ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಿಗ್‌ ಬಾಸ್‌ ಮನೆಯ ಹಾವು ಗಾನವಿ! ಸೌಂದರ್ಯ ಶೆಟ್ಟಿ ವಿಡಿಯೋ ಭರ್ಜರಿ ವೈರಲ್‌

Bigg Boss Kannada 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಮನರಂಜನೆಯ ಜೊತೆಗೆ ವಿವಾದಗಳೂ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಪರ್ಧಿ ಸೌಂದರ್ಯ ಶೆಟ್ಟಿ ಅವರ ಪಂಚಿಂಗ್‌ ಡೈಲಾಗ್‌ಗಳು, ಕೌಂಟರ್‌ಗಳು ಹಾಗೂ ಸಹ ಸ್ಪರ್ಧಿಗಳನ್ನು ಕೆಣಕುವ ವಿಭಿನ್ನ ಶೈಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಟಾಸ್ಕ್‌ ವೇಳೆ ಗಾಯಗೊಂಡ ಸೌಂದರ್ಯ ಶೆಟ್ಟಿ (Soundarya shetty) ಅವರು ಬಿಗ್‌ ಬಾಸ್‌ ಮನೆಯ ವೈದ್ಯರ ಬಳಿ ಮಾಡಿದ ಡ್ರಾಮಾ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಬಿಗ್‌ ಬಾಸ್‌ ಮನೆಯ ಹಾವು ಗಾನವಿ! ಸೌಂದರ್ಯ ಶೆಟ್ಟಿ ವಿಡಿಯೋ ಭರ್ಜರಿ ವೈರಲ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 13, 2026 10:07 AM

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಮನರಂಜನೆಯ ಜೊತೆಗೆ ವಿವಾದಗಳೂ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಪರ್ಧಿ ಸೌಂದರ್ಯ ಶೆಟ್ಟಿ ಅವರ ಪಂಚಿಂಗ್‌ ಡೈಲಾಗ್‌ಗಳು, ಕೌಂಟರ್‌ಗಳು ಹಾಗೂ ಸಹ ಸ್ಪರ್ಧಿಗಳನ್ನು ಕೆಣಕುವ ವಿಭಿನ್ನ ಶೈಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಟಾಸ್ಕ್‌ ವೇಳೆ ಗಾಯಗೊಂಡ ಸೌಂದರ್ಯ ಶೆಟ್ಟಿ (Soundarya shetty) ಅವರು ಬಿಗ್‌ ಬಾಸ್‌ ಮನೆಯ ವೈದ್ಯರ ಬಳಿ ಮಾಡಿದ ಡ್ರಾಮಾ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.ನನಗೆ ಹಾವು ಕಚ್ಚಿದೆ ಡಾಕ್ಟರ್‌. ಬೇಗ ಚಿಕಿತ್ಸೆ ಕೊಡಿ ಎಂದು ಹೈಡ್ರಾಮಾ ಮಾಡಿದ್ದಾರೆ.

ಬಣ್ಣ ಹಚ್ಚು ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿಗೆ ಗಾಯ

ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಬಣ್ಣ ಹಚ್ಚು ಟಾಸ್ಕ್‌ ವೇಳೆ ಸೌಂದರ್ಯ ಶೆಟ್ಟಿ ಹಾಗೂ ಗಾನವಿ ಗೌಡ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಗಾನವಿ ಗೌಡ ಅವರ ಹಲ್ಲು ತಾಗಿ ಸೌಂದರ್ಯ ಶೆಟ್ಟಿ ಅವರಿಗೆ ಸಣ್ಣ ಗಾಯವಾಗಿದೆ. ಮತ್ತೊಂದೆಡೆ, ಗಾನವಿ ಗೌಡ ಅವರೂ ಸುಮಾರು 20 ನಿಮಿಷಗಳ ಕಾಲ ಟಾಸ್ಕ್‌ನಿಂದ ದೂರ ಉಳಿದಿದ್ದು, ತಲೆಸುತ್ತಿ ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Bigg Boss Kannada 13: ಯಶಸ್ ವಿರುದ್ಧ ಆಸಿಯಾ ಗರಂ; ಸ್ನೇಹ ಅಂತ್ಯ!

ನಂತರ ವೈದ್ಯರ ಬಳಿ ತೆರಳಿದ ಗಾನವಿ ಗೌಡ, ತಮಗೆ ಏನೂ ನೆನಪಿಲ್ಲ, ತಾವು ಯಾಕೆ ಡಾಕ್ಟರ್‌ ಬಳಿ ಬಂದಿದ್ದೇವೆ ಎಂಬುದೇ ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತಿಸಿದ್ದಾರೆ. ಅವರ ಈ ವರ್ತನೆಯನ್ನು ಪ್ರಶಾಂತ್‌ ಮತ್ತು ಕಿರಣ್‌ ಶಾಸ್ತ್ರಿ ಕೂಡ ನಂಬಿದಂತೆ ಕಂಡುಬಂದಿದೆ.

'ನನಗೆ ಹಾವು ಕಚ್ಚಿದೆ ಡಾಕ್ಟರ್‌!' ಎಂದ ಶೆಟ್ಟಿ ಡಾನ್

ಗಾನವಿ ಗೌಡ ಅವರ ವರ್ತನೆಯನ್ನು ಗಮನಿಸಿದ ಸೌಂದರ್ಯ ಶೆಟ್ಟಿ, ವೈದ್ಯರ ಮುಂದೆ ತಮಾಷೆಯ ರೀತಿಯಲ್ಲಿ ಗಾನವಿಯನ್ನು ಅಣಕಿಸಿದ್ದಾರೆ.

"ನನಗೆ ಹಾವು ಕಚ್ಚಿದೆ ಡಾಕ್ಟರ್‌. ಬೇಗ ಚಿಕಿತ್ಸೆ ಕೊಡಿ. ಬಿಗ್‌ ಬಾಸ್‌ ಮನೆಯ ಹಾವು ಇದು. ನನ್ನನ್ನು ನಾನು ಬಚಾವ್‌ ಮಾಡಿಕೊಂಡು ಆಟ ಆಡುತ್ತಿದ್ದೆ, ಆದರೆ ಆ ಹಾವು ಕಚ್ಚಿದೆ. ನನಗೆ ಫುಲ್‌ ತಲೆನೋವು ಆಗುತ್ತಿದೆ. ಗಾಯ ಚಿಕ್ಕದಾದರೂ ಬ್ಯಾಂಡೇಜ್‌ ದೊಡ್ಡದಾಗಿ ಹಾಕಿ. ಆ ಹಾವಿಗೆ ನಾನು ತೋರಿಸಬೇಕು. ಏಕೆಂದರೆ ಕಚ್ಚಿದ್ದು ನನಗೆ, ಆದರೆ ಮತಿಭ್ರಮಣೆ ಆಗಿರುವುದು ಆ ಹಾವಿಗೆ" ಎಂದು ಸೌಂದರ್ಯ ಶೆಟ್ಟಿ ಪಂಚಿಂಗ್‌ ಡೈಲಾಗ್‌ ಹೊಡೆದಿದ್ದಾರೆ.

ಗಾನವಿ ಗೌಡ ಅವರ ವರ್ತನೆಯನ್ನು ಪರೋಕ್ಷವಾಗಿ ಟೀಕಿಸುತ್ತಲೇ ವೈದ್ಯರ ಮುಂದೆ ಸೌಂದರ್ಯ ಮಾಡಿದ ಈ ಕಾಮಿಡಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ.

ಇದನ್ನೂ ಓದಿ: Bigg Boss Kannada 13: ಸೌಂದರ್ಯಾಗೆ ಉರಿಸಿದ ಆಸಿಯಾ; ಮನೆಯಲ್ಲಿ ಮೈತ್ರಿ ಧಗ ಧಗ!

ಇಷ್ಟಕ್ಕೇ ಸುಮ್ಮನಾಗದ ಸೌಂದರ್ಯ ಶೆಟ್ಟಿ, ಗಾನವಿ ಗೌಡ ಅವರ ವರ್ತನೆಯ ಹಿಂದಿನ ಕಾರಣವನ್ನೂ ವಿವರಿಸಿದ್ದಾರೆ. ಟಾಸ್ಕ್‌ನಲ್ಲಿ ಆಡಲು ಸಾಧ್ಯವಾಗದಿದ್ದಾಗ ಅಥವಾ ಸೋಲುವ ಭಯ ಎದುರಾದಾಗ ಗಾನವಿ ಈ ರೀತಿಯ ನಾಟಕ ಮಾಡುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.