Bigg Boss Kannada 13: ಈ ವಾರ ಇವರಿಗೆ ಕಿಚ್ಚನ ಚಪ್ಪಾಳೆ ಆದ್ರೆ, ಈ ಸೀಸನ್ ವಿನ್ನರ್ ಯಾರು? ವೀಕ್ಷಕರು ಹೇಳೋದೇನು?
Bigg Boss Kannada 13: ಕಳೆದ ವಾರ ಸೌಂದರ್ಯಾ (Soundarya shetty) ಹಾಗೂ ತಾಂಡವ್ (Thandav ram) ಅವರು ಗಮನ ಸೆಳೆದಿದ್ದರು. ಈ ವಾರ ಪ್ರಶಾಂತ್ ಕೂಡ ಭರಪೂರ ಮನರಂಜನೆ ಕೊಟ್ಟಿದ್ದಾರೆ. ಆರಂಭದ ದಿನಗಳಲ್ಲಿ ತಕ್ಕಮಟ್ಟಿಗೆ ಸೈಲೆಂಟ್ ಆಗಿದ್ದ ತಾಂಡವ್ ರಾಮ್, ಈಗ ಅಬ್ಬರಿಸುತ್ತಿದ್ದಾರೆ. , ಈ ಬಾರಿ ʻಬಿಗ್ ಬಾಸ್ʼ ಕಪ್ ಗೆಲ್ಲೋದು ತಾಂಡವ್ ರಾಮ್ ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ ಪ್ರಶಾಂತ್ ಕೂಡ (Prashanth) ಈ ವಾರ ಅವರು ಭರಪೂರ ಮನರಂಜನೆ ನೀಡಿದ್ದು, ಕಿಚ್ಚನ ಚಪ್ಪಾಳೆಗೆ (kichchana chappale) ಅವರು ಅರ್ಹರು ಎನ್ನುವ ಮಾತು ಕೇಳಿ ಬಂದಿದೆ.
ಬಿಗ್ ಬಾಸ್ ಕನ್ನಡ -
ಕಳೆದ ವಾರ ಸೌಂದರ್ಯಾ (Soundarya shetty) ಹಾಗೂ ತಾಂಡವ್ (Thandav ram) ಅವರು ಗಮನ ಸೆಳೆದಿದ್ದರು. ಈ ವಾರ ಪ್ರಶಾಂತ್ ಕೂಡ ಭರಪೂರ ಮನರಂಜನೆ ಕೊಟ್ಟಿದ್ದಾರೆ. ಆರಂಭದ ದಿನಗಳಲ್ಲಿ ತಕ್ಕಮಟ್ಟಿಗೆ ಸೈಲೆಂಟ್ ಆಗಿದ್ದ ತಾಂಡವ್ ರಾಮ್, ಈಗ ಅಬ್ಬರಿಸುತ್ತಿದ್ದಾರೆ. , ಈ ಬಾರಿ ʻಬಿಗ್ ಬಾಸ್ʼ ಕಪ್ ಗೆಲ್ಲೋದು ತಾಂಡವ್ ರಾಮ್ ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ ಪ್ರಶಾಂತ್ ಕೂಡ (Prashanth) ಈ ವಾರ ಅವರು ಭರಪೂರ ಮನರಂಜನೆ ನೀಡಿದ್ದು, ಕಿಚ್ಚನ ಚಪ್ಪಾಳೆಗೆ (kichchana chappale) ಅವರು ಅರ್ಹರು ಎನ್ನುವ ಮಾತು ಕೇಳಿ ಬಂದಿದೆ.
ಟ್ರೋಫಿ ಗೆಲ್ಲುವ ಸ್ಪರ್ಧಿ ಪಕ್ಕಾ
ತಾಂಡವ್ ಪ್ರತಿಯೊಂದು ಟಾಸ್ಕ್‌ನಲ್ಲೂ ನೀಡುತ್ತಿರುವ ಪರ್ಫಾರ್ಮೆನ್ಸ್, ಮನರಂಜನೆಯ ವಿಷಯದಲ್ಲೂ ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನ ಸಾಬೀತುಪಡಿಸುತ್ತಿದ್ದಾರೆ. ಆಲ್-ರೌಂಡರ್ ಪ್ರದರ್ಶನ ನೀಡುತ್ತಿರುವ ತಾಂಡವ್, ಮನೆಯ ಸದಸ್ಯರಿಗೂ ಮತ್ತು ಪ್ರೇಕ್ಷಕರಿಗೂ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ.ಈ ಬಾರಿಯ ʻಬಿಗ್ ಬಾಸ್ ಕನ್ನಡ 13ʼರ ಟ್ರೋಫಿ ಗೆಲ್ಲುವ ಸ್ಪರ್ಧಿ ಪಕ್ಕಾ ತಾಂಡವ್ ಅವರೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು.
ಕಳೆದ ವಾರ ಸೌಂದರ್ಯಾ ಹಾಗೂ ತಾಂಡವ್ ಅವರು ಗಮನ ಸೆಳೆದಿದ್ದರು. ಈ ವಾರ ಪ್ರಶಾಂತ್ ಕೂಡ ಭರಪೂರ ಮನರಂಜನೆ ಕೊಟ್ಟಿದ್ದಾರೆ. ತಾಂಡವ್ ರಾಮ್ ಅವರು ಸದಾ ಗಗನ್ ಚಿನ್ನಪ್ಪ ಮನ ಒಲಿಸಿರುವುದರಲ್ಲೇ ಬ್ಯುಸಿ ಇರುತ್ತಿದ್ದರು. ಆದರೆ, ಈಗ ಅವರು ಉತ್ತಮವಾಗಿ ಆಡಿ ಮನರಂಜನೆ ನೀಡುತ್ತಿದ್ದಾರೆ.
2nd week straight blockbuster for Thandav Ram. Will not be surprised if he gets one more KC for his performance role. Prashanth on the other hand gave a maximum blockbuster entertainment through his character which he will definitely get KC for his performance. #BBK13 https://t.co/51Pu6avqgG
— Pawan (@Pawan23811455) October 29, 2026
ಇದೀಗ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ, ತಾಂಡವ್ ಹಾಗೂ ಜಗ್ಗ ನಡುವೆ ಹಣಾಹಣಿ ನಡೆದಿದೆ.
ತಾವಿರುವ ಮನೆಯ ಡೈಸ್ ಉರುಳಿಸುತ್ತಾ, ತಮಗೆ ಮೀಸಲಿರುವ ರಿಂಗ್‌ವನ್ನು ಬಲೆಗೆ ಕಟ್ಟಿಕೊಂಡು ಸಂಗ್ರಹಿಸಬೇಕು. ರಿಂಗ್‌ಗಳನ್ನು ಕೊಕ್ಕೆಯಲ್ಲಿ ಸಿಕ್ಕಿಕೊಳ್ಳುವಂತೆ ಎಸೆಯಬೇಕು. ಅತಿ ಹೆಚ್ಚು ರಿಂಗ್ ಕೊಕ್ಕೆಯಲ್ಲಿ ಯಾರು ಸಿಕ್ಕಿಸುತ್ತಾರೋ ಅವರೇ ವಿನ್. ಇಂದಿನ ಸಂಚಿಕೆಯಲ್ಲಿ ಯಾರು ವಿನ್ ಆಗಲಿದ್ದಾರೆ ಎಂದು ತಿಳಿಯಲಿದೆ.