ಕಿವೀಸ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ
IND vs NZ Odi: ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 25 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28 ಸಾವಿರ ರನ್ ಪೂರೈಸಿದ ವಿಶ್ವದ 3ನೇ ಬ್ಯಾಟರ್ ಎನಿಸಲಿದ್ದಾರೆ. ಟೆಸ್ಟ್, ಏಕದಿನ, ಟಿ20ಯಲ್ಲಿ ಅವರು ಇದುವರೆಗೆ 623 ಇನಿಂಗ್ಸ್ಗಳಲ್ಲಿ 27,975 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ -
ವಡೋದರಾ, ಜ.11: ನ್ಯೂಜಿಲ್ಯಾಂಡ್(IND vs NZ Odi) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿಳಿಯುವ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ನೂತನ ಮೈಲುಗಲ್ಲೊಂದು ತಲುಪಿದರು. ಭಾರತ ಪರ ಅತ್ಯಧಿಕ ಏಕದಿನ ಕ್ರಿಕೆಟ್ ಪಂದ್ಯವನ್ನಾಡಿದ 5ನೇ ಕ್ರಿಕೆಟಿಗ ಎನಿಸಿಕೊಂಡರು.
ವಿರಾಟ್ ಕೊಹ್ಲಿಗೆ ಇದು 309*ನೇ ಏಕದಿನ ಪಂದ್ಯ. ಈ ವೇಳೆ ಅವರು ಸೌರವ್ ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದರು. ಗಂಗೂಲಿ 308 ಪಂದ್ಯ ಆಡಿದ್ದರು. ಅತ್ಯಧಿಕ ಪಂದ್ಯ ಆಡಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 463 ಪಂದ್ಯ ಆಡಿದ್ದಾರೆ.
ಭಾರತ ಪರ ಅತಿ ಹೆಚ್ಚು ಏಕದಿನ ಪಂದ್ಯಗಳು
ಸಚಿನ್ ತೆಂಡೂಲ್ಕರ್- 463
ಎಂ.ಎಸ್. ಧೋನಿ- 347
ರಾಹುಲ್ ದ್ರಾವಿಡ್- 340
ಎಂ. ಅಜರುದ್ದೀನ್- 334
ವಿರಾಟ್ ಕೊಹ್ಲಿ- 309*
ಸೌರವ್ ಗಂಗೂಲಿ- 308
ಭಾರತ ಕ್ರಿಕೆಟ್ ಇತಿಹಾಸ ಎಂದೂ ಮರೆಯಲಾಗದ ಮಹಾಗೋಡೆ ದ್ರಾವಿಡ್‌ಗೆ 53ರ ಸಂಭ್ರಮ
ಮತ್ತೊಂದು ದಾಖಲೆ ಮೇಲೆ ಕೊಹ್ಲಿ ಕಣ್ಣು
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 25 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28 ಸಾವಿರ ರನ್ ಪೂರೈಸಿದ ವಿಶ್ವದ 3ನೇ ಬ್ಯಾಟರ್ ಎನಿಸಲಿದ್ದಾರೆ. ಟೆಸ್ಟ್, ಏಕದಿನ, ಟಿ20ಯಲ್ಲಿ ಅವರು ಇದುವರೆಗೆ 623 ಇನಿಂಗ್ಸ್ಗಳಲ್ಲಿ 27,975 ರನ್ ಗಳಿಸಿದ್ದಾರೆ. ಅಲ್ಲದೆ ಅವರು 42 ರನ್ ಗಳಿಸಿದರೆ ಶ್ರೀಲಂಕಾದ ಕುಮಾರ್ ಸಂಗಕ್ಕರರನ್ನು (28,016) ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2ನೇ ಗರಿಷ್ಠ ರನ್ಸ್ಕೋರರ್ ಎನಿಸಲಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ (34,357) ಅಗ್ರಸ್ಥಾನದಲ್ಲಿದ್ದಾರೆ.
ಟಾಸ್ ಗೆದ್ದ ಭಾರತ
ಭಾರತ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. 2023 ರ ಏಕದಿನ ವಿಶ್ವಪ್ ಫೈನಲ್‌ನೊಂದಿಗೆ ಪ್ರಾರಂಭವಾದ 20 ಸತತ ಟಾಸ್ ಸೋಲು ಕಂಡಿತ್ತು. ಆದರೆ ವರ್ಷದ ಮೊದಲ ಸರಣಿಯಲ್ಲಿಯೇ ಟಾಸ್ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.
my heart smiles quietly when Kohli appears. pic.twitter.com/77JjXMTMTL
— ` (@RCB_HIvv3) January 11, 2026
ಉಭಯ ಆಡುವ ಬಳಗ
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆ), ಮೈಕೆಲ್ ಬ್ರೇಸ್‌ವೆಲ್(ಸಿ), ಜಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ಸಿ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯೂ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.