ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ; ಪಳಾರ್‌ ಗಿಲ್ಲಿ ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

Bigg Boss Kannada Season 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆಯಲ್ಲಿ ಗಿಲ್ಲಿ ನಟ ಸಂಚಲನ ಮೂಡಿಸುತ್ತಿದ್ದು, ಅವರ ಬಗ್ಗೆ ಬಿಗ್ ಬಾಸ್ ತಂಡವು ವಿಶಿಷ್ಟವಾಗಿ ಪಂಚ್ ಲೈನ್‌ಗಳನ್ನು ಹಂಚಿಕೊಂಡಿದೆ. ಗಿಲ್ಲಿಯನ್ನು "ನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ" ಎಂದು ವರ್ಣಿಸಿರುವ ತಂಡ, ಅವರ ಐದು ಪ್ರಮುಖ ಗುಣಗಳನ್ನು ಪಟ್ಟಿ ಮಾಡಿದೆ.

ಎದುರಾಳಿಗೆ ಚಮಕ್ ನೀಡೋ ಚಾಲಾಕಿ, ಮರುಭೂಮಿಯಲ್ಲೂ ಹೂ ಬೆಳೆಸೋ ಕಲೆಗಾರ ಗಿಲ್ಲಿ!

-

Avinash GR
Avinash GR Jan 18, 2026 4:17 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಕ್ರಿಯೆಟ್‌ ಮಾಡಿರುವ ಹವಾ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಬಹುಶಃ ಇದೇ ಮೊದಲ ಬಾರಿಗೆ ಸೀಸನ್‌ ಶುರುವಾಗಿ 50 ದಿನ ಪೂರೈಸುವುದರೊಳಗೆಯೇ ಗಿಲ್ಲಿಯೇ ವಿನ್ನರ್‌ ಎಂದು ಜನರು ಫಿಕ್ಸ್‌ ಆಗಿಬಿಟ್ಟಿದ್ದರು. ಅಷ್ಟೊಂದು ಕ್ರೇಜ್‌ ಹೆಚ್ಚಾಗಿತ್ತು. ಹತ್ತಾರು ಮಂದಿ ಗಿಲ್ಲಿಯ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೊಡ್ಡಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಗಿಲ್ಲಿ ನಟನ ಬಗ್ಗೆ ಬಿಗ್‌ ಬಾಸ್‌ ಟೀಮ್ ಐದು ಗುಣಗಳನ್ನು ಹೇಳಿದೆ.

ಗಿಲ್ಲಿ ನಟನ ಬಗ್ಗೆ ಬಿಗ್‌ ಬಾಸ್‌ ಹೇಳಿದ್ದೇನು?

ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ.. ಗಿಲ್ಲಿ ಗಮ್ಮತ್ತು.." ಎಂದೆಲ್ಲಾ ಬಿಗ್‌ ಬಾಸ್‌ ಹೇಳಿದ್ದಾರೆ. ಜೊತೆಗೆ ಗಿಲ್ಲಿ ಬಗ್ಗೆ ಐದು ಅಂಶಗಳನ್ನು ಪಟ್ಟಿ ಮಾಡಿದೆ. ಆ ಐದು ಪಾಯಿಂಟ್‌ಗಳಲ್ಲೇ 112 ದಿವಸ ಬಿಗ್‌ ಬಾಸ್‌ ಮನೆಯಲಿ ಗಿಲ್ಲಿ ನಟ ಯಾವ ರೀತಿ ಇದ್ದರು ಎಂಬುದಕ್ಕೆ ಕೈಗನ್ನಡಿ ಆಗಿದೆ.

Gilli Nata: ʻಪ್ಲೀಸ್..‌ ಗಿಲ್ಲಿಗೆ ಒಂದು ಬಾಚಣಿಗೆ ಕೊಡ್ರಿʼ; ಕೈಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ, ಅಬ್ಬಬ್ಬಾ! ಇಂಥ ಕ್ರೇಜ್‌ ಎಲ್ಲಾದರೂ ಉಂಟೇ?

  1. ಮರುಭೂಮಿಯಲ್ಲೂ ಹೂವು ಬೆಳೆಸುವ ಕಲೆಗಾರ
  2. ಎದುರಾಳಿಗೆ ಚಮಕ್‌ ನೀಡುವ ಚಾಲಾಕಿ
  3. ಫ್ರೆಂಡ್‌ಶಿಫ್‌ಗೋಸ್ಕರ್‌ ಏನು ಮಾಡಲಿಕ್ಕೂ ರೆಡಿ
  4. ನಿಜಾನೇ ಹೇಳಿದ್ರೂ ನಗ್‌ ನಗ್ತಾನೆ ಹೇಳೋದು
  5. ಮನೆ ಕೆಲಸ ಮೈಮೇಲೆ ಬಿದ್ರೆ ಎಸ್ಕೇಪ್‌

- ಹೀಗೆ ಗಿಲ್ಲಿ ಇಷ್ಟು ದಿವಸ ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿ ಇದ್ದರೂ ಎಂಬುದನ್ನು ಬಿಗ್‌ ಬಾಸ್‌ ಟೀಮ್‌ ಅನಾಲಿಸಿಸ್‌ ಮಾಡಿ, ಹಂಚಿಕೊಂಡಿದೆ. ಇದನ್ನು ನೋಡಿದವರಂತೂ ಹೌದು ಹೌದು, ಇದು ಸರಿಯಾಗಿದೆ ಎಂದು ಹೇಳಿದ್ದಾರೆ.

ಟ್ಯಾಟೂ ಅಭಿಮಾನಿಯನ್ನು ಕಂಡು ಗಿಲ್ಲಿ ಎಮೋಷನಲ್‌

ಕೆಲ ದಿನಗಳ ಹಿಂದೆ ಫ್ಯಾನ್‌ನ ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸಲಾಗಿತ್ತು. ಈ ವೇಳೆ ಒಬ್ಬ ಅಭಿಮಾನಿ ಕೈಮೇಲೆ ಗಿಲ್ಲಿ ನಟ ಅವರ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡು ಬಂದಿದ್ದರು. ಅದನ್ನು ಕಂಡಿದ್ದ ಗಿಲ್ಲಿ ಎಮೋಷನಲ್‌ ಆಗಿಬಿಟ್ಟಿದ್ದರು. ಪ್ರೀ-ಫಿನಾಲೆ ಎಪಿಸೋಡ್‌ನಲ್ಲಿ ಆ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

Gilli Nata: ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್; ಪಾರ್ಟಿ ಅರೇಂಜ್, ಹಲವರಿಂದ ಟೀಕೆ

"ಒಬ್ಬರು ನನ್ನ ಟ್ಯಾಟೂ ಹಾಕಿಸಿಕೊಂಡಿದ್ದರು, ಅದನ್ನು ಕಂಡು ನಾನು ಎಮೋಷನಲ್‌ ಆದೆ. ಒಂದು ಕ್ಷಣ ಅದು ನಿಜವೋ? ಅಥವಾ ಸುಳ್ಳೋ? ಒಂದು ಗೊತ್ತಾಗಲಿಲ್ಲ. ನಿಜವಾಗಲೂ ಬಿಗ್‌ ಬಾಸ್ ಶೋಗೆ ಧನ್ಯವಾದ ಹೇಳ್ತೀನಿ. ಯಾಕೆಂದರೆ, ನನ್ನ ಲೈಫ್‌ನಲ್ಲಿ ಮೊದಲ ಬಾರಿಗೆ ಯಾರೋ ಒಬ್ಬರು ನನ್ನ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅವರು ಯಾರೆಂದೇ ನನಗೆ ತಿಳಿದಿಲ್ಲ. ನನ್ನ ಕುಟುಂಬ ಅಥವಾ ನನ್ನ ಫ್ರೆಂಡ್ಸ್‌ ಆಗಿದ್ರೆ ಓಕೆ. ಆದರೆ, ಅವರು ಯಾರು ಅಂತಲೇ ಗೊತ್ತಿಲ್ಲ. ಆದರೂ ನನ್ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನು ಅವರನ್ನು ಜೀವನಪೂರ್ತಿ ನೆನಪು ಇಟ್ಕೋತಿನಿ. ನನಗೆ ಆ ಕ್ಷಣ ತುಂಬಾ ಖುಷಿ ನೀಡಿದೆ" ಅಂತ ಗಿಲ್ಲಿ ಹೇಳಿದ್ದಾರೆ.