತು ನಿಮಗೇನು ಗೊತ್ತು? ಅವರ ಕಾಲ ಧೂಳಿಗೂ ನೀವು ಸಮವಿಲ್ಲ" ಎಂದು ತಿರುಗೇಟು ನೀಡಿದ್ದಾರೆ.

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ; ಪಳಾರ್‌ ಗಿಲ್ಲಿ ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

ಜಗ್ಗಾ ಮಮ್ಮಿಗೆ ಕಟು ಶಬ್ದಗಳಲ್ಲಿ ಕ್ಲಾಸ್

ಜೊತೆಗೆ, "ಗಿಲ್ಲಿ ಬಿಗ್ ಬಾಸ್ ಮನೆಯ ನಿಯಮಗಳನ್ನು ಗೌರವಿಸಿ, ಟಾಸ್ಕ್‌ಗಳಲ್ಲಿ ಶಕ್ತಿಮೀರಿ ಪ್ರಯತ್ನಿಸಿ, ನೇರವಾಗಿ ಮುಖಾಮುಖಿ ಮಾತನಾಡುತ್ತಿದ್ದರೇ ಹೊರತು ಬೆನ್ನ ಹಿಂದೆ ಚಾಡಿ ಹೇಳುವ ಕೆಟ್ಟ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಮನೆಯೊಳಗೆ ಸದಾ ಪಾಸಿಟಿವ್ ವಾತಾವರಣ ನಿರ್ಮಿಸಿ ಸ್ನೇಹ–ಪ್ರೀತಿಯಿಂದ ಲಕ್ಷಾಂತರ ಜನರ ಮನಗೆದ್ದವರು" ಎಂದು ನೆಟ್ಟಿಗರು ಜಗ್ಗಾ ಮಮ್ಮಿಗೆ ಕಟು ಶಬ್ದಗಳಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಒಟ್ಟಾರೆಯಾಗಿ, ಗಿಲ್ಲಿ ನಟನ ಗೆಲುವನ್ನು ಕೇವಲ ‘ಕಾಮಿಡಿ’ಗೆ ಸೀಮಿತಗೊಳಿಸಿ ಮಾತನಾಡಿದ ಜಗ್ಗಾ ಮಮ್ಮಿ ನಡೆ ಈಗ ಬಿಗ್ ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಟ್ರೋಲ್ ಹಾಗೂ ಟೀಕೆಗಳ ಸುರಿಮಳೆಯೇ ಮುಂದುವರಿದಿದೆ.