ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿರಂಜೀವಿ ಸಿನಿಮಾಕ್ಕೂ ದ್ವೇಷಿಗಳಿದ್ದಾರಾ? ʻಡೆವಿಲ್‌ʼ, ʻಮಾರ್ಕ್‌ʼ, ʻ45ʼ ಹಾದಿಯನ್ನೇ ತುಳಿದ ʻಮನ ಶಂಕರ ವರಪ್ರಸಾದ್‌ ಗಾರುʼ!

Mega Star Chiranjeevi: ಬಹುನಿರೀಕ್ಷಿತ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಕನ್ನಡದ 'ಡೆವಿಲ್' ಮತ್ತು '45' ಸಿನಿಮಾಗಳಂತೆ, ಈ ಚಿತ್ರಕ್ಕೂ ಬುಕ್‌ಮೈಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆ ನೀಡದಂತೆ ಕೋರ್ಟ್ ತಡೆಯಾಜ್ಞೆ ತಂದಿದೆ.

ಚಿರಂಜೀವಿ ಹೊಸ ಚಿತ್ರಕ್ಕೆ ನೆಗೆಟಿವ್ ರೇಟಿಂಗ್ ಕೊಡುವವರಿಗೆ ಶಾಕ್!

-

Avinash GR
Avinash GR Jan 11, 2026 3:01 PM

ʻಮೆಗಾ ಸ್ಟಾರ್‌ʼ ಚಿರಂಜೀವಿ ಅವರ ʻಮನ ಶಂಕರ ವರಪ್ರಸಾದ್‌ ಗಾರುʼ ಸಿನಿಮಾವು ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬರುತ್ತಿದೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಯಾಕೆಂದರೆ, ಇದನ್ನು ನಿರ್ದೇಶಿಸಿರುವುದು ಅನಿಲ್‌ ರವಿಪುಡಿ. ರಾಜಮೌಳಿ ಬಳಿಕ ತೆಲುಗಿನಲ್ಲಿ ಒಂದೇ ಒಂದು ಫ್ಲಾಪ್‌ ಸಿನಿಮಾ ಕೊಡದ ನಿರ್ದೇಶಕ ಇವರು. ಸದ್ಯ ʻಮನ ಶಂಕರ ವರಪ್ರಸಾದ್‌ ಗಾರುʼ ಚಿತ್ರತಂಡ ಒಂದು ನಿರ್ಧಾರದಿಂದ ಎಲ್ಲರ ಗಮನಸೆಳೆದಿದೆ.

ಕನ್ನಡ ಸಿನಿಮಾಗಳ ಹಾದಿ ತುಳಿದಿ ತೆಲುಗು ಸಿನಿಮಾ

ಕಳೆದ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ 45, ಡೆವಿಲ್‌, ಮಾರ್ಕ್‌ ಸಿನಿಮಾಗಳು ಒಂದು ವಿಚಾರಕ್ಕೆ ಭಾರಿ ಚರ್ಚೆ ಆಗಿದ್ದವು. ಅದೇನಪ್ಪ ಅಂದ್ರೆ, ಬುಕ್‌ ಮೈ ಶೋನಲ್ಲಿ ಈ ಸಿನಿಮಾಗಳನ್ನು ರಿವ್ಯೂ ಮಾಡುವುದಾಗಲಿ, ರೇಟಿಂಗ ನೀಡುವುದಾಗಲಿ ಮಾಡುವಂತಿಲ್ಲ ಎಂದು ಕೋರ್ಟ್‌ನಿಂದ ಆರ್ಡರ್‌ ತರಲಾಗಿತ್ತು. ಸಿನಿಮಾಗಳಿಗೆ ಬೇಕೆಂದೇ ನೆಗೆಟಿವ್‌ ರಿವ್ಯೂ ಕೊಡುವ ಒಂದು ವರ್ಗ ಇದೆ. ಅದರಿಂದ ಮುಕ್ತಿ ಪಡೆಯಲು ಚಿತ್ರತಂಡ ಈ ನಿರ್ಧಾರ ಮಾಡಿತ್ತು. ಇದೀಗ ಅದನ್ನೇ ತೆಲುಗು ಸಿನಿಮಾ ʻಮನ ಶಂಕರ ವರಪ್ರಸಾದ್‌ ಗಾರುʼ ಚಿತ್ರತಂಡ ಕೂಡ ಫಾಲೋ ಮಾಡಿದೆ.

KVN Productions: ಟಾಲಿವುಡ್‌ಗೆ ಕಾಲಿಟ್ಟ ಕೆವಿಎನ್‌ ಪ್ರೊಡಕ್ಷನ್ಸ್‌; ಚಿರಂಜೀವಿ ನಟನೆಯ ಚಿತ್ರ ನಿರ್ಮಾಣ

ʻಮನ ಶಂಕರ ವರಪ್ರಸಾದ್‌ ಗಾರುʼ ರಿವ್ಯೂ ಮಾಡುವಂತಿಲ್ಲ

ಹೌದು, ಬುಕ್‌ ಮೈ ಶೋನಲ್ಲಿ ʻಮನ ಶಂಕರ ವರಪ್ರಸಾದ್‌ ಗಾರುʼ ಚಿತ್ರತಂಡವು ಯಾವುದೇ ರೀತಿಯ ರಿವ್ಯೂ ಮಾಡುವಂತಿಲ್ಲ ಮತ್ತು ರೇಟಿಂಗ್‌ ನೀಡುವಂತಿಲ್ಲ ಎಂದು ಕೋರ್ಟ್‌ನಿಂದ ಆರ್ಡರ್‌ ತಂದಿದೆ. ಅಷ್ಟಕ್ಕೂ ಈ ರೀತಿ ಮಾಡಿದ್ದೇಕೆ? ತೆಲುಗಿನಲ್ಲೂ ಚಿರು ಸಿನಿಮಾವನ್ನು ಸೋಲಿಸುವುದಕ್ಕೆ ಒಂದಷ್ಟು ರೆಡಿಯಾಗಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಸ್ಯಾಂಡಲ್‌ವುಡ್‌ನ ಮೂರು ದೊಡ್ಡ ಸಿನಿಮಾಗಳು ತೆಗೆದುಕೊಂಡ ನಿರ್ಧಾರವನ್ನೇ ಈಗ ತೆಲುಗು ಸಿನಿಮಾಗಳು ಕೂಡ ಫಾಲೋ ಮಾಡುತ್ತಿವೆ. ಒಟ್ಟಿನಲ್ಲಿ ಒಂದು ಸಿನಿಮಾವನ್ನು ಬೇಕೆಂದೇ ನೆಗೆಟಿವ್‌ ಮಾಡುವ ಒಂದು ವರ್ಗ ಇರುವುದು ನಿಜಕ್ಕೂ ದುರದೃಷ್ಟಕರ ಎನ್ನಬಹುದು.

Chiranjeevi: ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿ ವಿವಾದಕ್ಕೀಡಾದ ಮೆಗಾಸ್ಟಾರ್‌ ಚಿರಂಜೀವಿ

ಇನ್ನು, ʻಮನ ಶಂಕರ ವರಪ್ರಸಾದ್‌ ಗಾರುʼ ಚಿತ್ರದ ಬಗ್ಗೆ ಹೇಳಬೇಕೆಂದರೆ, ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾವನ್ನು ಚಿರು ಪುತ್ರಿ ಸುಷ್ಮಿತಾ ಕೊನಿಡೆಲಾ ಹಾಗೂ ಸಾಹು ಗರ್ರಾಪಾಟಿ ನಿರ್ಮಾಣ ಮಾಡಿದ್ದಾರೆ. ಭೀಮ್ಸ್‌ ಸಂಗೀತ ನೀಡಿದ್ದು, ತೆಲುಗು ನಟ ವಿಕ್ಟರಿ ವೆಂಕಟೇಶ್‌ ಕೂಡ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.