ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss 12: ʻನನಗೆ ರೇಗಿಸಬೇಡ, ಅದು ನಂಗೆ ಇಷ್ಟ ಆಗಲ್ಲʼ; ಫಿನಾಲೆ ಹೊಸ್ತಿಲಲ್ಲಿ ಗಿಲ್ಲಿಗೆ ಕಾವ್ಯ ಶೈವ ಖಡಕ್ ವಾರ್ನಿಂಗ್!

Bigg Boss Kannada Season 12: ಬಿಗ್‌ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ. 'ಸೂಪರ್ ಸಂಡೇ' ಸಂಚಿಕೆಯಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನ ವಿರುದ್ಧ ಸಿಡಿದೆದ್ದಿದ್ದಾರೆ. "ನನ್ನನ್ನು ರೇಗಿಸಬೇಡ, ಅದು ನನಗೆ ಇಷ್ಟ ಆಗಲ್ಲ" ಎಂದು ಸುದೀಪ್ ಎದುರೇ ನೇರವಾಗಿ ಹೇಳುವ ಮೂಲಕ ಶಾಕ್ ನೀಡಿದ್ದಾರೆ.

ಬಿಗ್ ಬಾಸ್ 12: ಸುದೀಪ್ ಎದುರೇ ಹೈಡ್ರಾಮಾ! ಗಿಲ್ಲಿಗೆ ಕಾವ್ಯ ವಾರ್ನಿಂಗ್‌

-

Avinash GR
Avinash GR Jan 11, 2026 2:02 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಕೊನೆಯ ಸೂಪರ್‌ ಸಂಡೇ ವಿತ್‌ ಬಾದ್‌ಷಾ ಸುದೀಪ ಸಂಚಿಕೆ ಮೇಲೆ ಭಾರಿ ಕುತೂಹಲ ಮೂಡಿದೆ. ಕಾರಣ, ಕಲರ್ಸ್‌ ಕನ್ನಡ ವಾಹಿನಿ ರಿಲೀಸ್‌ ಮಾಡುತ್ತಿರುವ ಪ್ರೋಮೋಗಳು. ಮೊದಲನೇ ಪ್ರೋಮೋದಲ್ಲಿ ಲಿಂಬು, ವ್ಯಾಕ್ಸ್‌ ಮತ್ತಿತ್ತರ ವಸ್ತುಗಳನ್ನು ತೊಂದರೆ ಕೊಟ್ಟ ಸ್ಪರ್ಧಿಗಳಿಗೆ ಅದನ್ನ ಕೊಡಬೇಕು ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಅದಂತೂ ಮಸ್ತ್‌ ಆಗಿದೆ. ಇದೀಗ ಎರಡನೇ ಪ್ರೋಮೋ ರಿಲೀಸ್‌ ಆಗಿದ್ದು, ಇದರಲ್ಲಿ ಶಾಕಿಂಗ್‌ ಟ್ವಿಸ್ಟ್‌ ಇದೆ.

ಹಳೆಯ ನೆನಪುಗಳಿಗೆ ಮರಳಿದ ಸ್ಪರ್ಧಿಗಳು

ಫಿನಾಲೆ ಹತ್ರ ಇರುವುದರಿಂದ ಸ್ಪರ್ಧಿಗಳಿಗೆ ಸುದೀಪ್‌ ಅವರು ಒಂದು ಮಾತು ಕೇಳಿದ್ದಾರೆ. ಈ ಜರ್ನಿಯಲ್ಲಿ ಯಾವ ದಿನಕ್ಕೆ ನೀವು ವಾಪಸ್‌ ಹೋಗಬೇಕು ಅಂದುಕೊಂಡರೆ, ಯಾವ ದಿನಕ್ಕೆ ವಾಪಸ್‌ ಹೋಗುತ್ತೀರಿ ಎಂದು ಕೇಳಿದ್ದಾರೆ. ಆಗ ರಕ್ಷಿತಾ ಅವರು, "ನಾನು ಮೊದಲ ದಿನಕ್ಕೆ ವಾಪಸ್‌ ಹೋಗುತ್ತೇನೆ. ನಾನು ನನಗೋಸ್ಕರ ಮಾತನಾಡಬೇಕಿತ್ತು" ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ. 

Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್‌

ನಂತರ ಅಶ್ವಿನಿ ಗೌಡ ಅವರಿಗೆ, ಯಾವ ಸಿಚುಯೇಷನ್‌ ಅನ್ನು ಸರಿ ಮಾಡಿಸಲು ಆಸೆ ಪಡುತ್ತೀರಿ ಎಂದು ಸುದೀಪ್‌ ಕೇಳಿದ್ದಾರೆ. ಅದಕ್ಕೆ ಅಶ್ವಿನಿ, "ನನ್ನ ಮತ್ತು ರಕ್ಷಿತಾ ಮಧ್ಯೆ ಹಲವಾರು ವಿಚಾರಗಳಾಯ್ತು. ಈ ವೇದಿಕೆಯಿಂದ ಹೊರಗೆ ಹೋಗುವುದಕ್ಕಿಂತ ಮುಂಚೆ ನಾನು ಕ್ಷಮೆ ಕೇಳುತ್ತೇನೆ" ಎಂದು ರಕ್ಷಿತಾಗೆ ಅಶ್ವಿನಿ ಗೌಡ ಕ್ಷಮೆ ಕೇಳಿದ್ದಾರೆ.

ಬಿಗ್‌ ಬಾಸ್‌ ಹೊಸ ಪ್ರೋಮೋ



ಕಾವ್ಯ ಕೊಟ್ರು ನೋಡಿ ಶಾಕಿಂಗ್‌ ಟ್ವಿಸ್ಟ್‌

ನಂತರ ಮಾತನಾಡಿದ ಕಾವ್ಯ ಶೈವ, ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. "ನನಗೆ ರೇಗಿಸುವುದಕ್ಕೆ ನಾನು ಅವಕಾಶ ನೀಡಿದೆ, ಅದನ್ನು ನಾನು ಆರಂಭದಲ್ಲೇ ನಿಲ್ಲಿಸಬೇಕಿತ್ತು. ಇಲ್ಲ ಅಂದಿದ್ರೆ ಅದು ಇಷ್ಟವರೆಗೆ ಬರುತ್ತಿರಲಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ. "ಗಿಲ್ಲಿ ನನಗೆ ಈ ಥರ ಎಲ್ಲಾ ರೇಗಿಸಬೇಡ, ಅದು ನನಗೆ ಇಷ್ಟ ಆಗಲ್ಲ" ಎಂದು ನೇರವಾಗಿ ಹೇಳಿದ್ದಾರೆ ಗಿಲ್ಲಿ ನಟನ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಅಲ್ಲಿಗೆ ಈ ಪ್ರೋಮೋ ಮುಕ್ತಾಯವಾಗಿದೆ. ಇದೀಗ ಎಲ್ಲರ ಕಣ್ಣು ಗಿಲ್ಲಿ ಮೇಲಿದೆ. ಗಿಲ್ಲಿ ಏನು ಹೇಳಬಹುದು? ಯಾವ ಥರ ಕೌಂಟರ್‌ ಕೊಡಬಹುದು ಎಂಬ ನಿರೀಕ್ಷೆ ವೀಕ್ಷಕರಲ್ಲಿ ಇದೆ. ಇಂದಿನ ಸಂಚಿಕೆಯಲ್ಲಿ ಅದು ಗೊತ್ತಾಗಲಿದೆ.