ʻಕೆಜಿಎಫ್ʼ ರೈಟರ್ ಸಿನಿಮಾಗೆ ಸಾಥ್ ನೀಡಿದ ಬಾಲಿವುಡ್‌ನ ರೆಮೋ ಡಿಸೋಜಾ; ದುಬೈನಲ್ಲಿ ಕನ್ನಡದ 'ವೈಲ್ಡ್ ಟೈಗರ್ ಸಫಾರಿ' ಟೀಸರ್ ರಿಲೀಸ್!
Wild Tiger Safari Update: 'ಕೆಜಿಎಫ್' ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನದ 'ವೈಲ್ಡ್ ಟೈಗರ್ ಸಫಾರಿ' ಚಿತ್ರದ ಟೀಸರ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬಾಲಿವುಡ್ ನಿರ್ದೇಶಕ ರೆಮೋ ಡಿಸೋಜಾ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
-
'ಕೆಜಿಎಫ್' ಸಿನಿಮಾದ ಡೈಲಾಗ್ ರೈಟರ್ ಚಂದ್ರಮೌಳಿ ನಿರ್ದೇಶನದ "ವೈಲ್ಡ್ ಟೈಗರ್ ಸಫಾರಿ" ಅನ್ನೋ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಶೀಥಿಲ್ ಪೂಜಾರಿ ಹೀರೋ ಆಗಿದ್ದು, ನಾಯಕಿಯಾಗಿ ನಟಿ ನಿಮಿಕಾ ರತ್ಮಾಕರ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ, ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ವಿ ಕೆ ಫಿಲ್ಮ್ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿಬಂದಿದ್ದು ದುಬೈನಲ್ಲೇ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕುಮಾರ್, ಪ್ರಸನ್ನ ಕುಮಾರ್, ಗುರುದತ್ ಗಾಣಿಗ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.
"ವೈಲ್ಡ್ ಟೈಗರ್ ಸಫಾರಿ" ತಂಡವು ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದೆ. ಈ ಮಧ್ಯೆ ದುಬೈನ ಸುಪ್ರಸಿದ್ಧ ಗ್ಲೋಬಲ್ ವಿಲೇಜ್‌ನಲ್ಲಿ ಅದ್ದೂರಿಯಾಗಿ "ವೈಲ್ಡ್ ಟೈಗರ್ ಸಫಾರಿ" ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ.
Ravi Basrur : ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! Jr NTR, ಪ್ರಶಾಂತ್ ಸಿನಿಮಾ ಬಗ್ಗೆ ರವಿ ಬಸ್ರೂರ್ ಹೇಳಿದ್ದೇನು?
ಸಾಥ್ ನೀಡಿದ ನಿರ್ದೇಶಕ ರೆಮೋ ಡಿಸೋಜಾ
ಕನ್ನಡದ ವೈಲ್ಡ್ ಟೈಗರ್ ಸಫಾರಿ ಸಿನಿಮಾದ ಟೀಸರ್ ನೋಡಿ ಫಿದಾ ಆಗಿರುವ ಬಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಮತ್ತು ಸಿನಿಮಾ ನಿರ್ದೇಶಕ ರೆಮೋ ಡಿಸೋಜಾ ಅವರು ಸ್ವತಃ ಅವರೇ ಅದನ್ನು ರಿಲೀಸ್ ಮಾಡಿದ್ದಾರೆ. ಅಂದಹಾಗೆ, ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಕನ್ನಡದ ಒಂದು ಸಿನಿಮಾ ಇವೆಂಟ್ ನಡೆರುವುದು ಇದೇ ಮೊದಲು. ಬಾಲಿವುಡ್‌ನ ಯಾವ ಸ್ಟಾರ್‌ಗಳಿಗೂ ಸಿಗದ ಈ ಜಾಗ ಕನ್ನಡದ "ವೈಲ್ಡ್ ಟೈಗರ್ ಸಫಾರಿ" ಟೀಸರ್ ಲಾಂಚ್‌ಗೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎನ್ನುತ್ತದೆ ಚಿತ್ರತಂಡ.
ಈ ಚಿತ್ರದಲ್ಲಿ ನಟಿಸಿದ್ದಾರೆ ಬಾಲಿವುಡ್ ಕಲಾವಿದರು
ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ನಾಯಕ ಶಿಥಿಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡುತ್ತಿದ್ದರೆ ಗೊತ್ತಾಗುತ್ತೆ ಇದೊಂದು ಪಕ್ಕ ಆಕ್ಷನ್ ಸಿನಿಮಾ ಅಂತ. ಇದೊಂದು ಆಕ್ಷನ್ ರಿವೇಂಜ್ ಕಥೆ ಒಳಗೊಡಿರುವ ಸಿನಿಮಾ. ಈ ಸಿನಿಮಾದಲ್ಲಿ ಕೆಜಿಎಫ್ ಸಿನಿಮಾದಲ್ಲಿ ಮಿಂಚಿದ್ದ ನಟ ಅವಿನಾಶ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಬಾಲಿವುಡ್‌ನಲ್ಲಿ ನಟರಾಗಿ ಹಾಗೂ ನ್ಯತ್ಯ ಸಂಯೋಜಕರಾಗಿ ಪ್ರಖ್ಯಾತಿ ಹೊಂದಿರೋ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿ ಕೂಡ ಕಾಣಿಸಿಕೊಂಡಿದ್ದಾರೆ.
ಇನ್ನೂ ವಿಶೇಷ ಎಂದರೆ ಬಾಲಿವುಡ್‌ನ ಸೂಪರ್ ಹಿಟ್ "ಎಬಿಸಿಡಿ" ಸಿನಿಮಾದಲ್ಲಿ ನಟಿಸಿರುವ ಕೆಲವು ಕಲಾವಿದರು ಕೂಡ ಕನ್ನಡದ ಟೈಗರ್ ಸಫಾರಿಯಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ನೀಡಿದ್ದು, ಸದ್ಯ ಪ್ರಚಾರಚಾರ್ಯದಲ್ಲಿ ತೊಡಗಿರುವ ವೈಲ್ಡ್ ಟೈಗರ್ ಸಫಾರಿ ಚಿತ್ರತಂಡ, ಶೀಘ್ರದಲ್ಲೇ ಈ ಸಿನಿಮಾವನ್ನು ತೆರೆಕಾಣಿಸಲಿದೆ.