Bigg Boss Kannada 13: Stupid ಆಗಿ ಮಾತನಾಡಬೇಡಿ; ಕಿರಣ್ ಶಾಸ್ತ್ರಿ ಹಾಸ್ಯಕ್ಕೆ 'ಪ್ರಥಮ' ವಾರ್ನಿಂಗ್!
Bigg Boss Kannada 13: ಮೊದಲ ದಿನವೇ ಜಗಳ ಉಂಟಾಗಿದೆ. ಕಾಮನರ್ ಮತ್ತು ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಮೊದಲ ದಿನದಂದಲೂ ಫ್ರಥಮಾ (Prathama) ಹಾಗೂ ಕಿರಣ್ ಶಾಸ್ತ್ರಿ (Kiran shastri) ಅವರಿಗೆ ಅಷ್ಟಕಷ್ಟೆ. ಈಗ ಮತ್ತೊಮ್ಮೆ ಜಗಳವಾಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ (Bigg Boss Kannada 13) ಶುರುವಾಗಿದೆ. ಮೊದಲ ದಿನವೇ ಜಗಳ ಉಂಟಾಗಿದೆ. ಕಾಮನರ್ ಮತ್ತು ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಮೊದಲ ದಿನದಂದಲೂ ಫ್ರಥಮಾ (Prathama) ಹಾಗೂ ಕಿರಣ್ ಶಾಸ್ತ್ರಿ (Kiran shastri) ಅವರಿಗೆ ಅಷ್ಟಕಷ್ಟೆ. ಈಗ ಮತ್ತೊಮ್ಮೆ ಜಗಳವಾಗಿದೆ.
ಸ್ಟುಪಿಡ್ ಆಗಿ ಮಾತನಾಡಬೇಡಿ
ಹೌದು. ತಮಾಷೆ ಮಾಡಲು ಹೋಗಿ ಕಿರಣ್ ಅವರು ಪ್ರಥಮಾ ಅವರಿಂದ ಸರಿಯಾಗಿ ಉಗಿಸಿಕೊಂಡಿದ್ದಾರೆ. ವೈಷ್ಣವಿ ಎಲ್ಲರೂ ತಮಾಷೆ ಮಾಡಿಕೊಳ್ಳುತ್ತಿದ್ದರು. ಅದೇ ಸಮಯಕ್ಕೆ ಬಂದ ಕಿರಣ್, ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ಅಂತ ಹೇಳಿದ್ದಾರೆ. ಅವಿನಾಶ್ ಹಾಗೂ ಪ್ರಥಮ ಅವರಿಗೆ ಟೀಸ್ ಮಾಡಿದಂತಿದೆ ಕಿರಣ್. ಇದು ಪ್ರಥಮ ಅವರಿಗೆ ಕೋಪ ಬರಿಸಿದೆ.
ಇದನ್ನೂ ಓದಿ: Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್ ಟ್ವಿಸ್ಟ್
ಸ್ಟುಪಿಡ್ ಆಗಿ ಮಾತನಾಡಬೇಡಿ, ಅವಿನಾಶ್‌ಗೂ ಮದುವೆ ಆಗಿದೆ. ನನಗೂ ಮದುವೆ ಆಗಿದೆ. ನಮ್ಮ ಪಾರ್ಟನರ್ಸ್ ಅಲ್ಲಿ ಹೊರಗಡೆ ನೋಡುತ್ತಿದ್ದಾರೆ. ಈ ಥರ ಕಮೆಂಟ್ಗಳನ್ನು ಮಾಡಬಾರದು. ನಿಮ್ಮ expression ಗೊತ್ತಾಗಿದೆ ಎಂದು ಕಿರಣ್ ಅವರನ್ನು ಬೆಂಡೆತ್ತಿದ್ದಾರೆ.
ಇದೀಗ ಪ್ರಥಮ ಅವರ ನಡೆಗೆ ನೆಟ್ಟಿಗರು ಅಶ್ವಿನಿ 2.0 ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೂ ಮುಂಚೆಯೂ ಕಿರಣ್ ಅವರು ಭವಿಷ್ಯ ಹೇಳುತ್ತೀನಿ ಅಂತ ಆರಂಭದಲ್ಲೇ ಕಿರಿಕ್ ಮಾಡಿಕೊಂಡಿದ್ದರು.
ಪ್ರಥಮಾ ಅವರಿಗೆ ಆಂಟಿ ಎಂದು ಕರೆದರು. ಇದಕ್ಕೆ ಪ್ರಥಮಾ ಅವರು ಗರಂ ಆದರು. ಮರ್ಯಾದೆಯಿಂದ ಮಾತನಾಡಿಸು ಎಂದು ಗದರಿದರು. ಈ ವೇಳೆ ಕಿರಣ್ ಕ್ಷಮಾಪಣೆಯನ್ನು ಕೇಳುತ್ತಾರೆ. ನಂತರ ಚರ್ಚೆಗಳು ನಡೆಯುತ್ತಿರುವಾಗ ಪ್ರಥಮಾ ಅವರು ನಾನು ಒಂಟಿ ಸಲಗ ಎಂದು ಹೇಳುತ್ತಾರೆ. ಈ ವೇಳೆ ನೀವು ನೀಡುವುದಕ್ಕೂ ಅದೇ ರೀತಿ ಕಾಣುತ್ತಿದ್ದೀರಿ ಎಂದು ಹೇಳುತ್ತಾರೆ.
ಇದನ್ನೂ ಓದಿ: Bigg Boss Kannada 13: ಹುಚ್ಚು ಅನ್ನೋಕೆ ನೀವ್ಯಾರು? ಕಿರಣ್ ಶಾಸ್ತ್ರಿಯನ್ನ ತರಾಟೆಗೆ ತೆಗೆದುಕೊಂಡ ವೈಷ್ಣವಿ
ಇದಕ್ಕೆ ಮತ್ತೆ ಸಿಟ್ಟಾದ ಪ್ರಥಮಾ ಅವರು ನನ್ನನ್ನು ಆನೆ ಅಂತ ಕರೆದು ಬಾಡಿ ಶೇಮಿಂಗ್ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅವಿನಾಶ್ ಕಿರಣ್ ಶಾಸ್ತ್ರಿಗೆ ಬಂದಾಕ್ಷಣ ಜಗಳ ಮಾಡಿಕೊಳ್ಳಬೇಡ ಸುಮ್ಮನಿರು ಎಂದು ಹೇಳುತ್ತಾರೆ. ಇದೀಗ ಮತ್ತೆ ಕಿರಣ್ ಹಾಗೂ ಪ್ರಥಮ ನಡುವೆ ಕಿರಿಕ್ ಆಗಿದೆ.