ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!

Bigg Boss Kannada 13: ಮಂಜನ ಕಿರಿಕಿರಿ ಸೌಂದರ್ಯಗೆ ತಲೆನೋವಾಗ್ತಿದೆ. ಸೌಂದರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನಗೆ ಆಗ್ತಿಲ್ಲ. ತುಂಬಾ ಕಿರಿ ಕಿರಿ ಆಗ್ತಿದೆ. ಅವತ್ತಿನಿಂದ ನಾನು ಸುಮ್ಮನೆ ಇರಿ ಅಂತ ಮನವಿ ಕೂಡ ಮಾಡಿಕೊಂಡೆ. ಆದರೂ ಅವರು ಸುಮ್ಮನಾಗಿಲ್ಲ. ನಾನು ವಾಶ್‌ ರೂಮ್‌ ಹೋಗಿ ಮಲಗ್ತೀನಿ ಎಂದು ಗೋಳೋ ಅಂತ ಕಣ್ಣೀರಿಟ್ಟಿದ್ದಾರೆ.

ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 10, 2026 6:39 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಸೌಂದರ್ಯ ಶೆಟ್ಟಿ (Sondarya Shetty) ರಿಯಲ್‌ ಆಟ ಶುರು ಮಾಡಿದ್ದಾರೆ. ಈಗಾಗಲೇ ಆಸಿಯಾಗೆ ಸಖತ್‌ ಇಮಿಟೇಟ್‌ ಮಾಡಿ ಈಗ ಮಂಜನಿಂದ ಆಗ್ತಿಲ್ಲ ಅಂತ ಗೋಗೆರೆದಿದ್ದಾರೆ. ‘ಬಿಗ್‌ ಬಾಸ್‌ ಸೀಸನ್‌ 13’ ಸ್ಪರ್ಧಿ ಮಾಡ್ರನ್‌ ಮಹಾಕವಿ ಮಂಜು (Mahakavi Manja), ಬಿಗ್‌ ಬಾಸ್‌ ಮನೆಯ ಸದಸ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮ್ಮನ್ನೆಲ್ಲಾ ಮನೆಗೆ ಕಳಿಸಿನೇ ನಾನು ಹೋಗೋದು ಅಂತ ತೋಡೆ ತಟ್ಟಿ ಸವಾಲ್‌ ಹಾಕಿದ್ದಾರೆ. ಆದರೀಗ ಒಂದು ಸಣ್ಣ ಕಿರಿಕ್‌ ಕೂಡ ಆಗಿದೆ.

ಕಣ್ಣೀರಿಟ್ಟ ಸೌಂದರ್ಯ

ಹೌದು ಮಂಜನ ಕಿರಿಕಿರಿ ಸೌಂದರ್ಯಗೆ ತಲೆನೋವಾಗ್ತಿದೆ. ಸೌಂದರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನಗೆ ಆಗ್ತಿಲ್ಲ. ತುಂಬಾ ಕಿರಿ ಕಿರಿ ಆಗ್ತಿದೆ. ಅವತ್ತಿನಿಂದ ನಾನು ಸುಮ್ಮನೆ ಇರಿ ಅಂತ ಮನವಿ ಕೂಡ ಮಾಡಿಕೊಂಡೆ. ಆದರೂ ಅವರು ಸುಮ್ಮನಾಗಿಲ್ಲ. ನಾನು ವಾಶ್‌ ರೂಮ್‌ ಹೋಗಿ ಮಲಗ್ತೀನಿ ಎಂದು ಗೋಳೋ ಅಂತ ಕಣ್ಣೀರಿಟ್ಟಿದ್ದಾರೆ. ಮಂಜ ಏನು ಹೇಳಿದ್ರು ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ಸ್ಪರ್ಧಿ ಮಾಡರ್ನ್‌ ಮಹಾಕವಿ ಮಂಜ ಸಿಡಿದೆದ್ದಿದ್ದಾರೆ. ಸಹ-ಸ್ಪರ್ಧಿಗಳ ಪಕ್ಷಪಾತ ಮತ್ತು ಪಿತೂರಿಗಳನ್ನು ನೇರವಾಗಿ ಖಂಡಿಸಿದ ಅವರು, ಎದುರಾಳಿಗಳು ಚಪ್ಪಾಳೆ ತಟ್ಟಲಷ್ಟೇ ಲಾಯಕ್ಕು ಎಂದಿದ್ದಾರೆ. ಎಲ್ಲರನ್ನೂ ಹೊರದಬ್ಬಿ ಟ್ರೋಫಿ ಗೆಲ್ಲುವುದಾಗಿ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

ನಾಮಿನೇಷನ್ ವೇಳೆ ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಬಹಿರಂಗವಾಗಿಯೇ ಸಿಡಿದೆದ್ದ ಮಂಜ, "ಇಲ್ಲಿ ಪ್ರತಿಯೊಂದನ್ನೂ ಟಾರ್ಗೆಟ್ ಮಾಡಲಾಗ್ತಿದೆ. ಮನೆಯೊಳಗೆ ಸ್ಪಷ್ಟವಾಗಿ ಪಾರ್ಷಿಯಾಲಿಟಿ ನಡೀತಾ ಇದೆ. ಏನ್ ಮಾತಾಡ್ತೀರಾ ನೀವು? ಅಷ್ಟೇ ಅಲ್ಲ, ಅಲ್ಲಿ ನೀವು ಹಿಂಬದಿಯಲ್ಲಿ ಮಾತಾಡಿಕೊಳ್ಳುತ್ತಿರುವುದನ್ನೆಲ್ಲ ನಾವು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇವೆ. ಇಂಥವರು ಈ ಮನೆಯಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ, ಯೋಗ್ಯರೇ ಅಲ್ಲ" ಎಂದು ಉಳಿದ ಸ್ಪರ್ಧಿಗಳ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Bigg Boss Kannada 13: ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ!

ಇಂದಿನ ಸಂಚಿಕೆಯ ಟಾಸ್ಕ್ ವೇಳೆ ಸದಸ್ಯರು ಪ್ರದರ್ಶಿಸಿದ ಪಕ್ಷಪಾತದ ವಿರುದ್ಧ ಮಂಜುನಾಥ್ ಎತ್ತಿದ ದನಿ ಹಾಗೂ ಅದಕ್ಕೆ ಪ್ರತಿಯಾಗಿ ಇಡೀ ಮನೆಯ ಸದಸ್ಯರ ನಡುವೆ ನಡೆದ ಈ ಭಾರೀ ಮುಖಾಮುಖಿ, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಬಿಗ್‌ ಬಾಸ್ ಮನೆಯ ಈ ರಣರಂಗದ ಕ್ಷಣಗಳು ಇಂದಿನ ಸಂಚಿಕೆಗೆ ಭರ್ಜರಿ ಮನರಂಜನೆಯ ಕಿಚ್ಚು ಹಚ್ಚಿವೆ.