Ekam OTT: ಏಳು ಕಥೆಗಳ ಒಂದು ಸುಂದರ ಪ್ರಯಾಣ; ಒಟಿಟಿಗೆ ಬಂದಿದೆ ಏಕಂ ಸಿರೀಸ್!
Raj B shetty: ಏಕಂ ಚಿತ್ರದಲ್ಲಿ ಹಲವಾರು ಕಥೆಗಳಿವೆ. ಇದು ಬೇರೆ ರೀತಿಯ ಚಿತ್ರವೇ ಆಗಿದೆ. ಕರಾವಳಿ ಸೊಡಗಿನ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಇದ್ದಾರೆ. ಕಥಾ ಸಂಗ್ರಹವನ್ನು ಹೊಂದಿರುವ "ಏಕಂ" ಎಂಬ ವೆಬ್ ಸರಣಿ ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿದೆ."ಏಕಂ" ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ ಕರ್ನಾಟಕದಲ್ಲಿ ನಡೆಯುವ 7 ವಿವಿಧ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.
ಏಕಂ ಒಟಿಟಿ -
ಏಕಂ (Ekam Kannada Web Series) ಚಿತ್ರದಲ್ಲಿ ಹಲವಾರು ಕಥೆಗಳಿವೆ. ಇದು ಬೇರೆ ರೀತಿಯ ಚಿತ್ರವೇ ಆಗಿದೆ. ಕರಾವಳಿ ಸೊಡಗಿನ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ (Raj B Shetty) ಇದ್ದಾರೆ. ಕಥಾ ಸಂಗ್ರಹವನ್ನು ಹೊಂದಿರುವ "ಏಕಂ" ಎಂಬ ವೆಬ್ ಸರಣಿ ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿದೆ."ಏಕಂ" ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ (Karavali) ಕರ್ನಾಟಕದಲ್ಲಿ ನಡೆಯುವ 7 ವಿವಿಧ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.
ಎಲ್ಲಿ ಸ್ಟ್ರೀಮಿಂಗ್?
ಈ ವೆಬ್ ಸರಣಿಯು ಬಹು ತಾರಾಗಣವನ್ನು ಹೊಂದಿದೆ. ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ, ಶೈನ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಕಿಶೋರ್ ಕುಮಾರ್ ಜಿ ಮುಂತಾದವರು ನಟಿಸಿರುವ ಈ ಕಥಾ ಸಂಗ್ರಹವನ್ನು ಸುಮಂತ್ ಭಟ್, ಶಂಕರ್ ಗಂಗಾಧರನ್, ವಿವೇಕ್ ವಿನೋದ್, ಜಿಷ್ಣು ಚಟರ್ಜಿ, ಸ್ವರೂಪ್ ಎಲಾಮನ್ ಮತ್ತು ಸನಲ್ ಅಮನ್ ನಿರ್ದೇಶಿಸಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿಯ "ಪರಂವಃ ಸ್ಟೂಡಿಯೋಸ್" ನಿರ್ಮಾಣದ "ಏಕಂ" ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಸಿಕ್ಕೇ ಬಿಡ್ತು ಬಂಪರ್ ಆಫರ್!
ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಈ ಮುಂಚೆ ‘ಏಕಂ’ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. ‘ಏಕಂ’ ನಿಮಗೆ ಇಷ್ಟವಾಗಬಹುದು. ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ. ನಂಬಿದ್ದೇನೆ.
‘ಏಕಂ’ ಒಂದು ಶ್ಲಾಘನೀಯ ಪ್ರಯತ್ನ. ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನ ಸ್ವೀಕರಿಸುತ್ತೀರಿ ಎಂದು ಆಶಿಸುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Bigg Boss Kannada 12: ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್! ಬಿಗ್ ಬಾಸ್ನಿಂದ ರಾಶಿಕಾ ಶೆಟ್ಟಿ ಔಟ್
ಸುಮಂತ್ ಭಟ್ ಸೇರಿ ಐದು ಡೈರೆಕ್ಟರ್ಸ್ ಈ ಚಿತ್ರದ ಕಥೆಗಳನ್ನ ಡೈರೆಕ್ಷನ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಚಿತ್ರವನ್ನ ಪರಂವಃ ಪಿಕ್ಚರ್ಸ್ ಮೂಲಕವೇ ಪ್ರೆಸೆಂಟ್ ಮಾಡಿದ್ದಾರೆ.ಏಕಂ ಚಿತ್ರ 2024 ರಲ್ಲಿ ರಿಲೀಸ್ ಆಗಿದೆ. ಜುಲೈ-13 ರಂದು ಇದು ಬಿಡುಗಡೆ ಆಗಿದೆ. ಆದರೆ, ಈ ಚಿತ್ರ ಥಿಯೇಟರ್‌ಗೆ ಬಂದಿಲ್ಲ. ಬದಲಾಗಿ www.ekamtheseries.com ಅಲ್ಲಿಯೇ ಈ ಚಿತ್ರ ಪದರ್ಶನ ಆಗಿದೆ.