ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸೌಂದರ್ಯಾಗೆ ಉರಿಸಿದ ಆಸಿಯಾ; ಮನೆಯಲ್ಲಿ ಮೈತ್ರಿ ಧಗ ಧಗ!

Bigg Boss Kannada 13:‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆಟ ಮುಂದುವರಿದಂತೆ ಸ್ಪರ್ಧಿಗಳ ನಡುವಿನ ಸ್ನೇಹ, ನಂಬಿಕೆ ಮತ್ತು ಸಂಬಂಧಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಈ ವಾರ ಮನೆಯೊಳಗೆ ರಾಜಕೀಯದ ಆಟ ಜೋರಾಗಿದ್ದು, ಸ್ಪರ್ಧಿಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದೆ. ಇದರ ನಡುವೆ ಇದುವರೆಗೆ ಆತ್ಮೀಯ ಸ್ನೇಹಿತರಂತೆ ಕಾಣಿಸಿಕೊಂಡಿದ್ದ ಆಸಿಯಾ (Asia) ಫಿರ್ದೋಸ್ ಮತ್ತು ಯಶಸ್ (Yashas) ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ವೀಕ್ಷಕರ ಗಮನ ಸೆಳೆದಿದೆ.

ಸೌಂದರ್ಯಾಗೆ ಉರಿಸಿದ ಆಸಿಯಾ; ಮನೆಯಲ್ಲಿ ಮೈತ್ರಿ ಧಗ ಧಗ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 13, 2026 8:44 AM

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆಟ ಮುಂದುವರಿದಂತೆ ಸ್ಪರ್ಧಿಗಳ ನಡುವಿನ ಸ್ನೇಹ, ನಂಬಿಕೆ ಮತ್ತು ಸಂಬಂಧಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಈ ವಾರ ಮನೆಯೊಳಗೆ ರಾಜಕೀಯದ ಆಟ ಜೋರಾಗಿದ್ದು, ಸ್ಪರ್ಧಿಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದೆ. ಇದರ ನಡುವೆ ಇದುವರೆಗೆ ಆತ್ಮೀಯ ಸ್ನೇಹಿತರಂತೆ ಕಾಣಿಸಿಕೊಂಡಿದ್ದ ಆಸಿಯಾ (Asia) ಫಿರ್ದೋಸ್ ಮತ್ತು ಯಶಸ್ (Yashas) ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ವೀಕ್ಷಕರ ಗಮನ ಸೆಳೆದಿದೆ.

ಬಿಗ್ ಬಾಸ್ ಮನೆಯಲ್ಲಿ ರಾಜಕೀಯದ ಆಟ!

ಈ ವಾರ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ‘ಬಿಗ್ ಬಾಸ್ ಪರಿಷತ್’ ಎಂಬ ವಿಶೇಷ ಚಟುವಟಿಕೆಯನ್ನು ನೀಡಲಾಗಿದೆ. ಈ ಟಾಸ್ಕ್ ಮೂಲಕ ಮನೆಯ ವಾತಾವರಣವೇ ರಾಜಕೀಯ ಅಖಾಡದಂತಾಗಿದೆ. ಸ್ಪರ್ಧಿಗಳು ತಮ್ಮ ತಂಡದ ಪರವಾಗಿ ವಾದ ಮಂಡಿಸುವುದರ ಜೊತೆಗೆ ಎದುರಾಳಿ ತಂಡದವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಆಟದ ಲಾಭ-ನಷ್ಟಗಳನ್ನು ಲೆಕ್ಕ ಹಾಕುತ್ತಾ ತಂತ್ರಗಾರಿಕೆಗೆ ಮುಂದಾಗಿದ್ದಾರೆ.

ಈ ಚಟುವಟಿಕೆಯ ನಡುವೆಯೇ ಆಸಿಯಾ ಫಿರ್ದೋಸ್ ಅವರ ನಿರ್ಧಾರ ಇದೀಗ ಮನೆಯೊಳಗೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Bigg Boss Kannada 13: ಮಂಜ -ಯಶಸ್‌ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!

ಎದುರಾಳಿ ತಂಡದ ಜೊತೆ ಆಸಿಯಾ ಒಪ್ಪಂದ?

ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ಎದುರಾಳಿ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಆಸಿಯಾ ತಮ್ಮ ತಂಡದಿಂದ ಹೊರಬಂದು ಮಂಜು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಸಿಯಾ ಅವರ ಈ ನಡೆ ಇದೀಗ ಮನೆಯೊಳಗೆ ಚರ್ಚೆಗೆ ಗ್ರಾಸವಾಗಿದೆ.

ಆಸಿಯಾ ವೈಯಕ್ತಿಕ ಲಾಭಕ್ಕಾಗಿ ತಂಡವನ್ನು ಬಿಟ್ಟರೇ? ಅಥವಾ ಆಟದ ತಂತ್ರದ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡರೇ? ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿವೆ.

ಆಸಿಯಾ ವಿರುದ್ಧ ಸೌಂದರ್ಯಾ ಗರಂ!

ಆಸಿಯಾ ಅವರ ನಿರ್ಧಾರದಿಂದ ಸಿಟ್ಟಾಗಿರುವ ಸೌಂದರ್ಯಾ, ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ಒಗ್ಗಟ್ಟಿಗೆ ಧಕ್ಕೆ ತರುವ ರೀತಿಯಲ್ಲಿ ಆಸಿಯಾ ನಡೆದುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ‘ಬಿಗ್ ಬಾಸ್ ಪರಿಷತ್’ ಟಾಸ್ಕ್ ಮನೆಯೊಳಗಿನ ಸ್ನೇಹ ಮತ್ತು ನಂಬಿಕೆಯ ಪರೀಕ್ಷೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: Kajal Aggarwal: ಕ್ರೇನ್ ದುರಂತದಲ್ಲಿ ಕಾಜಲ್ ಕೂದಲೆಳೆ ಅಂತರದಲ್ಲಿ ಪಾರು! ಏನಿದು ಘಟನೆ?

ಆಸಿಯಾ ಅವರ ನಿರ್ಧಾರಕ್ಕೆ ಮನೆಯ ಇತರ ಸ್ಪರ್ಧಿಗಳು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ? ಸೌಂದರ್ಯಾ ಮತ್ತು ಆಸಿಯಾ ನಡುವಿನ ಜಗಳ ಯಾವ ಹಂತಕ್ಕೆ ತಲುಪಲಿದೆ? ಯಶಸ್ ಯಾರ ಪರ ನಿಲ್ಲಲಿದ್ದಾರೆ? ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.