Bigg Boss Kannada 13: ಮಂಜು-ಯಶಸ್ ಕಿರಿಕ್; ಮಹಾಕವಿಯ ಚುಚ್ಚುವ ಮಾತು ಶುರು
Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಶೋಗೆ ಮಾಡರ್ನ್ ಮಹಾಕವಿ ಮಂಜ (Mahakavi Manja) ಮರು ಪ್ರವೇಶ ಶೋನ ಕೌತುಕ ಹೆಚ್ಚಿಸಿದೆ. ಮಂಜು ಹಾಗೂ ಯಶಸ್ (Yashas) ನಡುವೆ ತೀವ್ರ ಸ್ವರೂಪದ ಕಿರಿಕ್ ಉಂಟಾಗಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಟಾಸ್ಕ್ ಒಂದರ ವೇಳೆ ನಾಯಕನ ಕಟ್ ಔಟ್ ಹಾಗೂ ಬಣ್ಣದ ವಿಚಾರವಾಗಿ ಇಬ್ಬರ ನಡುವೆ ಮಾತಿನ ವಾಗ್ವಾದ ಆರಂಭವಾಗಿದೆ. ಇದು ಕ್ರಮೇಣ ತಾರಕಕ್ಕೇರಿ ಪರಸ್ಪರ ಗರಂ ಆಗುವಂತೆ ಮಾಡಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ದೊಡ್ಡ ಮಟ್ಟದ ವಾದ-ವಿವಾದವೇ ನಡೆದಿದೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ ಸೀಸನ್-13’ರ ಶೋಗೆ ಮಾಡರ್ನ್ ಮಹಾಕವಿ ಮಂಜ (Mahakavi Manja) ಮರು ಪ್ರವೇಶ ಶೋನ ಕೌತುಕ ಹೆಚ್ಚಿಸಿದೆ. ಮಂಜು ಹಾಗೂ ಯಶಸ್ (Yashas) ನಡುವೆ ತೀವ್ರ ಸ್ವರೂಪದ ಕಿರಿಕ್ ಉಂಟಾಗಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಟಾಸ್ಕ್ ಒಂದರ ವೇಳೆ ನಾಯಕನ ಕಟ್ ಔಟ್ ಹಾಗೂ ಬಣ್ಣದ ವಿಚಾರವಾಗಿ ಇಬ್ಬರ ನಡುವೆ ಮಾತಿನ ವಾಗ್ವಾದ ಆರಂಭವಾಗಿದೆ. ಇದು ಕ್ರಮೇಣ ತಾರಕಕ್ಕೇರಿ ಪರಸ್ಪರ ಗರಂ ಆಗುವಂತೆ ಮಾಡಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ದೊಡ್ಡ ಮಟ್ಟದ ವಾದ-ವಿವಾದವೇ ನಡೆದಿದೆ.
ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್‌ನ ಯಾರು ಮರೆತಿಲ್ಲ. ಇದೇ ಟಾಸ್ಕ್‌ನಲ್ಲಿ ಮಂಜನ ಅವಾಚ್ಯ ಪದಗಳಿಂದ ಸ್ಪರ್ಧಿಗಳು ರೊಚ್ಚಿಗೆದ್ದಿದ್ದರು. ಯಶಸ್ ಕೃಷ್ಣ ಅವರಿಗೆ ‘ಕಾಮುಕ’, ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’ ಎಂಬ ಪದಗಳಿಂದ ನಿಂದಿಸಿದ್ದರು. ಆಟದ ಹುಮ್ಮಸ್ಸಿನಲ್ಲಿ ಶುರುವಾಗುವ ಈ ರೀತಿಯ ಕಿರಿಕ್ಗಳು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ: Bigg Boss Kannada 13: ಸೌಂದರ್ಯಾ-ಕಿರಣ್ ನಡುವೆ ನೇರ ವಾಗ್ದಾಳಿ; ಅಧ್ಯಕ್ಷ ಮಂಜು ಕಠಿಣ ನಿರ್ಧಾರ